ಕೊರೋನಾದಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಕರ್ನಾಟಕದ ಶಾಸಕ

First Published | Aug 19, 2020, 3:51 PM IST

ಕಳೆದ ತಿಂಗಳು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಪ್ಲಾಸ್ಮಾವನ್ನು ಕೋವಿಡ್  ರೋಗಿಗಳಿಗೆ ದಾನ ಮಾಡಿದ್ದಾರೆ. ಈ ಮೂಲಕ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಕರ್ನಾಟಕದ ಕಾಂಗ್ರೆಸ್ ಶಾಸಕರೊಬ್ಬರು ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ದಾನ ಮಾಡಿದ್ದಾರೆ.
ಕುಣಿಗಲ್ ಶಾಸಕ ಡಾ. ರಂಗನಾಥ್‌ ಅವರು ತಮ್ಮ ಪ್ಲಾಸ್ಮಾವನ್ನು ಕೋವಿಡ್ ರೋಗಿಗಳಿಗೆ ದಾನ ಮಾಡಿದರು.
Tap to resize

ಬೆಂಗಳೂರಿನ ಕಾರ್ಪೊರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಾಸಕರು ಬುಧವಾರ ಪ್ಲಾಸ್ಮಾ ದಾನ ಮಾಡಿದ್ದಾರೆ.
ಇದರೊಂದಿಗೆ ಪ್ಲಾಸ್ಮಾ ದಾನ ಮಾಡಿದ ದೇಶದ ಮೊದಲ ಶಾಸಕ ಎಂಬ ಹೆಗ್ಗಳಿಕೆಗೆ ಡಾ. ರಂಗನಾಥ್ ಪಾತ್ರರಾಗಿದ್ದಾರೆ.
ಡಾ. ರಂಗನಾಥ್‌ ಜೊತೆ ಅವರ ಸಹೋದರ ಡಾ.ರಾಮಚಂದ್ರ ಪ್ರಭು ಎನ್ನುವ ಕೂಡ ಪ್ಲಾಸ್ಮಾ ದಾನ ಮಾಡಿದರು,
ಕುಣಿಗಲ್ ಶಾಸಕ ಡಾ. ರಂಗನಾಥ್‌ ಅವರಿಗೆ ಕಳೆದ ತಿಂಗಳು ಕೊರೋನಾ ಸೋಂಕು ತಗುಲಿತ್ತು

Latest Videos

click me!