ಕೆಪಿಸಿಸಿಯ 5 ಕಾರ್ಯಾಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ: ಯಾರಿಗೆ ಯಾವ ಜಿಲ್ಲೆ?
First Published | Feb 25, 2021, 5:48 PM ISTರಾಜ್ಯ ಬಿಜೆಪಿ ಬುಧವಾರ ಅಷ್ಟೇ ಹತ್ತು ವಕ್ತಾರರನ್ನು ನೇಮಕಗೊಳಿಸಿದ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಕೆಪಿಸಿಸಿಯ 5 ಕಾರ್ಯಾಧ್ಯಕ್ಷರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ನೀಡಿ ಆದೇಶಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಇಂದು (ಗುರುವಾರ) ಆದೇಶ ಹೊರಡಿಸಿದ್ದು, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ರಾಮಲಿಂಗರೆಡ್ಡಿ, ಸಲೀಂ ಅಹ್ಮದ್, ಸತೀಶ್ ಜಾರಕಿಹೊಳಿ, ಧ್ರುವನಾರಾಯಣ್ ಅವರಿಗೆ ಜಿಲ್ಲೆಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡಿದ್ದಾರೆ. ಯಾರಿಗೆ ಯಾವ ಜಿಲ್ಲೆಯ ಹೊಣೆ ಎನ್ನುವ ಮಾಹಿತಿ ಇಲ್ಲಿದೆ.