Karnataka Politics: ಬಿಎಸ್‌ವೈ ಕಣ್ಣೀರು ಹಾಕಿದ್ದೇಕೆ? ಡಿಕೆಶಿ ಮತ್ತೆ ಪ್ರಶ್ನೆ

First Published Dec 6, 2021, 12:46 PM IST

ರಾಮದುರ್ಗ(ಡಿ.06):  ನಮ್ಮ ಪಕ್ಷದ ವಿಚಾರ ಬಿಡಿ. ಇವರು ಯಾಕೆ ಕಣ್ಣೀರು ಹಾಕಿದ್ರು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಅವರಿಗೆ ಮತ್ತೆ ಪ್ರಶ್ನೆಯೆಸೆದಿದ್ದಾರೆ. ಕಾಂಗ್ರೆಸ್‌ ಪಕ್ಷವನ್ನು ರಾಜ್ಯದಲ್ಲಿ ಉಸಿರಾಡಲು ಬಿಡುವುದಿಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆಗೆ ಅವರು ಈ ರೀತಿಯಾಗಿ ತಿರುಗೇಟು ನೀಡಿದ್ದಾರೆ.

ಬೆಳಗಾವಿ(Belagavi) ಜಿಲ್ಲೆಯ ರಾಮದುರ್ಗ(Ramdurg) ತಾಲೂಕಿನ ಕಲ್ಲೂರದಲ್ಲಿ ಕಾಂಗ್ರೆಸ್‌(Congress) ಸ್ವಾಭಿಮಾನಿ ಸಮಾವೇಶವನ್ನು ಉದ್ಘಾಟಿಸಿದ ಡಿ.ಕೆ.ಶಿವಕುಮಾರ್‌

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿಗಳ ಬಗ್ಗೆ ಮಂತ್ರಿಗಳೇ ಮಾತಾಡ್ತಾರೆ ಎಂದು ಟೀಕಿಸಿದರು. ಈ ಚುನಾವಣೆಯಲ್ಲಿ ನಾವು ಎಲ್ಲ ವರ್ಗದವರಿಗೂ ಅವಕಾಶ ಮಾಡಿಕೊಟ್ಟಿದ್ದೇವೆ. ಅವರು ಯಾಕೆ ಮಾಡಿಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ದೇಶದಲ್ಲಿ ಊದ್ಯೋಗ ಖಾತರಿ ಯೋಜನೆ ಜಾರಿಗೆ ತಂದು ಜನರು ಮಾಡುವ ಕೂಲಿಗೆ ಹಣ ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಗ್ರಾಮ ಪಂಚಾಯಿತಿಗಳಿಗೆ 2 ಕೋಟಿಗೆ ಅನುದಾನವನ್ನು ಹೆಚ್ಚಿಸಿದ್ದು ಕಾಂಗ್ರೆಸ್‌ ಪಕ್ಷ. ಯಡಿಯೂರಪ್ಪ ಆಗಲಿ, ಮೋದಿ(Narendra Modi) ಆಗಲಿ ಇಬ್ಬರೂ ಪಂಚಾಯಿತಿ ಅಭಿವೃದ್ಧಿಗಳಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದಾರಾ ಎಂದು ಬಿಜೆಪಿಯನ್ನು(BJP) ತರಾಟೆಗೆ ತೆಗೆದುಕೊಂಡ ಡಿ.ಕೆ.ಶಿವಕುಮಾರ್‌

ಇನ್ನು ಡಿಸೆಂಬರ್‌ 14ರಂದು ಶಾಸಕ ರಮೇಶ್‌ ಜಾರಕಿಹೊಳಿ(Ramesh Jarkiholi) ಸುದ್ದಿಗೋಷ್ಠಿ ಮಾಡುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಕೊಡ್ತಿದ್ದಾರೆ, ಎಲ್ಲವನ್ನೂ ಬಿಚ್ತಾ ಇದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಮಾರ್ಮಿಕವಾಗಿ ಹೇಳಿದ ಡಿಕೆಶಿ 

click me!