ಅತ್ತ ಬಿಎಸ್‌ವೈ-ಎಚ್‌ಡಿಕೆ ಭೇಟಿ, ಇತ್ತ ಸಿದ್ದು ಮನೆಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

First Published | Sep 11, 2020, 8:14 PM IST

ಅತ್ತ ಎಚ್‌ಡಿ ಕುಮಾರಸ್ವಾಮಿ ಅವರು  ಇಮದು (ಶುಕ್ರವಾರ) ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದೆ. ರಾಜಕೀಯ ಬದ್ಧ ವೈರಿಗಳು ಭೇಟಿ ಮಾಡಿದ್ಯಾಕೆ ಎನ್ನುವ ಚರ್ಚೆಗಳು ಶರುವಾಗಿವೆ. ಇದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯನವರ ಸರ್ಕಾರಿ ನಿವಾಸದಲ್ಲಿ ಶುಕ್ರವಾರ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಇಂದು (ಶುಕ್ರವಾರ) ಒಂದು ಕಡೆ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಭೇಟಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ರೆ, ಮತ್ತೊಂದೆಡೆ ಸಿದ್ದರಾಮಯ್ಯ ನಿವಾಸದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು.
ಹೌದು ಸಿದ್ದರಾಮಯ್ಯ ನಿವಾಸದಲ್ಲಿ ಶಾಸಕ ಜಮೀರ್ ಅಹ್ಮದ್ ಸೇರಿದಂತೆ ಹಲವು ನಾಯಕರು ಸಭೆ ಸೇರಿ ಚರ್ಚೆ ನಡೆಸಿದರು.
Tap to resize

ಆದ್ರೆ, ಈ ಸಭೆಯಲ್ಲಿ ಜಮೀರ್ ಅಹ್ಮದ್ ಖಾನ್ ಹೊರತುಪಡಿಸಿದ್ರೆ, ಇನ್ಯಾವ ಮೇನ್ ಲೀಡರ್ಸ್ ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ರೇಸ್‌ಕೋರ್ಟ್‌ ರಸ್ತೆಯಲ್ಲಿರುವ ಮಾಜಿ ಸಿದ್ದರಾಮಾಯ್ಯ ನಿವಾಸದಲ್ಲಿ ನಡೆದ ಸಭೆ
ಯೂತ್ ಕಾಂಗ್ರೆಸ್ ಚುನಾವಣೆ ಸಂಬಂಧ ನಡೆದ ಸಭೆ ಇದಾಗಿದೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಜಮಿರ್ ಅವರೇ ಬಹಿರಂಗಪಡಿಸಿದ್ದಾರೆ.
ಯೂತ್ ಕಾಂಗ್ರೆಸ್ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಡಿಕೆಶಿ ಸೇರಿದಂತೆ ಹಲವು ನಾಯಕರು ಇಲ್ಲದಿರುವುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Latest Videos

click me!