ಮುಂಬೈ (ನ. 30) ಚುನಾವಣೆ ಇಲ್ಲ ಆದರೂ ರಾಜಕೀಯ ಧ್ರುವೀಕರಣ ಆಗುತ್ತಿದೆ. ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಶಿವಸೇನೆಯನ್ನು ಸೇರಲಿದ್ದಾರೆ. ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿಸೆಂಬರ್ 1 ರಂದು ಶಿವಸೇನೆಗೆ ಸೇರಲಿದ್ದಾರೆ. ನಟಿ ಊರ್ಮಿಳಾ ಮಂಗಳವಾರ ಶಿವಸೇನೆ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ಮಾಹಿತಿ ನೀಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಊರ್ಮಿಳಾ ಸೋತಿದ್ದರು. ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಕಾರಣಕ್ಕೆ ಊರ್ಮಿಳಾ ಪಕ್ಷ ತೊರೆದಿದ್ದರು. ಊರ್ಮಿಳಾ ಹೆಸರನ್ನು ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಶಿವಸೇನೆಯು ಗವರ್ನರ್ ಬಿ ಎಸ್ ಕೊಶ್ಯರಿಗೆ ಈಗಾಗಲೆ ಕಳುಹಿಸಲಾಗಿದೆ. ಇತರ 11 ಜನರ ಹೆಸರನ್ನು ರಾಜ್ಯಪಾಲರ ಕೋಟಾದಿಂದ ನಾಮನಿರ್ದೇಶನ ಮಾಡಲು ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ರವಾನಿಸಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತು ಊರ್ಮಿಳಾ ನಡುವೆಯೂ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸವಾಲುಗಳು ಸಿಡಿದಿದ್ದವು. ದಕ್ಷಿಣ ಭಾರತದ ಖ್ಯಾತ ನಟಿ ಖೂಷ್ಬೂ ಸಹ ಕಾಂಗ್ರೆಸ್ ತೊರೆದು ಇತ್ತೀಚೆಗೆ ಬಿಜೆಪಿ ಜಾಯಿನ್ ಆಗಿದ್ದರು. Actor Urmila Matondkar, who had contested the 2019 Lok Sabha elections as a Congress candidate and quit the party later, will join the Shiv Sena on Tuesday. ಕೈ ತೊರೆದಿದ್ದ ಊರ್ಮಿಳಾ ಶಿವಸೇನೆಗೆ, ರಾಜಕೀಯ ಧ್ರುವೀಕರಣ