25 ಕೋಟಿ ಜನ 10 ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ: ವಿದೇಶಾಂಗ ಸಚಿವ ಜೈಶಂಕರ್

First Published | Apr 15, 2024, 7:49 PM IST

ಕೋವಿಡ್ ವೇಳೆ ವಿದೇಶಕ್ಕೆ ಲಸಿಕೆ ನೀಡಿದ್ದೇವೆ. ವಿಶ್ವದಲ್ಲಿ ಭಾರತದ ಘನತೆ ಜಿ 20 ಶೃಂಗಸಭೆ ಮೂಲಕ ಹೆಚ್ಚಿದೆ. ನಾವು 400 ಸ್ಥಾನ ತಲುಪ್ತೇವೆ ಅನ್ನೋದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಎಸ್.ಜೈಶಂಕರ್ ಹೇಳಿದರು. 

ಬೆಂಗಳೂರು (ಏ.15): ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆಯಾಗಿದೆ. ಮುಂದಿನ ಐದು ವರ್ಷ ಏನು ಮಾಡುತ್ತೇವೆ ಅನ್ನುವುದನ್ನು ಹೇಳಿದ್ದೇವೆ. ಕೇವಲ ಐದು ವರ್ಷ ಮಾತ್ರವಲ್ಲ, ಭವಿಷ್ಯದ ದೃಷ್ಟಿಯಿಂದಲೂ ನಿಮ್ಮ ‌ಸಹಕಾರ ಬೇಕು ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ.ಎಸ್.ಜೈಶಂಕರ್ ಹೇಳಿದರು. 

ನಗರದ 'ಹೊಟೇಲ್ ಶಾಂಗ್ರಿಲಾ'ದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿನ್ನೆ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿದ್ದೇವೆ. ಮುಂದಿನ 25 ವರ್ಷಗಳ ಯೋಜನೆ ಇದೆ. ನಾವು ಈಗ 5 ನೇ ಸ್ಥಾನದಲ್ಲಿ ಇದ್ದೇವೆ. ದೇಶದ ಆರ್ಥಿಕ ಪ್ರಗತಿ ಏರುಗತಿಯಲ್ಲಿ ಇದೆ.  25 ಕೋಟಿ ಜನ ಹತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರ ಬಂದಿದ್ದಾರೆ. ಇದು ದೇಶದ ಬೆಳವಣಿಗೆಯ ಸೂಚಕ ಎಂದರು.

Tap to resize

ಪ್ರತಿದಿನ ದಿನ ಹೈವೆ, ರೈಲ್ವೆ ಟ್ರಾಕ್ ನಿರ್ಮಾಣ, 7-8 ಏರ್ಪೋರ್ಟ್ ಪ್ರತಿ ವರ್ಷ ನಿರ್ಮಾಣ ಆಗ್ತಿದೆ. ಕೋವಿಡ್ ವೇಳೆ ವಿದೇಶಕ್ಕೆ ಲಸಿಕೆ ನೀಡಿದ್ದೇವೆ. ವಿಶ್ವದಲ್ಲಿ ಭಾರತದ ಘನತೆ ಜಿ 20 ಶೃಂಗ ಸಭೆ ಮೂಲಕ ಹೆಚ್ಚಿದೆ. ನಾವು 400 ಸ್ಥಾನ ತಲುಪ್ತೇವೆ ಅನ್ನೋದು ಕಾಂಗ್ರೆಸ್ ಚಿಂತೆಗೆ ಕಾರಣವಾಗಿದೆ. 

ಮೋದಿ ಸರ್ಕಾರ 300 ದಾಟಿದ್ದು ನೋಡಿದೆ ದೇಶ. ಈಗ ಮೋದಿ ಸರ್ಕಾರ 400 ಮುಟ್ಟೋದನ್ನೂ ದೇಶ ನೋಡಲಿದೆ. ಸಬ್ ಅರ್ಬನ್ ರೈಲು ಬೆಂಗಳೂರಿಗೆ ನೀಡಲಾಗಿದೆ. ಹೆಚ್ಎಎಲ್‌ಗೆ ಇಂದು ಫುಲ್ ಆರ್ಡರ್ ಇದೆ ಎಂದರು. ಕಳೆದ ಐದು ವರ್ಷಗಳ ಹಿಂದೆ ಇದು ಡೆಂಜರಲಿ ಇದೆ ಎಂದು ಆರೋಪಿಸಿದ್ರು. 

ರಷ್ಯಾ ಉಕ್ರೆನ್ ಯುದ್ಧ ಇಂಡೊ ಪೆಸಿಪಿಕ್ ಕ್ರೈಸಿಸ್ ಎಲ್ಲವನ್ನೂ ಜಾಗತೀಕವಾಗಿ ಎದುರಾಗಿದ್ದ ಬಿಕ್ಕಟ್ಟಿಗೆ ಮೋದಿ ನಿಭಾಯಿಸಿದ್ದಾರೆ. ಇರಾನ್ ಇಸ್ರೇಲ್ ಯುದ್ಧದ ಬಗ್ಗೆ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರ, ನಾವು ಮಾತಾಡಿದ್ದೇವೆ ಎಂದು ಹೇಳಿದರು. 

ಎರಡು ದೇಶಗಳ ಜೊತೆ ಮಾತಾಡಿದ್ದೇವೆ. ರಾಜ್ಯಕ್ಕೆ ಬರ ಪರಿಹಾರ ತಡವಾದ ಬಗ್ಗೆ ಕೇವಲ ಕರ್ನಾಟಕ ಮಾತ್ರ ಅಲ್ಲ ಕೆಲವು ರಾಜ್ಯಗಳದ್ದು ಬಾಕಿ ಇದೆ. ಎನ್ ಡಿ ಆರ್ ಆಫ್ ಗೆ ಅದರದ್ದೆ ಆದ ನಿಯಮ ಇದೆ. ಈಗ ಬಿಡುಗಡೆ ಚುನಾವಣಾ ‌ಕಮಿಷನ್ ಪರ್ಮಿಶನ್ ಬೇಕು. ಅವರ ಅನುಮತಿ ಕೇಳಿದ್ದೇವೆ. Pok ಪಾಕ್ ಆಕ್ರಮಿತ ಕಾಶ್ಮೀರ ಭಾರತದ್ದು ಎಂದರು.

ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವಥನಾರಾಯಣ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್ ಮತ್ತು ರಾಜ್ಯ ಮುಖ್ಯ ವಕ್ತಾರರಾದ ಶ್ರೀ ಅಶ್ವತ್ಥನಾರಾಯಣ್ ಅವರು ಉಪಸ್ಥಿತರಿದ್ದರು.

Latest Videos

click me!