ಚಿತ್ರಗಳಲ್ಲಿ: ಪಕ್ಷಬೇಧ ಮರೆತು ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಗಣ್ಯರು
First Published | Dec 12, 2019, 8:48 PM ISTಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಹೃದಯಸಂಬಂಧಿ ತೊಂದರೆಯುಂಟಾಗಿದ್ದು ಆಂಜಿಯೋಪ್ಲಾಸ್ಟ್ ಮಾಡಲಾಗಿದೆ. ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು 100 ಪರ್ಸೆಂಟ್ ಫಿಟ್ ಆಗಿದ್ದೇನು ಎಂದು ಸ್ಪಷ್ಟಪಡಿಸಿದರು.
ಇನ್ನು ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪಕ್ಷಬೇಧ ಮರೆತು ಇಂದು [ಗುರುವಾರ] ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ಈ ವೇಳೆ ಕೆಲ ಸಮಯ ಒಬ್ಬರಿಗೊಬ್ಬರು ಜೋಕ್ ಮಾಡುತ್ತ ನಕ್ಕು ನಲಿದರು. ರಾಜಕೀಯವಾಗಿ ಶತ್ರುಗಳು ಇರಬಹುದು. ಆದರೆ ವೈಯಕ್ತಿಕವಾಗಿ ಯಾರಿಗೆ ಯಾರೂ ಶತ್ರುಗಳಲ್ಲ ಅನ್ನೋದಕ್ಕೆ ಇದು ಸೂಕ್ತ ಉದಾಹರಣೆ.