ಸೋನಿಯಾ ತವರಲ್ಲಿ ಮೋದಿ ಮೋಡಿ​: ಚಾಕಲೆಟ್​ ಗುಟ್ಟು ಕೊನೆಗೂ ರಟ್ಟು; ದಾಖಲೆ ಮೇಲೆ ದಾಖಲೆ ಬರೆದ ಪ್ರಧಾನಿ

Published : May 21, 2026, 05:01 PM IST

ಇಟಲಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪಾರ್ಲೆ ಮೆಲೋಡಿ ಚಾಕಲೇಟ್ ಉಡುಗೊರೆಯಾಗಿ ನೀಡಿದರು. ಈ ಘಟನೆಯ ವೈರಲ್ ರೀಲ್ ದಾಖಲೆ ಸೃಷ್ಟಿಸಿದ್ದಲ್ಲದೆ, 'ಮೇಕ್ ಇನ್ ಇಂಡಿಯಾ'ಗೆ ಉತ್ತೇಜನ ನೀಡಿ ಪಾರ್ಲೆ ಕಂಪನಿಯ ಶೇರು ಮೌಲ್ಯವನ್ನು 5% ಹೆಚ್ಚಿಸಿತು. 

PREV
15
ಸೋನಿಯಾ ತವರಲ್ಲಿ ಮೋದಿ ಧಮಾಕಾ

ಐದು ದೇಶಗಳ ಪ್ರವಾಸದ ಕೊನೆಯ ದೇಶವಾಗಿರುವ ಇಟಲಿಯಲ್ಲಿ ಪ್ರಧಾನಿ ಮೋದಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಟ್ಟರು. ವಿಪಕ್ಷಗಳ ಬಾಯಿಗೆ ಟ್ರೋಲ್​ ಕೂಡ ಆಗಿದ್ದು, ಸೋನಿಯಾಗಾಂಧಿ ತವರು ಇಟಲಿಯಲ್ಲಿ ಅಲ್ಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಚಾಕಲೇಟ್​ ಗಿಫ್ಟ್​ ಕೊಟ್ಟಿದ್ದು. ಪಾರ್ಲೆ ಕಂಪೆನಿಯ ಮೆಲೋಡಿ ಚಾಕ್‌ಲೇಟ್‌ನ್ನು ಉಡುಗೊರೆಯಾಗಿ ನೀಡಿದ್ದು, ಈ ಕುರಿತ ಇಬ್ಬರೂ ನಾಯಕರ ರೀಲ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

25
ಅಷ್ಟು ದಡ್ಡರಾ?

ರಾಹುಲ್​ ಗಾಂಧಿ ಸೇರಿದಂತೆ ಕಾಂಗ್ರೆಸ್​ ನಾಯಕರು, ಕಾಂಗ್ರೆಸ್​ ಬೆಂಬಲಿಗರು ಈ ರೀಲ್ಸ್​ ಬಗ್ಗೆ ಇನ್ನಿಲ್ಲದ ಟ್ರೋಲ್​ ಮಾಡುತ್ತಿದ್ದರೆ, ಇಟಲಿಯ ಜನರಂತೂ ಸಂತಸದಲ್ಲಿ ತೇಲಾಡಿದ್ದಾರೆ. ಈ ರೀತಿಯ ರೀಲ್ಸ್​ ಮಾಡಿದರೆ ಅದರ ಪ್ರಭಾವ ಹೇಗಿರುತ್ತದೆ ಎಂದು ಅರಿಯದಷ್ಟು ದಡ್ಡರಂತೂ ಪ್ರಧಾನಿ ಮೋದಿ ಅಲ್ಲವೇ ಅಲ್ಲ. ಹಾಗಿದ್ರೆ ಚಾಕಲೇಟ್​ ಗಿಫ್ಟ್​ ಕೊಟ್ಟ ಕಾರಣವೇ ಬೇರೆ ಇದೆ. ಚಾಕಲೇಟ್​ ಗಿಫ್ಟ್​ ಕೊಟ್ಟು ದಾಖಲೆ ಮೇಲೆ ದಾಖಲೆ ಬರೆದರು ಮೋದಿ.

35
ರೀಲ್ಸ್​ ದಾಖಲೆ

ಮೊದಲನೆಯದಾಗಿ, ಪ್ರಧಾನಿಗಳಾಧ ಮೋದಿ ಮತ್ತು ಜಾರ್ಜಿಯಾ ಅವರ ಈ ರೀಲ್ಸ್​ ದಾಖಲೆ ಬರೆದಿದೆ. ಇಟಲಿಯ ಜನಸಂಖ್ಯೆಯ ದುಪ್ಪಟ್ಟು ಜನ ಇದನ್ನು ವೀಕ್ಷಣೆ ಮಾಡಿದ್ದಾರೆ. ಇಟಲಿಯ ಜನಸಂಖ್ಯೆ 5 ಕೋಟಿ ಪ್ಲಸ್​ ಇದ್ದರೆ, ಈ ರೀಲ್ಸ್​ ಹಾಕಿದ ಕೆಲವೇ ಗಂಟೆಗಳಲ್ಲಿ 13 ಕೋಟಿಗೂ ಅಧಿಕ ಮಂದಿ ಈ ರೀಲ್ಸ್​ ನೋಡಿದ್ರು. ಅದು ದಾಖಲೆ ಬರೆದಿದೆ.

45
ಶೇರು ಮಾರುಕಟ್ಟೆ 5 ಪರ್ಸೆಂಟ್​ ಹೆಚ್ಚಳ!

ಅದಕ್ಕಿಂತಲೂ ಮುಖ್ಯವಾಗಿ, ಪ್ರಧಾನಿ ಮೋದಿ ಅವರ ಬಾಯಲ್ಲಿ ಸದಾ ಇರುವುದು ಮೇಕ್​ ಇನ್​ ಇಂಡಿಯಾ ಮಾತೇ. ಭಾರತದ ವಸ್ತುಗಳನ್ನೇ ಖರೀದಿ ಮಾಡಿ ಎನ್ನುವುದು. ಅದಕ್ಕಾಗಿ ಅವರು ಏನು ಬೇಕೋ ಎಲ್ಲವನ್ನೂ ಮಾಡುತ್ತಾರೆ. ಅಷ್ಟಕ್ಕೂ ಚಾಕಲೇಟ್​ ಉದ್ಯಮದಲ್ಲಿ ವಿದೇಶಿ ಚಾಕಲೇಟ್​ಗಳ ದರ್ಬಾರು ಹೆಚ್ಚಾಗಿದೆ. ನಮ್ಮ ಜನರಿಗೆ ಚಿತ್ರ ವಿಚಿತ್ರ ಹೆಸರಿನ ಚಾಕಲೇಟ್​ ಗಿಫ್ಟ್​ ಆಗಿ ಕೊಡುವುದು ಎಂದರೆ ಇನ್ನಿಲ್ಲದ ಖುಷಿ. ಆದರೆ ಪಾರ್ಲೆಯವರ ಮೆಲೋಡಿ ಚಾಕಲೇಟ್​ ಭಾರತ ಮೂಲದ್ದು. ಈ ಮೂಲಕ ಮೇಡ್​ ಇನ್​ ಇಂಡಿಯಾದ ಚಾಕಲೇಟ್​ ವಿದೇಶದಲ್ಲಿಯೂ ಪ್ರಚಾರ ಮಾಡಿ ಬಂದರು. ಮೋದಿ. ಇದರ ಪರಿಣಾಮ ಪಾರ್ಲೆ ಶೇರ್​ ದಿಢೀರನೆ 5% ಹೆಚ್ಚಳವಾಗಿದೆ.

55
ಒಂದೇ ಮಾತಿನಿಂದ ಶೇಕ್​ ಶೇಕ್​

ಪ್ರಧಾನಿ ನರೇಂದ್ರ ಮೋದಿ ಅವರ ಒಂದೇ ಒಂದು ಮಾತಿನಿಂದ ಚಿನ್ನದ ಮಾರುಕಟ್ಟೆ ಶೇಕ್​ ಆಗಿದೆ. ಲಕ್ಷದ್ವೀಪಕ್ಕೆ ಹೋಗಿ ತೆಗೆದ ಒಂದೇ ಒಂದು ಫೋಟೋದಿಂದ ತಮ್ಮನ್ನು ಬಿಟ್ಟರೆ ಇಲ್ಲ ಎಂದು ಬೀಗುತ್ತಿದ್ದ ಮಾಲ್ಡವೀಸ್​, ಭಾರತದ ಕಾಲು ಬೀಳುವ ಸ್ಥಿತಿ ಉಂಟಾಗಿತ್ತು. ಇದೀಗ ವಿದೇಶಿ ಚಾಕಲೆಟ್​ ಆಸೆ ಬಿಟ್ಟು, ಸ್ವದೇಶಿ ಚಾಕಲೆಟ್​ ತಿನ್ನಿ ಎಂದು ಈ ಮೂಲಕ ತೋರಿಸಿ ಇನ್ನೊಂದು ದಾಖಲೆ ಬರೆದರು ಪಿಎಂ ಮೋದಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories