ನಾಳೆ 16 ಸಾವಿರ ಉದ್ಯೋಗಿಗಳ ಕಿತ್ತು ಹಾಕಲಿದೆ ಅಮೇಜಾನ್, ಜನವರಿ 27 ರಿಂದ ಅಮೇಜಾನ್ ಉದ್ಯೋಗ ಕಡಿತ ಆರಂಭಗೊಳ್ಳುತ್ತಿದೆ. ಈ ಬಾರಿ ಭಾರತದಲ್ಲೇ ಅತೀ ಹೆಚ್ಚು ಉದ್ಯೋಗ ಕಡಿತಗಳು ನಡೆಯಲಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಒಂದೆಡೆ ಹಲವು ದೇಶಗಳ ನಡುವಿನ ಯುದ್ಧ, ಅಮೆರಿಕದ ನೀತಿಗಳಿಂದ ದ್ವಿಪಕ್ಷೀಯ ಸಂಬಂಧ ಮಾತ್ರವಲ್ಲ ಜಾಗತಿಕ ವ್ಯಾಪಾರ ವಹಿವಾಟುಗಳ ಮೇಲಿನ ಪರಿಣಾಮ, ಆರ್ಥಿಕ ಹಿಂಜರಿತ ಸೇರಿದಂತೆ ಹಲವು ಅಡೆ ತಡೆಗಳ ನಡುವೆ ಇದೀಗ ಉದ್ಯೋಗ ಕಡಿತ ಆಘಾತ ಎದುರಾಗುತ್ತಿದೆ. ಹಲವು ಕಂಪನಿಗಳು ಈಗಾಗಲೇ ಉದ್ಯೋಗ ಕಡಿತ ಮಾಡುತ್ತಿದೆ. ಇದೀಗ ಅಮೇಜಾನ್ ಸರದಿ.
26
ಜ.27ಕ್ಕೆ 16000 ಉದ್ಯೋಗ ಕಡಿತ
ಜನವರಿ 27ಕ್ಕೆ ಅಮೇಜಾನ್ ಬರೋಬ್ಬರಿ 16,000 ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ. 2026ರ ಅಮೇಜಾನ್ ಉದ್ಯೋಗ ಕಡಿತ ನಾಳೆಯಿಂದ ಆರಂಭಗೊಳ್ಳುತ್ತಿದೆ. ಹಂತ ಹಂತವಾಗಿ ಉದ್ಯೋಗ ಕಡಿತ ಮುಂದುವರಿಯಲಿದೆ. ಇದೀಗ ಅಮೇಜಾನ್ ಉದ್ಯೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
36
ಭಾತದಲ್ಲೇ ಹೆಚ್ಚು ಕಡಿತ
ಈ ಬಾರಿ ಅಮೇಜಾನ್ ಉದ್ಯೋಗ ಕಡಿತ ಭಾರತದಲ್ಲೇ ಹೆಚ್ಚು ಸಮಸ್ಯೆ ತಂದೊಡ್ಡಲಿದೆ ಎಂದು ವರದಿಯಾಗಿದೆ. ಭಾರತೀಯ ತಂಡಗಳಿಂದಲೇ ಉದ್ಯೋಗ ಕಡಿತ ಹೆಚ್ಚು ನಡೆಯಲಿದೆ ಎನ್ನುತ್ತಿದೆ ವರದಿಗಳು. ಭಾರತದಲ್ಲಿ ಅಮೇಜಾನ್ ಉದ್ಯೋಗ ಕಡಿತ ಆರಂಭಗೊಳ್ಳುತ್ತಿದ್ದಂತೆ ಉದ್ಯೋಗ ಸಮಸ್ಸೆ ಮಾತ್ರವಲ್ಲ, ಮಾರುಕಟ್ಟೆ ಮೇಲೂ ಪರಿಣಾಮ ಬೀರಲಿದೆ.
ಅಮೇಜಾನ್ ವೆಬ್ ಸರ್ವೀಸ್ ((AWS), ಅಮೇಜಾನ್ ಪ್ರೈಮ್ ಸೇರಿದಂತೆ ಹಲವು ವಿಭಾಗದಲ್ಲಿ ಉದ್ಯೋಗ ಕಡಿತ ನಡೆಯಲಿದೆ. ಹಾಗಂತ ಅಮೇಜಾನ್ ಉದ್ಯೋಗ ಕಡಿತ 2025ರಲ್ಲೇ ಆರಂಭಗೊಂಡಿದೆ. ಈಗಾಗಲೇ 14,000 ಉದ್ಯೋಗಿಗಳನ್ನು ಅಮೇಜಾನ್ ಕೆಲಸದಿಂದ ತೆಗೆದು ಹಾಕಿದೆ.
56
2026ರ ಅಂತ್ಯಕ್ಕೆ 30,000 ಉದ್ಯೋಗ ಕಡಿತ
ಅಮೇಜಾನ್ 2026ರ ಅಂತ್ಯಕ್ಕೆ 30,000 ಉದ್ಯೋಗ ಕಡಿತ ಗೊಳ್ಳಲಿದೆ. ಈಗಾಗಲೇ ಕಡಿತಗೊಂಡಿರುವ 14 ಸಾವಿರ ಹಾಗೂ ಇದೀಗ ಕಡಿತಗೊಳ್ಳಲಿರುವ 16 ಸಾವಿರ ಒಟ್ಟು 30,000 ಸಾವಿರ ಅಮೇಜಾನ್ ನೌಕರರ ಉದ್ಯೋಗ ವಂಚಿತರಾಗಲಿದ್ದಾರೆ. ಅಮೇಜಾನ್ ಈಗಾಗಲೇ ರಿಸ್ಟ್ರಕ್ಚರ್ ಘೋಷಣೆ ಮಾಡಿದೆ.
66
2022-23ರಲ್ಲಿ 27,000 ಉದ್ಯೋಗ ಕಡಿತ
ಕೋವಿಡ್ ಹೊಡೆತದಿಂದ ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದ್ದಂತೆ ಅಮೇಜಾನ್ 2022-23ರ ಸಾಲಿನಲ್ಲಿ ಬರೋಬ್ಬರಿ 27,000 ಉದ್ಯೋಗ ಕಡಿತ ಮಾಡಿತ್ತು. ಅಮೇಜಾನ್ ವಿಶ್ವದಲ್ಲಿ 1.57 ಮಿಲಿಯನ್ ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ಕಾರ್ಪೋರೇಟ್ ನೌಕರರ ಸಂಖ್ಯೆ 350,000.