ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಪುತ್ರ ಅರ್ಜುನ್ ಮತ್ತು ಐಶ್ವರ್ಯ ವಿವಾಹ ಇಂದು (ಭಾನುವಾರ) ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದರು.
ವಿವಾಹದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಇವತ್ತು ಮದುಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡೋದಿಲ್ಲ. ಹಾಗೇ ಮೈಸೂರು ಪಾಲಿಕೆ ಚುನಾವಣೆ ವಿಚಾರದ ಬಗ್ಗೆಯೂ ಪಾರ್ಟಿಯ ಒಳಗಡೆ ಮಾತನಾಡುತ್ತೇನೆ, ಇಲ್ಲೆಲ್ಲ ಮಾತಾಡಲ್ಲ ಎಂದು ಹೇಳಿದರು.
ಮೈಸೂರು ಮೇಯರ್ ಚುನಾವಣೆಯಲ್ಲಿ ತಮಗೆ ಉಂಟಾಗಿರುವ ಹಿನ್ನೆಡೆ ಬಗ್ಗೆ ಹಾಗೂ ತಮ್ಮ ಹಿಂದ ಸಮಾವೇಶ ಮಾಡುವ ಬಗ್ಗೆಯೂ ಹೈಕಮಾಂಡ್ ಗಮನಕ್ಕೆ ತರುತ್ತಾರೆ ಅಂತಾ ಹೇಳಲಾಗಿತ್ತು. ಆದರೆ ಇಂದು ಯಾವುದೇ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಅಂತಾ ಸಿದ್ದರಾಮಯ್ಯ ಹೇಳಿರೋದು ಕುತೂಹಲ ಮೂಡಿಸಿದೆ.
ಮೈಸೂರು ಪಾಲಿಕೆ ಕೈತಪ್ಪಿದ್ದರಿಂದ ಸಿದ್ದರಾಮಯ್ಯ ಅವರು ರೆಸಾರ್ಟ್‌ಗೆ ತೆರಳಿದ್ದರು. ಬಳಿಕ ಅಲ್ಲಿಂದ ಇಂದು (ಭಾನುವಾರ) ನವದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.