ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ: ಸರಿಸಮಾನರ ಜೊತೆ ಯುದ್ಧ ಎಂದ ಡಿಕೆಶಿ

First Published | Oct 23, 2020, 9:08 AM IST

ಬೆಂಗಳೂರು(ಅ.23): ನಮ್ಮನ್ನು ಬೆಂಗಳೂರಿನ ಜನ ಪ್ಯಾಕ್‌ ಮಾಡಿ ಕಳಿಸುತ್ತಾರೆ ಎಂದಿರುವವರಿಗೆ ಒಳ್ಳೆಯದಾಗಲಿ. ನಾನು ಯಾರಿಗೂ ಏನನ್ನೂ ಹೇಳುವುದಿಲ್ಲ. ಎದುರಾಳಿ ನಮ್ಮ ಸರಿ ಸಮನಾಗಿದ್ದರೆ ಯುದ್ಧ ಮಾಡಬಹುದು. ಇದಲ್ಲದಿದ್ದರೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ರಾಜರಾಜೇಶ್ವರಿ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಟಾಂಗ್‌ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಪಕ್ಷಗಳ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಂದಗೋಳ ಜೆಡಿಎಸ್‌ನ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್‌.ಅಕ್ಕಿ ಹಾಗೂ ಅವರ ನೂರಾರು ಬೆಂಬಲಿಗರಿಗೆ ಕಾಂಗ್ರೆಸ್‌ ಶಾಲು ಹೊದಿಸಿ, ಧ್ವಜ ನೀಡಿ ಡಿ.ಕೆ.ಶಿವಕುಮಾರ್‌ ಅವರು ಪಕ್ಷ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವರು, ರಾಜರಾಜೇಶ್ವರಿ ನಗರದಲ್ಲಿ ಮಾರಾಮಾರಿ ರಾಜಕಾರಣ ನಡೆಯುತ್ತಿದೆ. ಮಾರಾಮಾರಿ ರಾಜಕಾರಣ ಮಾಡುವಂತಹ ಸಂಸ್ಕೃತಿ ಇರುವವರನ್ನು ನಾವು ಬೆಳೆಸಿದೆವಲ್ಲ ಎಂದು ಈಗ ಪಶ್ಚಾತ್ತಾಪ ಪಡಬೇಕಾಗಿದೆ. ನಾನು ಯಾರಿಗೂ ಗುರುವಲ್ಲ. ಎಲ್ಲರಿಗೂ ಶಿಷ್ಯನಾಗಿ ಇರುತ್ತೇನೆ. ಕಾನೂನು ಪಾಲನೆ ಮಾಡಿ, ಜನರ ರಕ್ಷಣೆ ಮಾಡಿ, ಆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್‌ ಕ್ಷೇತ್ರವನ್ನಾಗಿ ಮಾಡಲು ಮಾತ್ರ ನಾವು ಪ್ರಯತ್ನಿಸುತ್ತೇವೆ ಎಂದರು.
undefined
ಕ್ಷೇತ್ರದಲ್ಲಿ ಹೆಣಗಳು ಬೀಳುತ್ತವೆ ಹೀಗಾಗಿ ಪ್ಯಾರಾ ಮಿಲಿಟರಿ ರಕ್ಷಣೆ ನೀಡಬೇಕು ಎಂದು ಪತ್ರ ಬರೆಯುವುದಾಗಿ ಇಲ್ಲಿನ ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಪತ್ರ ಬರೆಯಲು ಈಗ ತಡವಾಗಿದೆ ಅವರು ಮುಂಚೆಯೇ ಈ ಪತ್ರ ಬರೆಯಬೇಕಿತ್ತು. ಆ ಪತ್ರವನ್ನು ಮುಖ್ಯಮಂತ್ರಿಗಳಿಂದಲೋ ಅಥವಾ ಪಕ್ಷದ ಅಧ್ಯಕ್ಷರಿಂದಲೋ ಬರೆಸಿದ್ದಾರೆ ಉತ್ತಮವಾಗಿರುತ್ತಿತ್ತು ಎಂದರು.
undefined

Latest Videos


ಇದೇ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್‌, ಸರ್ಕಾರಗಳು ನೆರೆ ಸಂತ್ರಸ್ತರಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಕೇವಲ ಆಶ್ವಾಸನೆ ನೀಡುತ್ತಿವೆ. ಕಳೆದ ವರ್ಷ ಪ್ರವಾಹ ಬಂದಾಗ 35 ಸಾವಿರ ಕೋಟಿ ರು. ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ 1800 ಕೋಟಿ ರು. ಕೊಟ್ಟಿತ್ತು. ಮುಖ್ಯಮಂತ್ರಿಗಳು ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಬಾಡಿಗೆ ಕಟ್ಟಲು 5 ಸಾವಿರ ರು. ಕೊಡುವುದಾಗಿ ಹೇಳಿದ್ದರು. ಇನ್ನು ಅದು ಜನರ ಕೈಗೆ ಸೇರಿಲ್ಲ. ಇನ್ನು ಈ ವರ್ಷದ ವೈಮಾನಿಕ ಸಮೀಕ್ಷೆ ಈಗ ಮಾಡಿದ್ದು ಪರಿಹಾರ ಕೊಡೋದು ಯಾವಾಗ ಎಂದು ಪ್ರಶ್ನಿಸಿದರು.
undefined
ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಇತರ ಮುಖಂಡರು ಇದ್ದರು.
undefined
ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ನೀಡಿರುವ ಹೇಳಿಕೆ ಕುರಿತು ಇದೇ ವೇಳೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್‌ ಅವರು, ಈ ಬಗ್ಗೆ ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡುತ್ತೇನೆ. ಅವರಿಗೆ ಸೋನಿಯಾ ಗಾಂಧಿ ಅವರು ಏನಾದರೂ ಹೇಳಿರಬಹುದೇನೋ ಎಂದರು.
undefined
click me!