ಸದಸ್ಯರ ಲೆಕ್ಕಾಚಾರದಲ್ಲಿ ವಿಶ್ವದ ಅತಿದೊಡ್ಡ 10 ರಾಜಕೀಯ ಪಕ್ಷಗಳಿವು!

Published : Sep 15, 2023, 06:45 PM ISTUpdated : Sep 15, 2023, 06:46 PM IST

ಈ ಜಗತ್ತಿನಲ್ಲಿ ಲೆಕ್ಕವಿದಷ್ಟು ರಾಜಕೀಯ ಪಕ್ಷಗಳಿವೆ. ಬಹುಶಃ ಭಾರತದಲ್ಲಿ ಇರುವಷ್ಟು ರಾಜಕೀಯ ಪಕ್ಷಗಳು ಮತ್ಯಾವ ದೇಶದಲ್ಲೂ ಇಲ್ಲ. ಹಾಗಿದ್ದರೆ, ಸದಸ್ಯರ ಲೆಕ್ಕಾಚಾರದಲ್ಲಿ ವಿಶ್ವದ 10 ಅತಿದೊಡ್ಡ ರಾಜಕೀಯ ಪಕ್ಷಗಳ ಲಿಸ್ಟ್‌ ಇಲ್ಲಿದೆ.  

PREV
110
ಸದಸ್ಯರ ಲೆಕ್ಕಾಚಾರದಲ್ಲಿ ವಿಶ್ವದ ಅತಿದೊಡ್ಡ 10 ರಾಜಕೀಯ ಪಕ್ಷಗಳಿವು!

10. ಪಾಕಿಸ್ತಾನ ತೆಹ್ರಿಕ್‌ ಇ ಇನ್ಸಾಫ್‌: ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಇಮ್ರಾನ್‌ ಖಾನ್‌ ಅಧ್ಯಕ್ಷರಾಗಿರುವ ಪಾಕಿಸ್ತಾನ್‌ ತೆಹ್ರಿಕ್‌ ಇ ಇನ್ಸಾಫ್‌ ಪಕ್ಷ 1 ಕೋಟಿ ಸದ್ಯಸರನ್ನು ಹೊಂದಿದ್ದು, ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

210

09. ಆಮ್‌ ಆದ್ಮಿ ಪಾರ್ಟಿ: 2011ರಲ್ಲಿ ದೇಶಪೂರ್ತಿ ಸುದ್ದಿಯಾಗಿದ್ದ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಉದ್ಭವವಾದ ಪಕ್ಷ ಆಮ್‌ ಆದ್ಮಿ ಪಾರ್ಟಿ. ಮಾಜಿ ಐಐಟಿ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಅರವಿಂದ್‌ ಕೇಜ್ರಿವಾಲ್‌ ಅವರಿಂದ ಆರಂಭವಾದ ಈ ಪಕ್ಷ 1.05 ಕೋಟಿ ಸದಸ್ಯರನ್ನು ಹೊಂದಿದೆ.

310

08. ಪ್ರಾಸ್ಪರಿಟಿ ಪಾರ್ಟಿ: ಆಫ್ರಿಕಾದ ಇಥಿಯೋಪಿಯಾ ದೇಶದ ಪಕ್ಷ ಪ್ರಾಸ್ಪರಿಟಿ ಪಾರ್ಟಿ. 2019ರಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಬೆ ಅಹ್ಮದ್‌ ಅಲಿ ಇದನ್ನು ಸ್ಥಾಪಿಸಿದ್ದರು. ಈ ಪಕ್ಷದಲ್ಲಿರುವ ಒಟ್ಟು ಸದಸ್ಯರ ಸಂಖ್ಯೆ 1.1 ಕೋಟಿ. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

410

07. ಎಕೆ ಪಾರ್ಟಿ (ಎಕೆಪಿ): 22 ವರ್ಷಗಳ ಹಿಂದೆ ಟರ್ಕಿಯಲ್ಲಿ ಸ್ಥಾಪನೆಗೊಂಡ ಈ ಪಕ್ಷಕ್ಕೆ ಈಗ ರೆಸೆಪ್ ತಯ್ಯಿಪ್ ಎರ್ಡೋಗನ್ ನಾಯಕ. ಇವರು ಟರ್ಕಿಯ ಅಧ್ಯಕ್ಷರೂ ಹೌದು. 1.24 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ 7ನೇ ಸ್ಥಾನದಲ್ಲಿದೆ.

510

06. ಎಐಎಡಿಎಂಕೆ: ಎಂಜಿ ರಾಮಚಂದ್ರನ್‌ರಿಂದ 50 ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಆರಂಭವಾದ ಪಕ್ಷ, ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಅಂದರೆ ಎಐಎಡಿಎಂಕೆ. ಪ್ರಸ್ತುತ ಇದು 1.6 ಕೋಟಿ ಸದಸ್ಯರನ್ನು ಹೊಂದಿದ್ದು, ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

610

05. ರಿಪಬ್ಲಿಕನ್‌ ಪಾರ್ಟಿ: ಅಮೆರಿಕದಲ್ಲಿ ಬರೋಬ್ಬರಿ 169 ವರ್ಷಗಳ ಹಿಂದೆ ಆರಂಭವಾದ ಅಬ್ರಾಹಂ ಲಿಂಕನ್‌ರೊಂದಿಗೆ 7 ಜನ ನಾಯಕರು ಸೇರಿ ಆರಂಭಿಸಿದ ಪಕ್ಷ. ಇಂದು 3.61 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

710

04. ಡೆಮಾಕ್ರಟಿಕ್‌ ಪಾರ್ಟಿ: ಅಮೆರಿಕದಲ್ಲಿ 195 ವರ್ಷಗಳ ಹಿಂದೆ ಆರಂಭವಾದ ಪಾರ್ಟಿ ಡೆಮಾಕ್ರಟಿಕ್‌ ಪಾರ್ಟಿ.  ಪ್ರಸ್ತುತ ಅಮೆರಿಕದ ಅಧ್ಯಕ್ಷರಾಗಿರುವ ಜೋ ಬೈಡೆನ್‌ ಇದೇ ಪಕ್ಷದವರು. 4.7 ಕೋಟಿ ಸದಸ್ಯರನ್ನು ಹೊಂದಿರುವ ಈ ಪಕ್ಷ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

810

03. ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌: 137 ವರ್ಷಗಳ ಇತಿಹಾಸ ಹೊಂದಿರುವ ಈ ಪಕ್ಷವನ್ನು ಸಂಸ್ಥಾಪಿಸಿದ್ದು ಬ್ರಿಟಿಷನ್‌ ಪ್ರಜೆ ಅಲನ್‌ ಓಕ್ಟಾವಿಯನ್‌ ಹ್ಯೂಮ್‌. ಮಲ್ಲಿಕಾರ್ಜುನ್‌ ಖರ್ಗೆ ಇಂದು ಈ ಪಕ್ಷಕ್ಕೆ ಅಧ್ಯಕ್ಷರು. 5 ಕೋಟಿ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

910

02. ಚೈನೀಸ್‌ ಕಮ್ಯುನಿಸ್ಟ್‌ ಪಾರ್ಟಿ: 102 ವರ್ಷಗಳ ಹಿಂದೆ ಆರಂಭವಾಗಿರುವ ಚೈನೀಸ್‌ ಕಮ್ಯುನಿಷ್ಟ್‌ ಪಾರ್ಟಿ ಇಡೀ ಚೀನಾದಲ್ಲಿರುವ ಏಕೈಕ ರಾಜಕೀಯ ಪಕ್ಷ. ಚೀನಾದ ಅಧ್ಯಕ್ಷರಾಗಿರುವ ಕ್ಸಿ ಜಿನ್‌ಪಿಂಗ್‌ ಸದ್ಯ ಈ ಪಕ್ಷದ ಪ್ರಧಾನ ಕಾರ್ಯದರ್ಶಿ. ಒಟ್ಟಾರೆ 9.8 ಕೋಟಿ ಸದಸ್ಯರನ್ನು ಹೊಂದಿದ್ದು, ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

'ಹಿಂದೂ ಸಿದ್ಧಾಂತವನ್ನೇ ಸಂಘಿ ಎನ್ನುವುದಾದರೆ, ನಾನು ಸಂಘಿ' ಎಂದ ಖ್ಯಾತ ನಿರೂಪಕಿ ರಶ್ಮಿ ಗೌತಮ್‌!

1010

01. ಭಾರತೀಯ ಜನತಾ ಪಾರ್ಟಿ: ಭಾರತದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಯ ಪ್ರಧಾನ ಪಕ್ಷ ಭಾರತೀಯ ಜನತಾ ಪಾರ್ಟಿ. ಜೆಪಿ ನಡ್ಡಾ ಅಧ್ಯಕ್ಷರಾಗಿರುವ ಈ ಪಕ್ಷ ಆರಂಭವಾಗಿದ್ದು 43 ವರ್ಷಗಳ ಹಿಂದೆ. ಇದು 18 ಕೋಟಿ ಸದಸ್ಯರನ್ನು ಹೊಂದಿದ್ದು, ವಿಶ್ವದ ಅತೀದೊಡ್ಡ ರಾಜಕೀಯ ಪಕ್ಷ ಎನಿಸಿಕೊಂಡಿದೆ.

ಹಿಂದೂವಾಗಿ ನಾವು ಮುಂದಿನ ಪೀಳಿಗೆಗೆ ಏನನ್ನು ಕಲಿಸಬೇಕು? ನಟಿ ರಶ್ಮಿ ಗೌತಮ್‌ ಹೇಳಿರೋ ಮಾತನ್ನು ನೋಡಿ

Read more Photos on
click me!

Recommended Stories