ವಿರೋಧದ ಮಧ್ಯೆಯೂ ಯಲಹಂಕ ಮೇಲ್ಸೇತುವೆ ಉದ್ಘಾಟನೆ: ವೀರ ಸಾವರ್ಕರ್ ಎಂದು ನಾಮಕಾರಣ

First Published Sep 8, 2020, 3:16 PM IST

ತೀವ್ರ ವಿರೋಧದ ನಡುವೆಯೂ ವೀರ್‌ ಸಾವರ್ಕರ್ ಹೆಸರನ್ನಿಡಲಾಗಿರುವ ಯಲಹಂಕದ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು. ಇದಕ್ಕೂ ಮುನ್ನ ಪ್ರತಿಭಟನೆಯ ಸೂಚನೆಯ ಹಿನ್ನೆಲೆಯಲ್ಲಿ ಹಲವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 

ತೀವ್ರ ವಿರೋಧದ ನಡುವೆಯೂ ಬೆಂಗಳೂರಿನಯಲಹಂಕದ ಮೇಲ್ಸೇತುವೆಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು.
undefined
ಯಲಹಂಕ ಮೇಲ್ಸೇತುವೆ ಉದ್ಘಾಟನೆಗೊಂಡಿದ್ದು, ಇದಕ್ಕೆ ವೀರ ಸಾವರ್ಕರ್ ಎಂದು ನಾಮಕಾರಣ ಮಾಡಲಾಗಿದೆ.
undefined
ವಿವಾದಕ್ಕೆ ಕಾರಣವಾಗಿದ್ದರಿಂದ ಯಲಹಂಕ ಮೇಲ್ಸೇತುವೆಯನ್ನು ಬಿಗಿ ಭದ್ರತೆಯೊಂದಿಗೆ ಉದ್ಘಾಟನೆ ಮಾಡಲಾಯ್ತು
undefined
ಬಿಬಿಎಂಪಿಯಿಂದ ನಿರ್ಮಾಣಗೊಂಡಿರುವ ಮೇಲ್ಸೇತುವೆಗೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಹೆಸರಿಡುವ ಸಂಬಂಧ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು.
undefined
ನೂತನ ಮೇಲ್ಸೇತುವೆ ಉದ್ಘಾಟನೆ ಹಾಗೂ ವೀರ ಸಾವರ್ಕರ್ ಹೆಸರು ನಾಮಕರಣ ಮಾಡಲು ಬಿಬಿಎಂಪಿಯಿಂದ ಕಳೆದ ಮೇ. 28 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ವೀರ ಸಾವರ್ಕರ್ ಹೆಸರಿಡುವುದನ್ನು ವಿರೋಧಿಸಿ ಪ್ರತಿಪಕ್ಷಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಬೆದರಿಕೆ ಒಡ್ಡಿದ್ದವು. ಹೀಗಾಗಿ ಸರ್ಕಾರ ಕಾರ್ಯಕ್ರಮ ರದ್ದು ಮಾಡಿತ್ತು.
undefined
ಕೊನೆಗೆ ಇಂದು (ಮಂಗಳವಾರ) ಬಿಎಸ್‌ವೈ ಯಲಹಂಕ ಮೇಲ್ಸೇತುವೆ ಉದ್ಘಾಟನೆ ಮಾಡಿದ್ದು, ಇದಕ್ಕೆ ವೀರ ಸಾವರ್ಕರ್ ಎಂದು ನಾಮಕಾರಣ ಮಾಡಲಾಗಿದೆ. ಇದಕ್ಕೂ ಮುನ್ನ ಪ್ರತಿಭಟನೆಯ ಸೂಚನೆಯ ಹಿನ್ನೆಲೆಯಲ್ಲಿ ಹಲವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
undefined
click me!