ಡಿಕೆ ಶಿವಕುಮಾರ್‌ಗೆ ಮಂಗಳಮುಖಿಯರಿಂದ ಸಿಕ್ತು ಗ್ರ್ಯಾಂಡ್‌ ವೆಲ್​ಕಮ್

First Published | Aug 4, 2020, 4:24 PM IST

ಕರ್ನಾಟಕ ಪ್ರದೇಶ್ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೊರೋನಾ ಭೀತಿಯ ನಡುವೆಯೂ ಪಕ್ಷ ಸಂಘಟನೆಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಮೊನ್ನೇ ಅಷ್ಟೇ ಮಂಗಳೂರಿಗೆ ತೆರಳಿ ಹಿರಿಯ ಕಾಂಗ್ರೆಸ್ ನಾಯಕರ ಆಶೀರ್ವಾದ ಪಡೆದುಕೊಂಡಿದ್ದರು. ಇದೀಗ ಕಲಬುರಗಿಯತ್ತ ಪ್ರಯಾಣ ಬೆಳೆಸಿದ್ದು, ವಿಮಾನ ನಿಲ್ದಾಣದಲ್ಲಿ ಡಿಕೆಶಿಗೆ ವಿಶೇಷ ವೆಲ್‌ಕಮ್ ಸಿಕ್ಕಿದೆ.

ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಇಂದು (ಮಂಗಳವಾರ) ಬೆಳಿಗ್ಗೆ ಬಂದಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮಂಗಳಮುಖಿಯರು ಸ್ವಾಗತಿಸಿದರು.
ಮಂಗಳಮುಖಿಯರು ಹೂಗುಚ್ಛ ನೀಡಿ ಸ್ವಾಗತ ಕೋರಿ ಶಾಲು ಹೊದಿಸಿ ಸನ್ಮಾನಿಸಿ ವೆಲ್‌ಕಮ್ ಮಾಡಿಕೊಂಡರು.
Tap to resize

ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಮಂಗಳಮುಖಿಯರು ರಕ್ಷಾಬಂಧನ ಅಂಗವಾಗಿ ರಾಖಿ ಕಟ್ಟಿ ಸ್ವಾಗತಿಸಿದರು.
ಈ ಹಿಂದೆ ಕೆಪಿಸಿಸಿ ನೂತನಕಚೇರಿ ಪೂಜೆ ವೇಳೆ ಸಹ ಮಂಗಳಮುಖಿಯರು ಬಂದು ಡಿಕೆಶಿಗೆ ಆಶೀರ್ವಾದಿಸಿದ್ದರು.
ಕಲಬುರಗಿಗೆ ಬಂದಿಳಿದ ಡಿಕೆಶಿ ನೇರವಾಗಿ ಶ್ರೀಕ್ಷೇತ್ರ ಗಾಣಗಾಪುರ.ಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು
ಗಾಣಗಾಪುರ ದತ್ತಾತ್ರೇಯಗೆ ಪೂಜೆ ಸಲ್ಲಿಸಿದ ಬಳಿಕ ಪ್ರಸಾದ ಸ್ವೀಕರಿಸಿದರು.

Latest Videos

click me!