Vidhan Parishat Election: ಅಭ್ಯರ್ಥಿ ಬದಲಾಯಿಸಲು ಕಾಂಗ್ರೆಸ್‌ನಲ್ಲೇ ಕುತಂತ್ರ: ಆನಂದ್‌ ಸಿಂಗ್‌

First Published Dec 3, 2021, 2:03 PM IST

ಹಗರಿಬೊಮ್ಮನಹಳ್ಳಿ(ಡಿ.03):  ಬಳ್ಳಾರಿ(Ballari) ವಿಧಾನ ಪರಿಷತ್‌ ಕಾಂಗ್ರೆಸ್‌(Congress) ಅಭ್ಯರ್ಥಿಯನ್ನು ಈ ಬಾರಿ ಬದಲಾಯಿಸಬೇಕೆಂದು ಉಭಯ ಜಿಲ್ಲೆಗಳ ಕಾಂಗ್ರೆಸ್‌ ನಾಯಕರಲ್ಲಿ ಕುತಂತ್ರ ನಡೆದಿತ್ತು ಎಂದು ಪ್ರವಾಸೋದ್ಯಮ ರಾಜ್ಯ ಸಚಿವ ಆನಂದ್‌ ಸಿಂಗ್‌(Anand Singh) ಹೇಳಿದರು.

ಪಟ್ಟಣದ ಶ್ರೀಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್‌ ಚುನಾವಣಾ(Vidhan Parishat Election) ಪ್ರಚಾರ(Campaign) ಸಭೆಯಲ್ಲಿ ಅಭ್ಯರ್ಥಿ ವೈ.ಎಂ. ಸತೀಶ್‌ ಪರ ಮತಯಾಚಿಸಿದ ಆನಂದ್‌ ಸಿಂಗ್‌

ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕೊಂಡಯ್ಯಗೆ(KC Kondaiah) ಟಿಕೆಟ್‌ ತಪ್ಪಿಸಲು ಕಾಂಗ್ರೆಸ್‌ನ ಶಾಸಕರು ಹಾಗೂ ಮಾಜಿ ಸಚಿವರು ತಮ್ಮ ಹೈಕಮಾಂಡ್‌ಗೆ ಪತ್ರ ಬರೆಯುವ ಮೂಲಕ ದಲಿತ ಸಮುದಾಯಕ್ಕೆ ಟಿಕೆಟ್‌ ಕೇಳುವ ನಾಟಕವಾಡಿದ್ದರು. ಸ್ವಾರ್ಥ ರಾಜಕೀಯಕ್ಕೆ ಮುಂದಾಗಿರುವ ವಿಷಯ ಸ್ವತಃ ಅಭ್ಯರ್ಥಿ ಕೊಂಡಯ್ಯನವರಿಗೆ ಗೊತ್ತಿದೆ. ಅವರ ಸೋಲು ಖಚಿತವಾಗಿದೆ ಎಂದ ಸಚಿವ ಸಿಂಗ್‌

ನಮ್ಮ ಪಕ್ಷದ ವಿಧಾನ ಪರಿಷತ್‌ ಅಭ್ಯರ್ಥಿ ವೈ.ಎಂ. ಸತೀಶ್‌(YM Satish) ಅವರಿಗೆ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸುವ ಜೊತೆಗೆ 2023ರ ಚುನಾವಣೆಗೆ ಇದು ದಿಕ್ಸೂಚಿಯಾಗಬೇಕು. ಕೈತಪ್ಪಿ ಹೋಗಿರುವ ಈ ಕ್ಷೇತ್ರ ಸೇರಿದಂತೆ ವಿಜಯನಗರ(Vijayanagara) ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಮಲ ಅರಳಲಿದೆ. ವಿಜಯನಗರ ಜಿಲ್ಲೆಯನ್ನು ಮಾಡಲು ಹೊರಟಾಗ, ಇಲ್ಲಿಯ ಶಾಸಕರೊಬ್ಬರು ತಮ್ಮ ಅಸ್ಥಿತ್ವಕ್ಕಾಗಿ ಹಗರಿಬೊಮ್ಮನಹಳ್ಳಿಯನ್ನು ಜಿಲ್ಲೆ ಮಾಡುತ್ತೇನೆಂದು ನನಗೆ ವಿರೋಧಿಸಿದ್ದರು ಎಂದು ಶಾಸಕ ಭೀಮಾನಾಯ್ಕ್‌ ಹೆಸರೇಳದೆ ಕಿಡಿಕಾರಿದ ಆನಂದ್‌ ಸಿಂಗ್‌

ಪ್ರಧಾನಮಂತ್ರಿ ಮೋದಿಯಿಂದಾಗಿ(Narendra Modi) ದೇಶದ 115 ಕೋಟಿ ಶ್ರೀಸಾಮಾನ್ಯರಿಗೆ ಈಗಾಗಲೇ ವ್ಯಾಕ್ಸಿನ್‌(Vaccine) ನೀಡಿದ್ದೇವೆ. ಈ ಹಿಂದೆ ಕಾಂಗ್ರೆಸ್‌ನವರು ಇದೇ ವ್ಯಾಕ್ಸಿನ್‌ ಬಗ್ಗೆ ಇಲ್ಲಸಲ್ಲದ ಅಸಂಬದ್ಧ ಟೀಕೆಗಳನ್ನು ಮಾಡಿದ್ದರು. ಆದರೆ, ಇದೀಗ ಅವರೇ ರಾತ್ರೋರಾತ್ರಿ ಹೋಗಿ ವ್ಯಾಕ್ಸಿನ್‌ ಹಾಕಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ ಸಾರಿಗೆ ಸಚಿವ ಶ್ರೀರಾಮುಲು 

ಮಾಜಿ ಶಾಸಕ ಕೆ. ನೇಮಿರಾಜನಾಯ್ಕ್‌, ಸಿದ್ದೇಶ ಯಾದವ್‌ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಹಾಗೂ ಲೋಕಸಭಾ ಸದಸ್ಯ ದೇವೇಂದ್ರಪ್ಪ, ಪಕ್ಷದ ಅಭ್ಯರ್ಥಿ ವೈ.ಎಂ. ಸತೀಶ್‌ ಪರ ಮತಯಾಚಿಸಿದರು.

ಮಂಡಲಾಧ್ಯಕ್ಷ ವೀರೇಶ ಸ್ವಾಮಿ, ಮಾಜಿ ಅಧ್ಯಕ್ಷ ನೆರೆಗಲ್‌ ಕೊಟ್ರೇಶ, ಉಪಾಧ್ಯಕ್ಷ ಪಿ. ರಾಜಲಿಂಗಪ್ಪ, ಮುಖಂಡರಾದ ಭದ್ರವಾಡಿ ಚಂದ್ರಶೇಖರ, ಕಿನ್ನಾಳ ಸುಭಾಷ್‌, ಪಿ. ಸೂರ್ಯಬಾಬು, ಮಹಿಪಾಲ್‌, ಸಚ್ಚಿದಾನಂದ ಗೌಡ, ಪುರಸಭೆ ಮಾಜಿ ಅಧ್ಯಕ್ಷರಾದ ರಾಘವೇಂದ್ರ, ಜೋಗಿ ಹನುಮಂತ, ವ್ಯಾಸನಕೇರಿ ಶ್ರೀನಿವಾಸ, ಬಡಿಗೇರ ಬಸವರಾಜ, ಮೃತ್ಯುಂಜಯ ಬದಾಮಿ, ಚಿತ್ತವಾಡ್ಗಿ ಪ್ರಕಾಶ್‌, ಬಲ್ಲಾಹುಣಸಿ ರಾಮಣ್ಣ, ನವೀನ್‌, ಕನಕಪ್ಪ, ಕೃಷ್ಣನಾಯ್ಕ, ಸಿದ್ದಲಿಂಗನಗೌಡ, ಮಹೇಂದ್ರ, ಬಿ. ಗಂಗಾಧರ, ರುದ್ರಮುನಿ, ರೋಹಿತ್‌, ಎಸ್‌.ಟಿ. ಮೋರ್ಚಾ ಅಧ್ಯಕ್ಷ ಪ್ರಕಾಶ್‌, ಎಸ್‌.ಸಿ. ಮೋರ್ಚಾಧ್ಯಕ್ಷ ಗಣೇಶ, ವೆಂಕಟೇಶ, ಸರ್ದಾರ ಯಮನೂರ್‌, ರಾಹುಲ್‌ ಸೇರಿದಂತೆ ತಾಲೂಕಿನ ಗ್ರಾಪಂ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

click me!