ಕೂಪ ಮಂಡೂಕ ಅರಗ ಜ್ಞಾನೇಂದ್ರಗೆ ಹುಚ್ಚು ಹಿಡಿದಿದೆ: ಕೆ.ಎಸ್.ಈಶ್ವರಪ್ಪ ಆಕ್ರೋಶ

Published : Apr 20, 2024, 07:23 AM IST

ಈಶ್ವರಪ್ಪನವರಿಗೆ ಬೂತ್‌ಗಳಲ್ಲಿ ಚೀಟಿ ಹಂಚಲು ಜನ ಇಲ್ಲ, ಅವರು ಸೋಲುವುದನ್ನು ನೋಡಲು ಸಾಧ್ಯವಿಲ್ಲ ಎಂಬ ಆರಗ ಜ್ಞಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಜ್ಞಾನೇಂದ್ರ ಅವರಿಗೆ ಭ್ರಮೆ ಕವಿದಿದೆ ಎಂದರು.

PREV
15
ಕೂಪ ಮಂಡೂಕ ಅರಗ ಜ್ಞಾನೇಂದ್ರಗೆ ಹುಚ್ಚು ಹಿಡಿದಿದೆ: ಕೆ.ಎಸ್.ಈಶ್ವರಪ್ಪ ಆಕ್ರೋಶ

ಶಿವಮೊಗ್ಗ (ಏ.20): ಕೂಪ ಮಂಡೂಕದಂತಿರುವ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಹುಚ್ಚು ಹಿಡಿದಿದೆ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

25

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ಈಶ್ವರಪ್ಪನವರಿಗೆ ಬೂತ್‌ಗಳಲ್ಲಿ ಚೀಟಿ ಹಂಚಲು ಜನ ಇಲ್ಲ, ಅವರು ಸೋಲುವುದನ್ನು ನೋಡಲು ಸಾಧ್ಯವಿಲ್ಲ ಎಂಬ ಆರಗ ಜ್ಞಾನೇಂದ್ರ ಹೇಳಿಕೆಗೆ ತಿರುಗೇಟು ನೀಡಿ, ಜ್ಞಾನೇಂದ್ರ ಅವರಿಗೆ ಭ್ರಮೆ ಕವಿದಿದೆ. 

35

ತಲೆ ಕೆಟ್ಟಿದೆ. ಅವರ ಕ್ಷೇತ್ರದಲ್ಲಿ ಯುವಕರು, ಬಜರಂಗದಳದ ಕಾರ್ಯಕರ್ತರು, ಪರಿವಾರದ ಕಾರ್ಯಕರ್ತರು, ಮಹಿಳಾ ಮತದಾರರು ದೊಡ್ಡ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುತ್ತಿದ್ದಾರೆ. ಇದನ್ನು ಕಂಡು ಅವರು ಕಂಗಾಲಾಗಿದ್ದಾರೆ. 

45

ನಿತ್ಯ ನನ್ನ ಬೆಂಬಲಿತ ಕಾರ್ಯಕರ್ತರ ಮನೆಗೆ ಹೋಗಿ ಓಲೈಸುವುದೇ ಅವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು. ನಾಳೆ ನಾನು ತೀರ್ಥಹಳ್ಳಿಯಲ್ಲಿ ಎರಡು ಸಭೆ ನಡೆಸುತ್ತಿದ್ದೇನೆ. ಜ್ಞಾನೇಂದ್ರ ಅವರಿಗೆ ಧೈರ್ಯ ಇದ್ದರೆ ಅವರೇ ಬಂದು ನೋಡಲಿ.

55

ಇಲ್ಲವೇ ಕಳ್ಳತನದಿಂದಲಾದರೂ ಅವರ ಕಡೆಯವರನ್ನು ಈ ಸಭೆಗೆ ಕಳುಹಿಸಲಿ, ನನ್ನ ಕಡೆ ಎಷ್ಟು ಜನ ಇದ್ದಾರೆ ಎಂದು ಗೊತ್ತಾಗುತ್ತದೆ. ನಾನು ಸೋಲುವುದನ್ನು ಅವರು ನೋಡುವುದು ಬೇಡ, ಗೆಲ್ಲುವುದನ್ನು ನೋಡಲಿ ಎಂದರು.

Read more Photos on
click me!

Recommended Stories