ಯಾದಗಿರಿ (ಮೇ.06): ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರಕ್ಕೆ ಮುಂದಾಗಿರುವ ಬಿಜೆಪಿ, ಪಕ್ಷದ ಘಟಾನುಘಟಿ ನಾಯಕರನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿ ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಪರ ಸ್ಮೃತಿ ಇರಾನಿ ಮತಯಾಚನೆ ಮಾಡಲು ಯಾದಗಿರಿಗೆ ಆಗಮಿಸಿದ್ದಾರೆ.
ಯಾದಗಿರಿ ಮತಕ್ಷೇತ್ರದ ಬಿಜೆಪಿ ಬಹಿರಂಗ ಸಮಾವೇಶ ಆಯೋಜನೆ ಮಾಡಲಾಗಿದ್ದು, ನಗರದ ಹನುಮಾನ್ ಮಂದಿರ ಬಳಿ ನಡೆಯುತ್ತಿರುವ ಬಹಿರಂಗ ಸಮಾವೇಶ ನಡೆಯುತ್ತಿದೆ.
ಸಚಿವೆ ಸ್ಮೃತಿ ಇರಾನಿಯವರನ್ನು ಶಾಸಕ, ಬಿಜೆಪಿ ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ ಸ್ವಾಗತಿಸಿದ್ದು, ಭಾರತಾಂಬೆಯ ಭಾವಚಿತ್ರಕ್ಕೆ ಸಚಿವೆ ಸ್ಮೃತಿ ಇರಾನಿ ಪುಷ್ಪಾರ್ಚನೆ ಮಾಡಿ ನಂತರ ದೀಪ ಬೆಳಗಿಸುವ ಮೂಲಕ ಸಮಾವೇಶಕ್ಕೆ ಸಚಿವೆ ಇರಾನಿ ಚಾಲನೆ ನೀಡಿದ್ದಾರೆ.
ಈ ಸಮಾವೇಶದ ಮೂಲಕ ಸ್ಮೃತಿ ಇರಾನಿ ಮತಯಾಚನೆ ಮಾಡಲಿದ್ದು, ಸಮಾವೇಶದಲ್ಲಿ ಜಾರ್ಖಂಡ್ ಶಾಸಕ ಅನಂತ ಓಜಾ, ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ಉಪಸ್ಥಿತರಿದ್ದು, ಬಹಿರಂಗ ಸಮಾವೇಶದಲ್ಲಿ ಸಾವಿರಾರು ಜನರು ಭಾಗಿಯಾಗಿದ್ದಾರೆ.
ಆಂಜನೇಯನಿಗೂ ಅವಮಾನಿಸಲು ಕಾಂಗ್ರೆಸ್ ಮುಂದು: ಈಶ್ವರ, ಶ್ರೀರಾಮನಿಗೂ ಅವಮಾನ ಮಾಡಿದ್ದ ಕಾಂಗ್ರೆಸ್ ಪಕ್ಷ ಈಗ ಆಂಜನೇಯನಿಗೂ ಅವಮಾನ ಮಾಡಲು ಹೊರಟಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ಅಭ್ಯರ್ಥಿ ಸುಧಾ ಶಿವರಾಮೇಗೌಡ ಪರ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ಅವರು ಯಾವ ಸರ್ಕಾರ ದೇವರಿಗೆ ಗೌರವ ಕೊಡುವುದಿಲ್ಲವೋ ಅಂತಹ ಸರ್ಕಾರ ಈ ದೇಶದ ಸಾಮಾನ್ಯ ನಾಗರಿಕರಿಗೆ ಗೌರವ ಮತ್ತು ಸಾಮಾಜಿಕ ನ್ಯಾಯ ಕೊಡಲು ಸಾಧ್ಯವಿಲ್ಲ.
ಮೇ 10ರಂದು ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಜೈಶ್ರೀರಾಮ್ ಎಂಬ ಆಕ್ರೋಶದ ಘೋಷಣೆಯೊಂದಿಗೆ ಮತಗಟ್ಟೆಗೆ ತೆರಳಿ ಕಮಲದ ಗುರುತಿಗೆ ಮತ ಕೊಟ್ಟು ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.