ಪದ್ಮಶ್ರೀಪುರಸ್ಕೃತ ಸುಕ್ರಿಬೊಮ್ಮಗೌಡ, ತುಳಸೀಗೌಡರ ಕಾಲಿಗೆ ಬಿದ್ದ ಪ್ರಧಾನಿ ಮೋದಿ

Published : May 03, 2023, 10:13 PM ISTUpdated : May 04, 2023, 03:26 PM IST

ಉತ್ತರಕನ್ನಡ (ಮೇ 3): ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಪದ್ಮಶ್ರೀ ಪುರಸ್ಕೃತರಾದ ಸಕ್ರಿಬೊಮ್ಮಗೌಡ ಮತ್ತು ತುಳಸಿಗೌಡ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. 

PREV
16
ಪದ್ಮಶ್ರೀಪುರಸ್ಕೃತ ಸುಕ್ರಿಬೊಮ್ಮಗೌಡ, ತುಳಸೀಗೌಡರ ಕಾಲಿಗೆ ಬಿದ್ದ ಪ್ರಧಾನಿ ಮೋದಿ

ಪದ್ಮಶ್ರೀ ಪುರಸ್ಕೃತರಾದ ಸುಕ್ರಿಬೊಮ್ಮ ಗೌಡ ಹಾಗೂ ತುಳಸಿ ಗೌಡರ ಮುಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಲೆ ಬಾಗಿ ನಮಸ್ಕರಿಸಿ, ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

26

ಪ್ರಧಾನಿಯೆಂಬ ಯಾವುದೇ ಅಹಂ ಇಲ್ಲದೇ ಪ್ರಕೃತಿ, ಸಂಸ್ಕೃತಿ ರಕ್ಷಕ ಮಾತೆಯರ ಆಶೀರ್ವಾದ ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಇಬ್ಬರು ಹಿರಿಯರ ಆರೋಗ್ಯ ವಿಚಾರಿಸಿದರು.

36

ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಖುಷಿಪಟ್ಟ ಸುಕ್ರಿಬೊಮ್ಮ ಗೌಡ ಹಾಗೂ ತುಳಸಿ ಗೌಡ ಅವರು, ನರೇಂದ್ರ ಮೋದಿ ಅವರನ್ನು ಮಗನಂತೆ ತಲೆ, ಮೈ ಸವರಿ ಆಶೀರ್ವಾದ ಮಾಡಿದರು. 

46

ನಮ್ಮ ದೇಶದ ಪ್ರಧಾನಮಂತ್ರಿಯಾಗಿ ನೀವು, ನಮ್ಮ‌ ಜಿಲ್ಲೆಗೆ ಬಂದದ್ದು ಬಹಳಷ್ಟು ಖುಷಿಯಾಯ್ತು, ಸಂತೋಷವಾಯ್ತು ಎಂದು ನರೇಂದ್ರ ಮೋದಿಗೆ ಅವರಿಗೆ ಸುಕ್ರಿ ಬೊಮ್ಮಗೌಡ ಹೇಳಿದರು.

56

ಉತ್ತರ ಕನ್ನಡ ಜಿಲ್ಲೆ ಆಂಕೋಲಾದಲ್ಲಿ ನಡೆದ ಬಿಜೆಪಿಯ ಬೃಹತ್‌ ಸಮಾವೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸ್ಥಳೀಯ ಯಕ್ಷಗಾನದ ಕಿರೀಟ ತೊಡಿಸಲಾಯಿತು.

66

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕರಿಯ ಕಂಬಳಿಯನ್ನು ಹೊದಿಸಲಾಯಿತು.

click me!

Recommended Stories