ದೇಶದ ನಂಬರ್​ 1 ಶ್ರೀಮಂತ ಸಿಎಂ ಆಗ್ತಿರೋ ಡಿಕೆಶಿಗೇ ಸೆಡ್ಡು ಹೊಡೆದ ಲೇಡಿ MLA- ಯಾರಿವರು

Published : Jun 01, 2026, 01:53 PM IST

ಡಿ.ಕೆ.ಶಿವಕುಮಾರ್ ರಾಜ್ಯದ ನೂತನ ಹಾಗೂ ದೇಶದ ನಂಬರ್ 1 ಶ್ರೀಮಂತ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಲಿದ್ದಾರೆ. ಆದರೆ, ಶಾಸಕರ ಪಟ್ಟಿಯಲ್ಲಿ ಇವರಿಗಿಂತ ಇಬ್ಬರು ಶ್ರೀಮಂತರಿದ್ದು, ಇವರು 3ನೇ ಸ್ಥಾನದಲ್ಲಿದ್ದಾರೆ. 

PREV
16
ಪಟ್ಟಾಭಿಷೇಕಕ್ಕೆ ಕ್ಷಣ ಗಣನೆ...

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್​ ಅವರ ಪಟ್ಟಾಭಿಷೇಕಕ್ಕೆ ಇನ್ನೇನು ದಿನಗಳು ಹತ್ತಿರವಾಗಿದೆ. ನಾಡಿದ್ದು ಅರ್ಥಾತ್​ ಜೂನ್​ 3ರಂದು ಶಿವಕುಮಾರ್​ ಅವರ ಬಹುವರ್ಷಗಳ ಕನಸು ನನಸಾಗಲಿದ್ದು, ಕರ್ನಾಟಕದ ಸಾರಥ್ಯ ವಹಿಸಲಿದ್ದಾರೆ.

26
ನಂಬರ್​ 1 ಶ್ರೀಮಂತ ಸಿಎಂ

ಈ ಮೂಲಕ ಡಿ.ಕೆ.ಶಿವಕುಮಾರ್​ ಅವರು ದೇಶದ ನಂಬರ್​ 1 ಶ್ರೀಮಂತ ಮುಖ್ಯಮಂತ್ರಿ ಎನ್ನಿಸಿಕೊಳ್ಳಲಿದ್ದಾರೆ. ಇವರ ನಿವ್ವಳ ಮೌಲ್ಯವು 1,140 ಕೋಟಿ ರೂ. ಮೌಲ್ಯದ ಚರ ಆಸ್ತಿಗಳು ಮತ್ತು 273 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಒಳಗೊಂಡಿದೆ, ಅವರಿಗೆ 265 ಕೋಟಿ ರೂ. ಸಾಲ ಇವೆ.

36
ಡಿಕೆಶಿಗೆ 3ನೇ ಸ್ಥಾನ

ಆದರೆ ಕುತೂಹಲದ ವಿಷ್ಯ ಏನೆಂದರೆ, ಇಬ್ಬರು ಶಾಸಕರು ಶ್ರೀಮಂತಿಕೆಯಲ್ಲಿ ಡಿ.ಕೆ.ಶಿವಕುಮಾರ್​ ಅವರನ್ನು ಸೆಡ್ಡು ಹೊಡದಿದ್ದಾರೆ. ಮುಖ್ಯಮಂತ್ರಿಯಾಗಿ ನಂಬರ್​ 1 ಶ್ರೀಮಂತ ಡಿಕೆಶಿ ಆದರೂ, ಶಾಸಕರಾಗಿ ಡಿಕೆಶಿ 3ನೇ ಸ್ಥಾನದಲ್ಲಿ ಇದ್ದಾರೆ.

46
ನಂಬರ್​ 1,2 ಯಾರು

ಇದಕ್ಕೆ ಕಾರಣ, ನಂಬರ್​ 1 ಸ್ಥಾನದಲ್ಲಿ ಇರುವವರು ತಮಿಳುನಾಡಿನ ಎಐಎಡಿಎಂಕೆ ಶಾಸಕಿ ಲೀಮಾ ರೋಸ್ ಮಾರ್ಟಿನ್. 2026 ರಲ್ಲಿ ಲಾಲ್ಗುಡಿ ಕ್ಷೇತ್ರದಿಂದ ಆಯ್ಕೆಯಾದ ಅವರು, ಕುಟುಂಬದ ಆಸ್ತಿ 5,863 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ. ಇನ್ನು ಮಹಾರಾಷ್ಟ್ರದ ಬಿಜೆಪಿಯ ಶಾಸಕ ಪರಾಗ್ ಶಾ. ಇವರು ಚುನಾವಣೆಯಲ್ಲಿ ಘೋಷಿಸಿರುವಂತೆ ಇವರ ಒಟ್ಟೂ ಆಸ್ತಿ 3383.06 ಕೋಟಿ ರೂಪಾಯಿ.

56
ಡಿಕೆಶಿ ಕಾರು

ಡಿ.ಕೆ.ಶಿವಕುಮಾರ್ ಅವರ ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಹೆಸರಿನಲ್ಲಿ ಕೇವಲ ಒಂದು ಕಾರು ಮಾತ್ರ ನೋಂದಾಯಿಸಲಾಗಿದೆ. ಇದಲ್ಲದೆ ಇದು ಈ ಯುಗದ ಆಧುನಿಕ ಐಷಾರಾಮಿ ಕಾರಲ್ಲ. ಉದಾಹರಣೆಗೆ ಬೆಂಜ್, ಆಡಿ ಅಥವಾ ಫೆರಾರಿ ಅಲ್ಲ. ಬದಲಿಗೆ ಸುಮಾರು 24 ವರ್ಷಗಳ ಹಿಂದೆ ಅಂದ್ರೆ 2002ರಲ್ಲಿ ಖರೀದಿಸಿದ ಹಳೆಯ ಟೊಯೋಟಾ ಕ್ವಾಲಿಸ್ ಕಾರು.

66
ಪ್ರೀತಿಯ ಕಾರು

ಸಾಮಾನ್ಯವಾಗಿ, ಭಾರತದಲ್ಲಿನ ನಿಯಮಗಳು ಯಾವುದೇ ಕಾರನ್ನು ಸಾರ್ವಜನಿಕ ರಸ್ತೆಗಳಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಓಡಿಸಲು ಅನುಮತಿಸುವುದಿಲ್ಲ. ಆದ್ದರಿಂದ ಶಿವಕುಮಾರ್ ಪ್ರಸ್ತುತ ಈ ವಾಹನವನ್ನು ಬಳಸುತ್ತಿರಲು ಅವಕಾಶವಿಲ್ಲ. ಆದರೆ, ಅವರು ತಮ್ಮ ಜೀವನದಲ್ಲಿ ಅಪಾರ ಭಾವನಾತ್ಮಕ ಮೌಲ್ಯವನ್ನು ಹೊಂದಿರುವ ಈ ಮೊದಲ ಕಾರನ್ನು ಇಂದಿಗೂ ತಮ್ಮ ಗ್ಯಾರೇಜ್‌ನಲ್ಲಿ ಹೆಚ್ಚಿನ ಕಾಳಜಿ ಮತ್ತು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories