ಮಂತ್ರಾಲಯ ಶ್ರೀಗಳ ಭೇಟಿ ಮಾಡಿ ಆಶೀರ್ವಾದ ಪಡೆದ ಕೊಪ್ಪಳ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ್

First Published | Apr 18, 2024, 8:22 PM IST

 ಬಿಜೆಪಿ ಹೈಕಮಾಂಡ್ ಈ ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸ್ಪರ್ಧೆಗೆ ಕರಡಿ ಸಂಗಣ್ಣರನ್ನ ಕೈಬಿಟ್ಟು ಹೊಸ ಮುಖವಾದ ಡಾ.ಬಸವರಾಜ ಅವರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ. ಲೋಕಸಭಾ ಚುನಾವಣೆ ಗೆಲುವಿಗೆ ಭರ್ಜರಿ ಪ್ರಚಾರ ನಡೆಸುತ್ತಿರುವ ಡಾ.ಬಸವರಾಜ್ ಇಂದು ಗಂಗಾವತಿ ನಗರದಲ್ಲಿರುವ ಮಂತ್ರಾಲಯ ಶ್ರೀಗಳ ದರ್ಶನ ಪಡೆದರು.

ಈ ಹಿಂದೆ ಎರಡು ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂಗಣ್ಣ ಕರಡಿ, ಮೂರನೇ ಬಾರಿಯೂ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಹೈಕಮಾಂಡ್ ಲೆಕ್ಕಾಚಾರ ಹಾಕಿ ಅವರಿಗೆ ಟಿಕೆಟ್ ನೀಡುವುದು ಕೈಬಿಟ್ಟು ಕೊಪ್ಪಳದಲ್ಲಿ ಹೊಸ ಮುಖವಾಗಿರುವ ಡಾ ಬಸವರಾಜ ಅವರಿಗೆ ಟಿಕೆಟ್ ನೀಡಿದೆ.

ಇದೀಗ ಲೋಕಸಭಾ ಚುನಾವಣೆ ಗೆಲ್ಲಲು ಪಣತೊಟ್ಟಿರುವ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಷೇತ್ರದಾದ್ಯಂತ ದಣಿವರಿಯದೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇಂದು  ಮಂತ್ರಾಲಯ ಶ್ರೀಗಳನ್ನು ಭೇಟಿ ಮಾಡಿ ಚುನಾವಣೆ ಗೆಲುವಿಗಾಗಿ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದಿದ್ದಾರೆ.

Tap to resize

ನಗರ ಗಂಗಾವತಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಮಠದಲ್ಲಿ ಶ್ರೀಗಳ ದರ್ಶನ ಪಡೆದರು. ಬಳಿಕ ಶ್ರೀಗಳಿಗೆ ಸನ್ಮಾನಿಸಿದರು. ಬಳಿಕ ಮಠದಲ್ಲಿ ನೆರೆದಿದ್ದ ಭಕ್ತರಿಗೆ ಮತಯಾಚಿಸಿದರು. ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು. ವಕೀಲರ ಸಂಘ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗಿರೇಗೌಡ, ಪಾನಗಂಟಿ ಸೇರಿದಂತೆ ಇತರೆ ಮುಖ್ಯಂಡರು ಸಾಥ್ ನೀಡಿದರು.

Latest Videos

click me!