ದೇಣಿಗೆ ಸ್ವೀಕಾರದಲ್ಲಿ ನಂಬರ್ ಒನ್ ಸ್ಥಾನ ಪಡೆದ BJP; 2023-24ರಲ್ಲಿ ಬಂದ ಹಣವೆಷ್ಟು? ಕಾಂಗ್ರೆಸ್‌ಗಿಂತ 6ಪಟ್ಟು ಹೆಚ್ಚು

Published : Apr 09, 2025, 08:59 AM ISTUpdated : Apr 09, 2025, 09:05 AM IST

BJP And Congress: 2023-24ರಲ್ಲಿ ಬಿಜೆಪಿ ಅತಿ ಹೆಚ್ಚು ದೇಣಿಗೆ ಪಡೆದು ಅಗ್ರಸ್ಥಾನದಲ್ಲಿದೆ. ಕಾಂಗ್ರೆಸ್ 281.48 ಕೋಟಿ ರೂ. ದೇಣಿಗೆ ಸಂಗ್ರಹಿಸಿದೆ, ಇದು ಬಿಜೆಪಿಗಿಂತ 6 ಪಟ್ಟು ಕಡಿಮೆಯಾಗಿದೆ.

PREV
14
ದೇಣಿಗೆ ಸ್ವೀಕಾರದಲ್ಲಿ ನಂಬರ್ ಒನ್ ಸ್ಥಾನ ಪಡೆದ BJP; 2023-24ರಲ್ಲಿ ಬಂದ ಹಣವೆಷ್ಟು? ಕಾಂಗ್ರೆಸ್‌ಗಿಂತ 6ಪಟ್ಟು ಹೆಚ್ಚು

ನವದೆಹಲಿ: 2023-24ನೇ ವಿತ್ತ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳು ಒಟ್ಟು 2,544.278 ಕೋಟಿ ರು. ದೇಣಿಗೆ ಸಂಗ್ರಹಿಸಿವೆ. ಇದರಲ್ಲಿ ಬಿಜೆಪಿ ಒಂದೇ 2243 ಕೋಟಿ ರು. ದೇಣಿಗೆ ಸ್ವೀಕರಿಸಿ ನಂ.1 ಪಕ್ಷವಾಗಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ.

24

ಬಿಜೆಪಿ 8,358 ದೇಣಿಗೆಗಳಿಂದ ಒಟ್ಟು 2,243.947 ಕೋಟಿ ರು. ಘೋಷಿಸಿದರೆ, ಕಾಂಗ್ರೆಸ್ 1994 ದೇಣಿಗೆಗಳಿಂದ 281.48 ಕೋಟಿ ರು. ಘೋಷಿಸಿದೆ. ಬಿಜೆಪಿ ಘೋಷಿಸಿದ ದೇಣಿಗೆ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ , ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಇಪಿ) ಮತ್ತು ಸಿಪಿಎಂ ಇದೇ ಅವಧಿಯಲ್ಲಿ ಘೋಷಿಸಿದ ಒಟ್ಟು ದೇಣಿಗೆಗಳಿಗಿಂತ 6 ಪಟ್ಟು ಹೆಚ್ಚು.

34

ಕಳೆದ ವರ್ಷಕ್ಕಿಂತ ಅಧಿಕ

2022-23ರಲ್ಲಿ ಬಿಜೆಪಿಗೆ 719.858 ಕೋಟಿ ರು. ದೇಣಿಗೆ ಬಂದಿತ್ತು. ಈ ವರ್ಷ ಇದು ಶೇ.211.72ರಷ್ಟು ಹೆಚ್ಚಳವಾಗಿದೆ. ಅದೇ ರೀತಿ, ಕಾಂಗ್ರೆಸ್‌ಗೆ 79.924 ಕೋಟಿ ರು. ಬಂದಿತ್ತು. ಈ ವರ್ಷ ಶೇ.252.18ರಷ್ಟು ಹೆಚ್ಚಳವಾಗಿದೆ.

44

ಈ ವರ್ಷ ರಾಷ್ಟ್ರೀಯ ಪಕ್ಷಗಳು ಪಡೆದ ಒಟ್ಟು ದೇಣಿಗೆ ಕಳೆದ ವರ್ಷಕ್ಕಿಂತ 1,693.84 ಕೋಟಿ ರು.ಗಳಷ್ಟು ಹೆಚ್ಚಾಗಿದ್ದು, ಶೇ.199.17ರಷ್ಟು ಏರಿಕೆ ದಾಖಲಿಸಿದೆ. ಈ ಮೂಲಕ ದೇಣಿಗೆ ಸ್ವೀಕಾರದಲ್ಲಿ ಬಿಜೆಪಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories