MLC Election: ಕಾಂಗ್ರೆಸ್‌ ವಯಸ್ಸಾದ ಪಕ್ಷ, ಅದನ್ನು ವಿಸರ್ಜಿಸಿ: ಸಿಎಂ ಬೊಮ್ಮಾಯಿ

First Published | Dec 6, 2021, 6:19 AM IST

ಬೀದರ್‌(ಡಿ.06): ನೀವು ನಮಗೆ ಮತ ಕೊಡಿ ನಾನು ನಿಮ್ಮ ಸೇವೆ ಮಾಡುತ್ತೇನೆ. ನಿಮ್ಮ ಸೇವೆ ಮಾಡಿದರಷ್ಟೇ ಮತ್ತೆ ನಾನು ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai ) ಅವರು ಶಪಥ ಮಾಡಿದ್ದಾರೆ.

ಬೀದರ್‌(Bidar) ನಗರದಲ್ಲಿ ಭಾನುವಾರ ವಿಧಾನ ಪರಿಷತ್‌ ಚುನಾವಣಾ(Vidhan Parishat Election) ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಚುನಾವಣೆ ಕಾಂಗ್ರೆಸ್‌ನ(Congress) ಹಣ ಬಲ, ಬಿಜೆಪಿಯ(BJP) ಜನಬಲದ ನಡುವಿನ ಸಂಘರ್ಷ. ಕಾಂಗ್ರೆಸ್‌ ಹಣ, ತೋಳ್ಬಲದಿಂದ ಗೆಲ್ಲುವ ಭ್ರಮೆಯಲ್ಲಿದೆ. ಪರಿಷತ್‌ ಚುನಾವಣೆಯಲ್ಲಿ ಪಂಚಾಯತ್‌ ಮತದಾರರು ಅದನ್ನು ಸುಳ್ಳು ಮಾಡಲಿದ್ದು, ಬಿಜೆಪಿಯ ಅದ್ಧೂರಿ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ವಯಸ್ಸಾದ ಪಕ್ಷ. ಆ ಪಕ್ಷವನ್ನು ವಿಸರ್ಜಿಸುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್‌ ಎಲ್ಲೆಡೆ ಸೋಲುತ್ತಾ ಸಾಗಿದ್ದು, ಇದೀಗ ಮಿತ್ರಪಕ್ಷಗಳೇ ಅದರ ಮೇಲೆ ವಿಶ್ವಾಸ ಮಾಡದೆ ದೂರ ಸಾಗುತ್ತಿರುವಾಗ ಜನತೆ ಹೇಗೆ ವಿಶ್ವಾಸ ಮಾಡಿಯಾರು? ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.

Tap to resize

ಕಾಂಗ್ರೆಸ್‌ ಕಾಲದಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ಭಾಗದಲ್ಲಿ 19 ಸಾವಿರ ಹುದ್ದೆಗಳು ಖಾಲಿ ಇದ್ದವು. ನಮ್ಮ ಅವಧಿಯಲ್ಲಿ ಈಗ ಐದು ಸಾವಿರ ಹುದ್ದೆ ಭರ್ತಿಯಾಗಿದ್ದು, ಇನ್ನುಳಿದ 14 ಸಾವಿರ ಹುದ್ದೆಗಳ ಭರ್ತಿ ಪ್ರಕ್ರಿಯೆ ಅಂತಿಮ ಹಂತದಲ್ಲಿವೆ ಅಂತ ತಿಳಿಸಿದ ಸಿಎಂ ಬೊಮ್ಮಾಯಿ

ಈ ಭಾಗದ ಸಮಗ್ರ ಅಭಿವೃದ್ಧಿಗೆ ನಾವು ಮುಂದೆ ಬರುತ್ತಿದ್ದೇವೆ. ಅದಕ್ಕಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಚೇರಿಯನ್ನು ಬೆಂಗಳೂರಿನಿಂದ(Bengaluru) ಕಲಬುರಗಿಗೆ(Kalaburagi) ಸ್ಥಳಾಂತರಿಸಿ ಕಾರ್ಯ ಯೋಜನೆಗಳು ಸರಾಗವಾಗುವಂತೆ ಮಾಡಿದ್ದೇವೆ ಎಂದ ಮುಖ್ಯಮಂತ್ರಿ 

Latest Videos

click me!