ದೇಶದ್ರೋಹಿ ಕೃತ್ಯ ನಿಗ್ರಹಕ್ಕೆ ಮೋದಿ ಸರ್ಕಾರವೇ ಬೇಕು: ಪ್ರಲ್ಹಾದ್‌ ಜೋಶಿ

First Published Apr 13, 2024, 4:40 PM IST

ಭಾರತದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅತ್ಯಗತ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರತಿಪಾದಿಸಿದರು. 

ಹುಬ್ಬಳ್ಳಿ (ಏ.13): ಭಾರತದಲ್ಲಿ ದೇಶದ್ರೋಹಿ ಕೃತ್ಯಗಳನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅತ್ಯಗತ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಪಾದಿಸಿದರು. ನಗರದಲ್ಲಿ ರಜಪೂತ ಮತ್ತು ಮರಾಠ ರಜಕ್ ಸಮಾಜದ ಪ್ರಮುಖರೊಂದಿಗೆ ನಡೆಸಿದ ಸಭೆ ಉದ್ದೇಶಿಸಿ ಮಾತನಾಡಿದರು.

ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಎಲ್ಲ ದೇಶದ್ರೋಹಿ ಕೃತ್ಯಗಳನ್ನು ನಿಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಸರಿ ಎಂದು ಹೇಳಿದರು. ದೇಶದಲ್ಲಿ ಎಲ್ಲೇ ಆಗಲಿ ಉಗ್ರ ಚಟುವಟಿಕೆಗಳನ್ನು ಮೋದಿ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಕಾನೂನಾತ್ಮಕ ಕ್ರಮಕೈಗೊಂಡು ಎದುರಿಸಿದೆ. 

ಅದರ ಪರಿಣಾಮ ದೇಶದಲ್ಲಿ ಭಯೋತ್ಪಾದನೆ ಕ್ಷೀಣಿಸಿ ಶಾಂತಿ ನೆಲೆಸಿದೆ ಎಂದರು.ಮೋದಿ ಅವರ ಖಡಕ್ ನಿಲುವುಗಳಿಂದಾಗಿ ಇಂದು ದೇಶ ಸುರಕ್ಷಿತವಾಗಿದೆ. ಜನರೂ ಶಾಂತಿಯಿಂದ ಜೀವಿಸುವಂತಾಗಿದೆ. 

ಸದಾ ಬಡವರ ಏಳಿಗೆಗಾಗಿ ಶ್ರಮಿಸುತ್ತಿರುವ ಮೋದಿ ಅವರ ಕೈ ಬಲಪಡಿಸಲು ಈ ಬಾರಿಯೂ ಸರ್ವ ಸಮಾಜದವರು ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ನೆರೆದಿದ್ದ ರಜಪೂತ, ರಜಕ್ ಮರಾಠ ಸಮಾಜದವರು ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

ನಾನು ಹಿಟ್ಲರ್‌ ಆಗಿದ್ದರೆ ವಿನಯ ಕುಲಕರ್ಣಿ ಗೆಲ್ಲಲು ಸಾಧ್ಯವಾಗುತ್ತಿತ್ತಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ. ಆ ಮೂಲಕ ಧಾರವಾಡದಲ್ಲಿ ಹಿಟ್ಲರ್‌ ಆಡಳಿತವಿದೆ ಎಂದು ಟೀಕೆ ಮಾಡಿದ್ದ ಮಾಜಿ ಸಚಿವ ವಿನಯ್‌ ಕುಲಕರ್ಣಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

click me!