ಸ್ಮಶಾನದಲ್ಲಿಯೇ ಹೊಸ ಕಾರಿಗೆ ಪೂಜೆ: ವಾಹನ ಸಂಖ್ಯೆ 2023ರ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ

Published : Jul 13, 2020, 07:35 PM IST

ಹೊಸ ವಾಹನ ಖರೀದಿ ಮಾಡಿದರೆ ಮನೆ ದೇವರು, ಇಷ್ಟದ ದೇವಸ್ಥಾನದ ಬಳಿ ಪೂಜೆ ಮಾಡಿಸುವುದು ಸಾಮಾನ್ಯ. ಆದರೆ  ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಕಾರಿಗೆ ಸ್ಮಶಾನದಲ್ಲಿ ಪೂಜೆ ನೆರವೇರಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಮೂಢನಂಬಿಕೆ ವಿರುದ್ಧ ಹೋರಾಟವನ್ನು ಮುಂದುವರೆಸಿದ್ದಾರೆ. ಇನ್ನು ಸತೀಶ ಜಾರಕಿಹೊಳಿ ನೂತನ ವಾಹನ ಸಂಖ್ಯೆ 2023 ಗುಟ್ಟು ಬಿಚ್ಚಿಟ್ಟಿದ್ದಾರೆ.

PREV
18
ಸ್ಮಶಾನದಲ್ಲಿಯೇ ಹೊಸ ಕಾರಿಗೆ ಪೂಜೆ: ವಾಹನ ಸಂಖ್ಯೆ 2023ರ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ

ಮೌಢ್ಯ ವಿರುದ್ದ ನಿರಂತರ ಹೋರಾಟ ಮಾಡುತ್ತಿರುವ ವೈಚಾರಿಕ ಚಿಂತಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮತ್ತೊಂದು ಹೆಜ್ಜೆ ಮುಂದಿರಿಸಿ ಹೊಸ‌ ಇತಿಹಾಸಕ್ಕೆ ನಾಂದಿ ಹಾಡಿದ್ದಾರೆ.

28

ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ಇಂದು ಸತೀಶ್ ಜಾರಕಿಹೊಳಿ ಖರೀದಿಸಿರುವ ನೂತನ ಕಾರಿನ ಚಾಲನೆ ನೀಡುವ ಸಮಾರಂಭ ನಡೆಯಿತು.

38

ಸಮಾರಂಭದಲ್ಲಿ ಸತೀಶ್​ ಜಾರಕಿಹೊಳಿ, ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜಿ, ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸ್ವಾಮೀಜಿ ಹಾಗೂ ಅಥಣಿ ಮೊಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಸೇರಿ ಅನೇಕರು ಪಾಲ್ಗೊಂಡಿದ್ದರು.

48

ನಮ್ಮ ಕುಟುಂಬದಲ್ಲಿಯೂ ಪಂಚಾಂಗ ನೋಡುವರು ಇದ್ದಾರೆ. ಆದರೆ ನಾನೊಬ್ಬನೇ ವಿಭಿನ್ನ. ಮೊದಲು ನಾನೊಬ್ಬನೇ ಹೋರಾಟ ಆರಂಭಿಸಿದೆ ಸದ್ಯ ನನ್ನ ಜತೆಗೆ ಅನೇಕ ಮಠಾಧೀಶರು ಹಾಗೂ ಜನ ಬೆಂಬಲಿಸಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದ್ರು.

58

ಕಾರಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ  2023ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಮಿಷನ್ 2023ನ್ನು ಆರಂಭಿಸಲಾಗಿದೆ. ಇದನ್ನು ಪದೇ ಪದೇ ನೆನಪು ಮಾಡೋ ದೃಷ್ಠಿಯಿಂದ ಕಾರ್ ಸಂಖ್ಯೆಯನ್ನು ಪಡೆಯಲಾಗಿದೆ. ಇದರಿಂದ ನಮಗೆ ಹಾಗೂ ಕಾರ್ಯಕರ್ತರಿಗೆ ನೆನಪು ಉಳಿಯಲಿದೆ.  ಇದು ಸಿಎಂ ಆಗೋ ಟಾರ್ಗೆಟ್ ಅಲ್ಲ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಟಾರ್ಗೆಟ್ ಎಂದರು.

68

ಕಾರಿನ ನಂಬರ್ 2023

ಕಾರಿನ ನಂಬರ್ 2023

78

ನಮ್ಮ ಕುಟುಂಬದಲ್ಲಿಯೂ ಪಂಚಾಂಗ ನೋಡುವರು ಇದ್ದಾರೆ. ಆದರೆ ನಾನೊಬ್ಬನೇ ವಿಭಿನ್ನ.ಮೊದಲು ನಾನೊಬ್ಬನೇ ಹೋರಾಟ ಆರಂಭಿಸಿದೆ ಸದ್ಯ ನನ್ನ ಜತೆಗೆ ಅನೇಕ ಮಠಾಧೀಶರು ಹಾಗೂ ಜನ ಬೆಂಬಲಿಸಿದ್ದಾರೆ ಎಂದು ಅವರು ತಿಳಿಸಿದರು.

88

ಈ ಸಂದರ್ಭದಲ್ಲಿ  ರಾಜನಹಳ್ಳಿ ವಾಲ್ಮೀಕಿಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಬೈಲಹೊಂಗಲ ನಿಜಗುಣ ಪ್ರಭು ಸ್ವಾಮೀಜಿ, ಅಥಣಿ ಮೋಟಗಿ ಮಠ ಪ್ರಭು ಚನ್ನ ಬಸವ ಸ್ವಾಮೀಜಿ, ಬಸವ ಬೆಳವಿ ಶರಣ ಬಸವ ಸ್ವಾಮೀಜಿ, ವೈದ್ಯ ಬಸವರಾಜ ಪಂಡಿತ ಗುರುಹಳು, ಹಣಮಾಪೂರ ಅಮರೇಶ್ವರ ಸ್ವಾಮೀಜಿ, ಘಟಪ್ರಭಾ ಮಲ್ಲಿಕಾರ್ಜುನ ಮಹಾಸ್ವಾಮಿ, ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್,  ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಭಾಗಿಯಾಗಿದ್ರು. 

click me!

Recommended Stories