ಕರ್ನಾಟಕ ಬೈ ಎಲೆಕ್ಷನ್: ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ ರಾಜಕೀಯ ಗಣ್ಯರು!

First Published | Dec 5, 2019, 1:29 PM IST

ಸ್ಪೀಕರ್‌ ಹಾಗೂ ಸುಪ್ರೀಂಕೋರ್ಟಿನಿಂದ ಅನರ್ಹಗೊಂಡಿರುವ 17 ಪದಚ್ಯುತ ಶಾಸಕರ ಪೈಕಿ 13 ಮಂದಿಯ ಭವಿಷ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಹುಮತ ನಿರ್ಧರಿಸುವ ಅತಿ ನಿರೀಕ್ಷಿತ ರಾಜ್ಯ ವಿಧಾನಸಭಾ ಉಪಚುನಾವಣೆಯ ಮತದಾನ ನಡೆಯುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸಿದ ರಾಜಕೀಯ ಘಟಾನುಘಟಿಗಳ ಒಂದು ನೋಟ

ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ ಅವರು ಅಥಣಿ ತಾಲ್ಲೂಕಿನ ಪಿ.ಕೆ ನಾಗನೂರದಲ್ಲಿ ಮತ ಚಲಾಯಿಸಿದರು.
ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಅವರು ತಮ್ಮ ಪತ್ನಿ ಹಾಗೂ ತಂದೆ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೇಶವ ರೆಡ್ಡಿ ಅವರೊಂದಿಗೆ ಸರ್ಕಾರಿ ಶಾಲೆ ಪೆರೇಸಂದ್ರ ಗ್ರಾಮದ ಮತಗಟ್ಟೆ ಸಂಖ್ಯೆ 22 ರಲ್ಲಿ ತಮ್ಮ ಹಕ್ಕು ಚಲಾಯಿಸಿದರು.
Tap to resize

ಮಹಾಲಕ್ಷ್ಮೀ ಲೇಔಟ್ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಅವರು ತಮ್ಮ ತಾಯಿ, ಪತ್ನಿ ಮಾಜಿ ಉಪಮೇಯರ್ ಹೇಮಲತಾ ಮತ್ತು ಪುತ್ರರೊಂದಿಗೆ ಕಮಲಾ ನಗರದ ಅಮರವಾಣಿ ಇಂಗ್ಲೀಷ್ ಶಾಲೆಯಲ್ಲಿ ಮತ ಚಲಾಯಿಸಿದರು.
ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್,ಟಿ ಸೋಮಶೇಖರ್ ಅವರು ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಉಳ್ಳಾಲ ವಾರ್ಡ್ ನ ನಾಗದೇವನ ಹಳ್ಳಿಯ ರೋಟರಿ ಸೇವಾ ಭಾರತಿ ವಿದ್ಯಾಸಂಸ್ಥೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಯಲ್ಲಾಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಅವರು ತಮ್ಮ ಪತ್ನಿ, ಪುತ್ರ, ಪುತ್ರಿ ಹಾಗೂ ಸೊಸೆ ಅವರೊಂದಿಗೆ ಅರೆಬೈಲು ಇಡಗುಂಜಿ ಗ್ರಾಮದಲ್ಲಿ ಮತ ಚಲಾಯಿಸಿದರು.
ವಿಜಯನಗರ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ತಮ್ಮ ಪತ್ನಿ, ಪುತ್ರ ಹಾಗೂ ಕುಟುಂಬ ಸದಸ್ಯರೊಂದಿಗೆ ಹೊಸಪೇಟೆಯ ಪುಣ್ಯಮೂರ್ತಿ ವೃತ್ತದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಕ್ಕು ಚಲಾಯಿಸಿದರು.
ಕೆ.ಆರ್ ಪುರ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್ ಅವರು ತಮ್ಮ ಪತ್ನಿ ಅವರೊಂದಿಗೆ ಮೇಡಹಳ್ಳಿಯ ಸಹಾಯ ಕೇಂದ್ರದಲ್ಲಿ ಮತ ಚಲಾಯಿಸಿದರು.
ರಾಣೆಬೆನ್ನೂರು ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಅವರು ತಮ್ಮ ಪತ್ನಿ ಅವರೊಂದಿಗೆ ಅವರ ಕುಮಾರಪಟ್ಟಣಂ, ಕೂಡಿಯಾಳ್, ಹೊಸಪೇಟೆಯಲ್ಲಿ ಮತಗಟ್ಟೆ ಸಂಖ್ಯೆ 4ರಲ್ಲಿ ಮತ ಚಲಾಯಿಸಿದರು.
ಗೋಕಾಕ್ ನಲ್ಲಿ ಕಾಂಗ್ರೆಸ್ ಅಭ್ಯಥಿ೯ ಲಖನ್ ಜಾರಕಿಹೊಳಿ ಪತ್ನಿ, ಮಕ್ಕಳಿಂದ ಮತದಾನ
ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಗ್ರಾಮದಲ್ಲಿ ಉಗ್ರಾಣ ನಿಗಮ ಅಧ್ಯಕ್ಷ ಯುಬಿ ಬಣಕಾರ್ ಮತದಾನ ಮಾಡಿದರು ಬಿಜೆಪಿ ಅಭ್ಯರ್ಥಿ ಬಿಸಿ ಪಾಟೀಲ್ ಯುಬಿ ಬಣಕಾರ್ ಗೆ ಸಾಥ್ ನೀಡಿದರು
ರಾಣಿಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಚಿಕ್ಕಬಳ್ಳಾಪುರದ 25ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಮತ ಚಲಾಯಿಸಿದರು.
ಹೊಸಕೋಟೆಯ ಸರ್ಕಾರಿ ಪ್ರೌಡಶಾಲೆಯಲ್ಲಿ ಮತದಾನ ಮಾಡಿದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಪತ್ನಿ
ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಬಾಳಂಬೀಡ ಮತಗಟ್ಟೆಯಲ್ಲಿ ಕುಟುಂಬ ಸಮೇತ ಮತದಾನ ಮಾಡಿದರು.

Latest Videos

click me!