'ಸುಶಾಂತ್ ಅಲ್ಲ, ಡ್ರಗ್ಸ್ ಅಲ್ಲ, ರಿಯಾ ಬಂಧನಕ್ಕೆ ಕಾರಣವೇ ಬೇರೆ!'

First Published Sep 11, 2020, 7:04 PM IST

ಕೊಲ್ಕತ್ತಾ (ಸೆ.11)  ಸೆಲೆಬ್ರಟಿಗಳ ನಿಗೂಢ ಸಾವು, ಡ್ರಗ್ಸ್ ಮಾಫಿಯಾದಂತಹ ಪ್ರೆಕರಣಗಳು ನಿಧಾನಕ್ಕೆ ರಾಜಕಾರಣದ ತಿರುವು ಪಡೆದುಕೊಳ್ಳುವುದು ಹೊಸ ಬೆಳವಣಿಗೆ ಏನಲ್ಲ. ರಿಯಾ ಚಕ್ರವರ್ತಿ ಪ್ರಕರಣದಲ್ಲಿಯೂ ಅಂಥ ತಿರುವು ಕಂಡುಬರುತ್ತಿದೆ.

ನಟಿ ರಿಯಾ ಚಕ್ರವರ್ತಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸುಶಾಂತ್ ಸಿಂಗ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಆಕೆಯನ್ನು ಸಿಕ್ಕಿಹಾಕಿಸಲಾಗಿದೆ ಎಂಬ ಅಭಿಪ್ರಾಯ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗುತ್ತಿದೆ.
undefined
ಬಿಹಾರದ ಮುಂದಿನ ವಿಧಾನಸಭೆ ಚುನಾವಣೆ ಗಮನದಲ್ಲಿ ಇಟ್ಟುಕೊಂಡು ಬಿಜೆಪಿ ಇಂಥ ಆಟ ಆಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
undefined
ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಮತ್ತು ಸಿಪಿಐ (ಎಂ) ತಮ್ಮ ತೀಕ್ಷ್ಣವಾದ ರಾಜಕೀಯ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಬಿಜೆಪಿಯನ್ನು ಒಟ್ಟಾಗಿ ಟೀಕೆ ಮಾಡಿವೆ.
undefined
ಹೆಣ್ಣು ಮಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಆರೋಪ ಮೂರು ಪಕ್ಷಗಳದ್ದು.
undefined
ಮುಂದಿನ ಪಶ್ಚಿಮ ಬಂಗಾಳ ಚುನಾವಣೆಗೋಸ್ಕರ ಬಿಜೆಪಿ ಈಗಿನಿಂದಲೇ ಬೇಡದ ತಂತ್ರಗಳನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
undefined
ಯಾರಾದರೂ ತಪ್ಪು ಮಾಡಿದ್ದರೆ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ. ಆದರೆ ಬೆಂಗಾಳಿ ಮಹಿಳೆ ರಿಯಾ ಅವರನ್ನು ಸೋಶಿಯಲ್ ಮೀಡಿಯಾ ಟಾರ್ಗೆಟ್ ಮಾಡಿದ್ದು ನೋಡಿದರೆ ಇದರ ಹಿಂದಿರುವ ಕೈವಾಡ ಗೊತ್ತಾಗುತ್ತದೆ.
undefined
ರಿಯಾ ಬಂಗಾಳಿ ಆಗಿರುವುದರಿಂದ, ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಸಾಬೀತಾಗುವ ಮೊದಲೇ ಅವಳು ಬಲಿಪಶುವಾಗಿದ್ದಳು ಎಂದುಟಿಎಂಸಿ ಮುಖಂಡ ಮತ್ತು ರಾಷ್ಟ್ರೀಯ ವಕ್ತಾರ ಸೌಗತಾ ರಾಯ್ ಹೇಳಿದ್ದಾರೆ.
undefined
ಕಾಂಗ್ರೆಸ್ ನಾಯಕ ಮತ್ತು ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಮಾದಕ ದ್ರವ್ಯ ಆರೋಪದ ಮೇಲೆ ಬಂಧನವನ್ನು "ಹಾಸ್ಯಾಸ್ಪದ" ಎಂದು ಕರೆದಿದ್ದಾರೆ.
undefined
ಒಟ್ಟಿನಲ್ಲಿ ಬಿಹಾರ ವರ್ಸಸ್ ಮಹಾರಾಷ್ಟ್ರ ಎಂಬಂತಿದ್ದ ಕೇಸು ನಿಧಾನಕಕ್ಕೆ ಬಿಜೆಪಿ ವರ್ಸಸ್ ಉಳಿದ ಪಕ್ಷಗಳು ಎಂಬಂತೆ ಆಗುತ್ತಿದೆ.
undefined
click me!