ಸಿಎಂ ಬಿಎಸ್‌ವೈ ಭೇಟಿಯಾದ ಮುಸ್ಲಿಂ ನಿಯೋಗ: ಮಹತ್ವದ ಬೇಡಿಕೆ ಇಟ್ರು

First Published | Sep 15, 2020, 6:11 PM IST

ಮುಖ್ಯಂಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನ ಮುಸ್ಲಿಂ ನಿಯೋಗ ಭೇಟಿ ಮಾಡಿ ಮಹತ್ವದ ಬೇಡಿಕೆ ಇಟ್ಟಿದೆ. ಮೌಲಾನಾ ಸಗೀರ್ ಅಹಮದ್ ರಷಿದ್ ನೇತೃತ್ವದ ನಿಯೋಗ, ಗೃಹ ಕಚೇರಿ ಕೃಷ್ಣದಲ್ಲಿ ಇಂದು (ಮಂಳವಾರ) ಸಿಎಂ ಬಿಎಸ್‌ವೈ ಭೇಟಿ ಮಾಡಿತು. ಭೇಟಿ ಮಾಡಿದ್ಯಾಕೆ..? ಏನೆಲ್ಲಾ ಬೇಡಿಕೆ ಇಟ್ಟಿದೆ ಎನ್ನುವ ಸಂಪೂರ್ಣ ಮಾಹಿತಿ ಫೋಟೋಗಳಲ್ಲಿ.

ಸಿಎಂ ಬಿಎಸ್‌ವೈ ಭೇಟಿಯಾದ ಮುಸ್ಲಿಂ ನಿಯೋಗ
ಮೌಲಾನಾ ಸಗೀರ್ ಅಹಮದ್ ರಷಿದ್ ನೇತೃತ್ವದ ನಿಯೋಗದಿಂದ ಸಿಎಂ ಭೇಟಿ.
Tap to resize

ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂಯೆ ಗೃಹ ಕಚೇರಿ ಕೃಷ್ಣದಲ್ಲಿ ಇಂದು (ಮಂಗಳವಾರ) ಸಂಜೆ ಸಿಎಂ ಭೇಟಿಯಾದ ನಿಯೋಗ
ಡಿಜೆ ಹಳ್ಳಿ ಕೆಜೆ ಹಳ್ಳಿ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿ..ಆದ್ರೆ ಕೆಲ ಅಮಾಯಕರನ್ನ ಬಂಧಿಸಿದ್ದಾರೆ ಅವರನ್ನ ಬಿಡುಗಡೆ ಮಾಡಿ ಎಂದು ಸಿಎಂಗೆ ಮನವಿ
ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಿ ಅದಕ್ಕೆ ಸರ್ಕಾರದ ಪರವಾಗಿ ನಾವು ಇರ್ತೇವೆ. ಆದ್ರೆ ಅಮಯಾಕರನ್ನ ಬಿಟ್ಟು ಬಿಡಿ ಎಂದು ಮನವಿ ಸಲ್ಲಿಸಿದ ನಿಯೋಗ
ಇದರ ಜೊತೆಗೆ ಸೋಷಿಯಲ್ ಮಿಡಿಯದಲ್ಲಿ ಹಿಂದು- ಮುಸ್ಲಿಮ್ ದೇವರುಗಳ ಬಗ್ಗೆ ಅವಹೇಳನ ಪೋಸ್ಟ್ ಗಳು ಸುಳ್ಳು ಸುದ್ದಿಗಳು ಬರುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂಗೆ ಮನವಿ ಮಾಡಿದೆ ನಿಯೋಗ...

Latest Videos

click me!