RR ನಗರಕ್ಕೆ ಹೊರಗಿನಿಂದ 4 ಸಾವಿರ ಜನರನ್ನು ಕರೆಸಲಾಗಿದೆ, ಕೊಲೆಗಳಾಗುವ ಸಾಧ್ಯತೆ: ಮುನಿರತ್ನ

First Published | Oct 23, 2020, 9:23 AM IST

ಬೆಂಗಳೂರು(ಅ.23): ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಹೊರಗಿನಿಂದ ಸುಮಾರು ನಾಲ್ಕು ಸಾವಿರ ಜನರನ್ನು ಕರೆಸಲಾಗಿದೆ ಎಂದು ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಗಂಭೀರ ಆರೋಪ ಮಾಡಿರುವ ಬಿಜೆಪಿ ಅಭ್ಯರ್ಥಿ ಮುನಿರತ್ನ, ಈ ಹೊರಗಿನಿಂದ ಬಂದವರಿಂದ ಕ್ಷೇತ್ರದಲ್ಲಿ ಕೊಲೆಗಳು ಸಂಭವಿಸುವ ಸಾಧ್ಯತೆಯೂ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಚುನಾವಣೆಯಲ್ಲಿ ರಾಜಕೀಯ ದ್ವೇಷ ಕಂಡು ಬರುತ್ತಿಲ್ಲ. ಆದರೆ, ವೈಯಕ್ತಿಕ ದ್ವೇಷ ಹೆಚ್ಚಾಗಿ ಕಂಡು ಬರುತ್ತಿದೆ. ಈ ಕ್ಷೇತ್ರದಲ್ಲಿ ನ್ಯಾಯಯುತ ಚುನಾವಣೆ ಆಗಬೇಕಾದರೆ ಸೇನಾಪಡೆ ಅಗತ್ಯವಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದ ಮುನಿರತ್ನ
undefined
ಹೊರಗಿನಿಂದ ಬಂದವರು ಮನೆ ಮನೆಗೆ ಭೇಟಿ ಕೊಟ್ಟು ದಾಖಲೆ, ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ರೀತಿ ಕ್ಷೇತ್ರದಲ್ಲಿ ಹಿಂದೆ ಯಾವತ್ತೂ ನಡೆದಿಲ್ಲ. ಇಂಥ ಸಂಸ್ಕೃತಿ ನಮ್ಮ ಕ್ಷೇತ್ರದಲ್ಲಿ ಬೆಳೆಸುವುದು ಬೇಡ. ನಾನು ತುಂಬ ನೊಂದುಕೊಂಡು ಈ ಮಾತುಗಳನ್ನು ಆಡುತ್ತಿದ್ದೇನೆ. ಹೊರಗಿಂದ ಬಂದವರು ಕೊಲೆಗಳನ್ನು ಮಾಡುವವರೆಗೂ ಹೋಗಬೇಡಿ. ಸ್ಥಳೀಯ ಜನರಿಗೆ ಇದರಿಂದ ಮುಂದೆ ಸಮಸ್ಯೆಗಳಾಗುತ್ತವೆ ಎಂದು ಮನವಿ ಮಾಡಿದರು.
undefined

Latest Videos


ಮತದಾರರೆ ನಿಮ್ಮ ವೋಟರ್‌ ಐಡಿ, ದಾಖಲೆ, ಫೋನ್‌ ನಂಬರ್‌ ಕೇಳಿ ಪಡೆದುಕೊಳ್ಳುತ್ತಿದ್ದಾರೆ. ನಿಮಗೆ ಆಶ್ವಾಸನೆಗಳನ್ನೂ ಕೊಡುತ್ತಿದ್ದಾರೆ. ಬೇರೆಯವರ ಆಶ್ವಾಸನೆ, ಆಮಿಷಗಳಿಗೆ ಬಲಿಯಾಗಬೇಡಿ. ಇದು ಮುಂದೆ ಅನಾಹುತ ಸೃಷ್ಟಿಸಲಿದೆ. ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರಿದ್ದೀರಿ ಎಂದು ಇದೇ ವೇಳೆ ಮುನಿರತ್ನ ಅವರು ಮನವಿ ಮಾಡಿದರು.
undefined
ಕ್ಷೇತ್ರದಲ್ಲಿ ಬುಧವಾರ ನಡೆದ ಗದ್ದಲ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನ ಮಾಜಿ ಸಂಸದ ಧ್ರುವನಾರಾಯಣ್‌ ಅವರು ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡುತ್ತಿದ್ದರು. ಅದನ್ನು ನಮ್ಮ ಪಕ್ಷದ ಕಾರ್ಯಕರ್ತರು ತಡೆಯುವ ಪ್ರಯತ್ನ ಮಾಡಿದ್ದರು. ಮುನಿರತ್ನ ಅವರಿಗೆ ಕೆಟ್ಟಹೆಸರು ತರಲು ಏನೆಲ್ಲ ಮಾಡಬೇಕೊ ಅದನ್ನೆಲ್ಲ ಮಾಡುತ್ತೇವೆ ಎಂಬುದಾಗಿ ನೇರವಾಗಿ ಹೇಳಿದ್ದಾರೆ. ಹೋಗಿ ಮತ ಕೇಳುವುದು ತಪ್ಪಲ್ಲ, ಆದರೆ ಮತದಾರರಲ್ಲಿ ಅವರ ವೈಯಕ್ತಿಕ ದಾಖಲೆಗಳನ್ನು ಕೇಳುತ್ತಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮವರ ಮೇಲೆ ದೂರು ನೀಡಿದ್ದಾರೆ ಎಂದರು.
undefined
click me!