ಹತ್ತು ಕೆಜಿ ಅಕ್ಕಿ ಬೇಕಾ, ಬೇಡಾವಾ: ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿದ ಕೇಂದ್ರ ಸಚಿವ ಜೋಶಿ

First Published Apr 14, 2024, 8:09 PM IST

ಮೋದಿ ಕಾಲದಲ್ಲಿ 10  ವರ್ಷದಲ್ಲಿ 12 ಕೋಟಿ ಗ್ಯಾಸ್ ಸಂಪರ್ಕ ಕೊಡಲಾಗಿದೆ. 15 ಲಕ್ಷ ಕಿ ಮೀ ಈಗ ಗ್ಯಾಸ್ ಪೈಪ್ ಪೈನ್ ಹಾಕುವ ಯೋಜನೆ ಆರಂಭವಾಗಿದೆ. ಹತ್ತು ಕೆಜಿ ಅಕ್ಕಿ ಬೇಕಾ ಬೇಡಾವಾ ಎಂದು ಸಿದ್ದರಾಮಯ್ಯ ಸ್ಟೈಲ್ ನಲ್ಲಿ ಮಿಮಿಕ್ರಿ ಮಾಡಿ ಪ್ರಲ್ಹಾದ್‌ ಜೋಶಿ ವ್ಯಂಗ್ಯ ಮಾಡಿದರು. 

ಬೆಳಗಾವಿ (ಏ.14): ಬಿಜೆಪಿ ಪ್ರಣಾಳಿಕೆಯಲ್ಲಿ ನಾರಿ ಶಕ್ತಿಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಬಡವರು, ಯುವಕರು, ಅನ್ನದಾತ, ಮಹಿಳೆಯನ್ನು ಸರಿಯಾಗಿ ನೋಡಿದ್ರೆ ಸಾಕು ಪ್ರಧಾನಿ ಹೇಳಿದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಶೇ 60ರಷ್ಟು ಮಹಿಳೆಯರು ಪಾಲ್ಗೊಂಡಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಮೂರು ಲಕ್ಷ ಮಹಿಳೆಯರನ್ನು ಲಕ್ ಪತಿ ದೀದಿ ಮಾಡೋ ಗುರಿ ಕೇಂದ್ರ ಸರ್ಕಾರಕ್ಕೆ ಇದೆ. ಮೋದಿ ಕಾಲದಲ್ಲಿ 10  ವರ್ಷದಲ್ಲಿ 12 ಕೋಟಿ ಗ್ಯಾಸ್ ಸಂಪರ್ಕ ಕೊಡಲಾಗಿದೆ. 15 ಲಕ್ಷ ಕಿ ಮೀ ಈಗ ಗ್ಯಾಸ್ ಪೈಪ್ ಪೈನ್ ಹಾಕುವ ಯೋಜನೆ ಆರಂಭವಾಗಿದೆ. ಹತ್ತು ಕೆಜಿ ಅಕ್ಕಿ ಬೇಕಾ ಬೇಡಾವಾ ಎಂದು ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿ ವ್ಯಂಗ್ಯ ಮಾಡಿದರು. 

ಮೋದಿ ಗ್ಯಾರಂಟಿ ಜಗತ್ತಿನ ಐದನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಿ ಮಾಡಿದೆ. ನಿಮ್ಮ ರೀತಿ ಸುಳ್ಳು ಗ್ಯಾರಂಟಿ ಅಲ್ಲ. ದೇಶದಲ್ಲಿ ಯುಪಿಎ 10 ವರ್ಷ ಆಡಳಿತ ಮಾಡಿತ್ತು. ಯುಪಿಎ ಹೆಸರು ಯಾಕೆ ಬದಲಾವಣೆ ಮಾಡಿದ್ರು. ಯುಪಿಎ ಸಂಪೂರ್ಣ ವಿಫಲರಾದ ಕಾರಣ, ಯುಪಿಎ ಹಗರಣ ನೋಡಿ ಮತ ಹಾಕಲ್ಲ.

ಐಎನ್‌ಡಿಐ ಒಕ್ಕೂಟದಲ್ಲಿ ಇಂದಿಗೂ ಅನೇಕ ಸಮಸ್ಯೆಗಳು ಇವೆ. ಒಕ್ಕೂಟದಲ್ಲಿ ತಾಳ ಇಲ್ಲ, ತಂತಿ ಇಲ್ಲ. ಕುಣಿಯೋಣ ಬಾರಾ ಕುಣಿಯೋಣ ಬಾರಾ ಎನ್ನುವ ದ. ರಾ ಬೇಂದ್ರೆ ಹಾಡಿನ ರೀತಿ ಇದೆ. ದೆಹಲಿಯಲ್ಲಿ ದೋಸ್ತಿ, ಕೊಲ್ಕತ್ತಾಸಲ್ಲಿ ಕುಸ್ತಿ ಮಾಡೋ ಮನಸ್ಥಿತಿ ಇದೆ. 

ಮುಸ್ಲಿಂ ಲಿಗ್ ಜೊತೆಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ದೇಶ ಚಿದ್ರ ಮಾಡೋ ಪಕ್ಷ ಎಂದರೇ ಕಾಂಗ್ರೆಸ್, ಮುಸ್ಲಿಂ ಲಿಗ್ ಇಂತಹ ಪಕ್ಷದ ಜೊತೆಗೆ ಕಾಂಗ್ರೆಸ್ ಈಗ ಕೈ ಜೋಡಿಸಿದ್ದು ನಾಚಿಕೆಗೇಡು. ದೇಶದಲ್ಲಿ ಈಗ ಉಗ್ರವಾದ ಕಡಿಮೆ ಆಗಿದೆ. ಪಾಕಿಸ್ತಾನ ಜಿಂದಾಬಾದ್ ಹೇಳಿದವರೇ ಮೇಲೆ ಕೇಸ್ ಇಲ್ಲ. 

ಹನುಮಾನ್ ಚಾಲಿಸ್ ಹಾಕಿದವರ ಮೇಲೆ ಕೇಸ್ ಹಾಕುತ್ತಿದ್ದಾರೆ. ದೇಶದಲ್ಲಿ ನಾವೇ ಸರ್ಕಾರ ರಚನೆ ಮಾಡೋದು ಎಂದು ಸಿದ್ದರಾಮಯ್ಯ ಹೇಳಿದ್ರು. ಸರ್ಕಾರ ರಚನೆಗೆ 270 ಸಂಸದರು ಬೇಕು. ಆದರೆ ಕಾಂಗ್ರೆಸ್ ಸ್ಪರ್ಧೆ ಮಾಡಿರೋದು ಕೇವಲ 230 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದೆ ಎಂದರು.

click me!