ಇಂಥ ಘಟನೆಗಳಿಗೆ ಕಾರಣವಾದ ಈ ಸರಕಾರ ಬಹಳ ದಿನ ಉಳಿಯುವುದಿಲ್ಲ. ಇದು ಮೂಲಭೂತವಾದಿಗಳಿಗೆ ಬೆಂಬಲ ಕೊಡುವ ಸರಕಾರ ಎಂದು ಬ್ರಾಂಡ್ ಆಗಿದೆ. ಇದು ಜನಕ್ಕೆ ಗೊತ್ತಾಗಿದೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಜನರು ಇವರಿಗೆ ಪಾಠ ಕಲಿಸುತ್ತಾರೆ ಎಂದರು. ನಿಮ್ಮ ಏಕೈಕ ಎಂಪಿ, ಎಐಸಿಸಿ ಅಧ್ಯಕ್ಷ ಖರ್ಗೆಯವರು ಸಂಸತ್ತಿನಲ್ಲಿ ಏನು ಮಾಡಿದ್ದಾರೆ? ಕರ್ನಾಟಕದ ಪರವಾಗಿ ಬಾಯಿ ಬಿಟ್ಟೇ ಇಲ್ಲ; ನೀವೇನು ಮಾಡಿದ್ದೀರಿ ಎಂದು ರಾಜ್ಯದ ಜನರು ಕೇಳುತ್ತಿದ್ದಾರೆ ಎಂದು ತಿಳಿಸಿದರು.
ಹಿಂದೂಗಳ ರಕ್ಷಣೆ ಬಗ್ಗೆ ಆತಂಕ ಉಂಟಾಗಿದೆ. ದರಿದ್ರ ಸರಕಾರ ಇದು. ನಯಾಪೈಸೆ ಹಣ ಇಲ್ಲ. ಮೇ ಜೂನ್ ನಂತರ ಸಂಬಳ ಕೊಡಲು ದುಡ್ಡಿಲ್ಲ ಎಂಬ ಸ್ಥಿತಿ ಬಂದಿದೆ. ಪಿಂಚಣಿ, ಸ್ಕಾಲರ್‍ಶಿಪ್ ಕೊಟ್ಟಿಲ್ಲ. ಇದರ ಜೊತೆಗೆ ಕರ್ನಾಟಕದ ಶಾಂತಿಯ ತೋಟವನ್ನು ಮತಕ್ಕಾಗಿ ಹಾಳು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಇದರ ವಿರುದ್ಧ ಹೋರಾಟ ಮುಂದುವರಿಸಲಿದ್ದೇವೆ ಎಂದು ಎಚ್ಚರಿಸಿದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಅವರು ಹಾಜರಿದ್ದರು.