2023ರ ಚುನಾವಣೆಗೆ ಪೂರ್ವ ತಯಾರಿ: ಜನ ಧ್ವನಿ ಪಾದಯಾತ್ರೆಗೆ ಪಾಂಚಜನ್ಯ ಮೊಳಗಿಸಿದ ಡಿಕೆಶಿ

Published : Mar 01, 2021, 05:48 PM IST

ರಾಜ್ಯದಲ್ಲಿ ಮಂದಿನ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋಲಾರದ ಮೂಡಣ ಬಾಗಿಲು ದೇವಮೂಲೆ ಮುಳಬಾಗಲು ತಾಲೂಕಿನ ಕುರುಡುಮಲೆಯ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಪಾಂಚಜನ್ಯ ಮೊಳಗಿಸಿದ್ದಾರೆ.‌ 

PREV
17
2023ರ ಚುನಾವಣೆಗೆ ಪೂರ್ವ ತಯಾರಿ: ಜನ ಧ್ವನಿ ಪಾದಯಾತ್ರೆಗೆ ಪಾಂಚಜನ್ಯ ಮೊಳಗಿಸಿದ ಡಿಕೆಶಿ

ರಾಜ್ಯದಲ್ಲಿ ಮಂದಿನ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದುಗೆಗೆ ತರಲು ಪಣತೊಟ್ಟಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಕೋಲಾರದ ಮೂಡಣ ಬಾಗಿಲು ದೇವಮೂಲೆ ಮುಳಬಾಗಲು ತಾಲೂಕಿನ ಕುರುಡುಮಲೆಯ ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ಪಾಂಚಜನ್ಯ ಮೊಳಗಿಸಿದ್ದಾರೆ

27

ಈಡೀ ದಿನ ಕೋಲಾರ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಅವರು ಕುರುಡುಮಲೆ, ಆಂಜನೇಯಸ್ವಾಮಿ ದೇವಾಲಯ, ದರ್ಗಾಗೆ ಭೇಟಿ ನೀಡಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

37

ರಾಜ್ಯದ ಎಲ್ಲಾ ಭಾಗದಲ್ಲೂ ಮಳೆ-ಬೆಳೆ ಆಗಬೇಕೆಂದು ಪ್ರಾರ್ಥನೆ ಮಾಡಿದ್ದು, ಎಲ್ಲವನ್ನು ವಿನಾಯಕ ಕರುಣಿಸಿದ್ದಾನೆ. ಈ ವಿಘ್ನ ನಿವಾರಕನ ಮೇಲೆ ‌ನಮಗೆ ನಂಬಿಕೆ ಇದೆ. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ನಮ್ಮಲ್ಲಿ ಇರೋದು ಒಂದೇ ಗುಂಪು ಅದು ಕಾಂಗ್ರೆಸ್ ಗುಂಪು. ಸಿಎಂ ಗಾದಿಗಾಗಿ ಯಾವುದೇ ಪೈಪೋಟಿ ಇಲ್ಲ. ಕಾಂಗ್ರೆಸ್ ಪಕ್ಷವೇ ಮೊದಲು, ಪಕ್ಷವನ್ನ ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದರು.

47

ಕುರುಡುಮಲೆ‌ ದರ್ಶನ ಪಡೆದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಎಸ್​​ಎಂ ಕೃಷ್ಣ ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಇಲ್ಲಿಗೆ ಬಂದು ಪಾಂಚಜನ್ಯ ಮೊಳಗಿಸಿದ್ದರು. ಸದ್ಯ ಮುಂದಿನ ಚುನಾವಣೆಯಲ್ಲಿ ವಿಜಯಕ್ಕಾಗಿ ವಿನಾಯಕನ ದರ್ಶನ ಪಡೆದಿದ್ದು, ರಾಜ್ಯಕ್ಕೆ ಆಗುತ್ತಿರುವ ಅನೇಕ ವಿಘ್ನಗಳನ್ನು ನಿವಾರಿಸಲು ವಿನಾಯಕನ ಬಳಿ ಪಾರ್ಥನೆ ಮಾಡಿದ್ದಾಗಿ ಹೇಳಿದ್ದರು.

57

ಮುಂದೆ ನಮ್ಮ ಪಕ್ಷ ಅಧಿಕಾರಕ್ಕೆ ಬರೋಲ್ಲವೆಂದು ಬಿಜೆಪಿ ಅವರಿಗೆ ಅರ್ಥ ಆಗಿದೆ. ನಾನು ಅಧಿಕಾರ ಹಿಡಿಯುವುದಲ್ಲ ರಾಜ್ಯದ ಜನತೆ ಮುಂದೆ ಅಧಿಕಾರ ಹಿಡಿಯುತ್ತಾರೆ. ಮಾರ್ಚ್​​ 3ರಂದು ನಮ್ಮ ಯಾತ್ರೆ ಆರಂಭವಾಗುತ್ತೆ. ಮೊದಲು ದೇವನಹಳ್ಳಿಯಿಂದ ಆರಂಭಿಸಿ ಈ ವರ್ಷದಲ್ಲಿ ನೂರು ವಿಧಾನ ಸಭೆ ಕ್ಷೇತ್ರಗಳಿಗೆ ಭೇಟಿ‌ ನೀಡುತ್ತೇನೆ. ಎಲ್ಲಿ ನಾವು ಸೋತಿದ್ದೇವೆ, ಅಲ್ಲಿ ಪ್ರವಾಸ ಮಾಡುತ್ತೇವೆ. ಪಾದಯಾತ್ರೆ ಮೂಲಕ ಪಕ್ಷ ಸಂಘಟನೆ ಮಾಡುತ್ತೇವೆ. ನಂತರದ ಕಾರ್ಯಕ್ರಮ ಮುಂದೆ ಪ್ರಕಟಿಸುತ್ತೇವೆ. ಮರುಚುನಾವಣೆಗಳು ಸಹ ನಮ್ಮ ಮುಂದಿದ್ದು, ಅದನ್ನು ನೋಡಿಕೊಂಡು ತಯಾರಿ ಮಾಡುತ್ತೇವೆ ಎಂದರು.

67
ನಾಯಕರಿಗೆ ನೂರಾರು ಕಾರ್ಯಕರ್ತರು ಕೋಲಾರ ‌ಗಡಿ ರಾಮಸಂದ್ರ ಬಳಿ ಸ್ವಾಗತ ಕೋರಿದರು. ಇನ್ನು ಡಿ.ಕೆ. ಶಿವಕುಮಾರ್​ ಮಾರ್ಚ್​ 3ರಂದು ದೇವನಹಳ್ಳಿಯಿಂದ ಪಕ್ಷ ಸಂಘಟನೆಗೆ 'ಜನ ಧ್ವನಿ' ಪಾದಯಾತ್ರೆ ಮಾಡಲಿದ್ದಾರೆ.

77

ಕೋಲಾರದ ಕಾಂಗ್ರೆಸ್ ರ್ಯಾಲಿಯಲ್ಲಿ ಕಿಕ್ಕಿರಿದು ಸೇರಿದ ಕಾರ್ಯಕರ್ತರು

click me!

Recommended Stories