ಗುಂಡೂರಾವ್ ಮನೆಯಲ್ಲಿದೆ ಅರ್ಧ ಪಾಕಿಸ್ತಾನ ' ಯತ್ನಾಳ್ ವಿರುದ್ಧ ತಿರುಗಿಬಿದ್ದ ಟಬು ರಾವ್

First Published | Apr 7, 2024, 6:47 PM IST

'ಸಚಿವ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ' ಎಂಬ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಲೋಕಸಭಾ ಚುನಾವಣೆ ಹೊತ್ತಲ್ಲಿ ಹೊಸ ವಿವಾದ ಹುಟ್ಟುಹಾಕಿದೆ. ಯತ್ನಾಳ್ ಹೇಳಿಕೆ ವಿರುದ್ಧ ದಿನೇಶ್ ಪತ್ನಿ ಟಬು ಗುಂಡೂರಾವ್ ತಿರುಗಿಬದ್ದಿದ್ದು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

'ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ' ಎಂಬ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರ ಹೇಳಿಕೆಗೆ ದಿನೇಶ್ ಗುಂಡೂರಾವ್ ಪತ್ನಿ ಟಬು ರಾವ್ ಯತ್ನಾಳ್ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ಯತ್ನಾಳರ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದಿನೇಶ್ ಪತ್ನಿ ಟಬು ರಾವ್ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯತ್ನಾಳ್ ಹೇಳಿಕೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಹ ಶೇಷಾದ್ರಿಪುರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

Tap to resize

ಈ ಬಸನಗೌಡ ಪಾಟೀಲ್ ಯತ್ನಾಳ್ ಯಾರೋ ನನಗೆ ಗೊತ್ತಿಲ್ಲ. ನಾನು ರಾಜಕೀಯದಲ್ಲಿಲ್ಲ. ನಾನು ಮುಸ್ಲಿಂ ಸಮುದಾಯದಲ್ಲಿ ಹುಟ್ಟಿದ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
 

ಮಾತೆತ್ತಿದ್ದರೆ ಭಾರತ ಮಾತೆ ಅಂತಾರೆ ಆದರೆ  ಹೆಣ್ಣು ಮಕ್ಕಳಿಗೆ ಇದೆನಾ ಇವರು ಕೊಡುವ ಮರ್ಯಾದೆ. ಯತ್ನಾಳ್‌ಗೆ ಒಳ್ಳೆ ಭಾಷೆ ಗೊತ್ತಿಲ್ಲವಾ? ನಾನು ಯತ್ನಾಳರ ಮೇಲೆ ಮಾನನಷ್ಟ ಮೊಕದ್ದೊಮೆ ಹಾಕುತ್ತೇನೆ. ದಿನೇಶ್ ಬಗ್ಗೆ ಏನಾದರೂ ಮಾತಾಡಿಕೊಳ್ಳಲಿ ಆದರೆ ನಮ್ಮ ಬಗ್ಗೆ ಯಾಕೆ ಮಾತನಾಡಬೇಕು ಎಂದು ಯತ್ನಾಳ್ ವಿರುದ್ಧಕ ಟಬು ರಾವ್ ಗರಂ ಆಗಿದ್ದಾರೆ.
 

ದೂರು ನೀಡಿದ ಬಳಿಕ ಪ್ರತಿಕ್ರಿಯಿಸಿದ ಟಬು ರಾಬ್, ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಪೊಲೀಸರು ದೂರು ಸ್ವೀಕಾರ ಮಾಡಿದ್ದಾರೆ. ಯತ್ನಾಳ್ ವಿರುದ್ಧ  ನಾನು ಮಾನನಷ್ಟ ಮೊಕದ್ದಮೆಯನ್ನೂ ಹಾಕುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Latest Videos

click me!