RR ನಗರ ಬೈ ಎಲೆಕ್ಷನ್: ಬಿಜೆಪಿಗೆ ಶಾಕ್ ಕೊಟ್ಟ ಡಿಕೆಶಿಗೆ ಮರ್ಮಾಘಾತ...!

First Published | Oct 21, 2020, 2:58 PM IST

ಬೆಂಗಳೂರಿನ ಆರ್.ಆರ್. ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದರ ಮಧ್ಯೆ ಪಕ್ಷಾಂತರ ಪರ್ವ ಸಹ ಜೋರಾಗಿದ್ದು, ರಾಜರಾಜೇಶ್ವರಿ ನಗರದಲ್ಲಿ ಅಪರೇಷನ ಹಸ್ತದ ಮೂಲಕ ಡಿಕೆ ಶಿವಕುಮಾರ್ ಅವರು ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದರು, ಇದೀಗ ಬಿಜೆಪಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದೆ. 

ಆಪರೇಷನ್ ಹಸ್ತ ಮಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಬಿಜೆಪಿ ಆಪರೇಷನ್ ಕಮಲದ ಮೂಲಕ ಶಾಕ್ ಕೊಟ್ಟಿದೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮಾಜಿ ಬಿಬಿಎಂಪಿ ಸದಸ್ಯರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
Tap to resize

ಬಿಜೆಪಿ ಪಕ್ಷದ ಅಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯ್ತು
ಡಿಕೆ ಬ್ರದರ್ಸ್‌ ಸಹ ಆಪರೇಷನ್ ಹಸ್ತದ ಮೂಲಕ ಬಿಜೆಪಿ ನಾಯಕರಿಗೆ ಗಾಳ ಹಾಕಿದ್ರು.
ಇದೀಗ ಬಿಜೆಪಿಯೇ ಆಪರೇಷನ್ ಕಮಲದ ಮೂಲಕ ಮಾಜಿ ಬಿಬಿಎಂಪಿ ಸದಸ್ಯರಿಗೆ ಗಾಳ ಹಾಕುವ ಮೂಲಕ ಡಿಕೆ ಬ್ರದರ್ಸ್‌ಗೆ ತಿರಗೇಟು ಕೊಟ್ಟಿದೆ.
ಇನ್ನು ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Latest Videos

click me!