Modi Bengaluru RoadShow: ಮೋದಿಯನ್ನು ಕಣ್ತುಂಬಿಕೊಂಡು ಪುಳಕಿತರಾದ ಬೆಂಗಳೂರಿಗರು!

First Published | May 6, 2023, 3:58 PM IST

ಬೆಂಗಳೂರು(ಮೇ.06): ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಿಜೆಪಿ ಅಬ್ಬರದ ಪ್ರಚಾರದ ಮೂಲಕ ಬಹುತೇಕ ಭಾಗಗಳು ಕೇಸರಿಮಯವಾಗಿದೆ.  ಬೆಂಗಳೂರಿನಲ್ಲಿ ಮೋದಿ ಹವಾ ಜೋರಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ 26 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ಸತತ 3 ಗಂಟೆ ತೆರೆದ ವಾಹನದಲ್ಲಿ ನಿಂತು 13 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ್ದಾರೆ.

ಫೋಟೋ ಕೃಪೆ: ವೀರಮಣಿ, ಸುರೇಶ್, ರವಿ, ಕನ್ನಡಪ್ರಭ

ರೋಡ್ ಶೋ ಉದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಗೆ ಹೂವಿನ ಮಳೆಗೈದ ಜನರು. ಇಳಿ ವಯಸ್ಸಿನಲ್ಲೂ ಮೋದಿ ಉತ್ಸಾಹಕ್ಕೆ ಜನರ ಭೇಷ್ .

ಬನ್ನೇರುಘಟ್ಟ ರಸ್ತೆಯಲ್ಲಿರುವ ಲೊಯಲಾ ಶಾಲೆಯ ಹೆಲಿಪ್ಯಾಡ್‌ಗೆ ಆಗಮಿಸಿದ ಪ್ರಧಾನಿ ಮೋದಿ ಬಳಿಕ ತೆರದ ವಾಹನ ಏರಿ ರೋಡ್ ಶೋ ಆರಂಭ

Tap to resize

ಪ್ರಧಾನಿ ಮೋದಿಯನ್ನು ಕಂಡು ಪುಳಕಿತರಾದ ಬೆಂಗಳೂರಿಗರು. 3 ಗಂಟೆಗಳ 26 ಕಿ.ಮೀ ಸಮಾವೇಶದಲ್ಲಿ 13 ಕ್ಷೇತ್ರ  ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದ ಮೋದಿ.

ಕಾಡು ಮಲ್ಲೇಶ್ವರಂ ದೇವಸ್ಥಾನಕ್ಕೆ ಮೋದಿ ಭೇಟಿ ನೀಡಲು ತಯಾರಿ ನಡೆಸಲಾಗಿತ್ತು. ಆದರೆ ಸಮಯದ ಅಭಾವದಿಂದ ಮೋದಿ ನೇರವಾಗಿ ಕಾರು ಹತ್ತಿ  ಬೆಂಗಳೂರಿನಿಂದ ಬಾದಾಮಿಗೆ ತೆರಳಿದರು.

 26 ಕಿಲೋಮೀಟರ್ ನಿಂತು ಜನರತ್ತ ಕೈಬೀಸುತ್ತಾ ಸಾಗಿದ ಮೋದಿ ಎಲ್ಲಾ ಬಳಲಿಲ್ಲ. ಜನರ ಜೋಶ್ ನೋಡಿದ ಮೋದಿ ಉತ್ಸಾಹ ಇಮ್ಮಡಿಗೊಂಡಿದೆ. 

ಬರೋಬ್ಬರಿ 3 ಗಂಟೆಗಳ 26 ಕಿ.ಮೀ ಕಿಲೋಮೀಟರ್ ಸಂಚರಿಸಿದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮೊದಲ ಹಂತದ ರೋಡ್ ಶೋ ಮುಗಿಸಿದ ಪ್ರಧಾನಿ ಮೋದಿ ಬಾದಾಮಿ ಹಾಗೂ ಹಾವೇರಿಯಲ್ಲಿ ಸಮಾವೇಶ ಮುಗಿಸಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಕೇಸರಿ ಬಣ್ಣದ  ಪೇಟಾ ಧರಿಸಿ  ಮೆಘಾ ರೋಡ್ ಶೋ  ನಡೆಸಿದ ಪ್ರಧಾನಿ  ನರೇಂದ್ರ  ಮೋದಿ. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿ ನಮಿಸಿದರು.

ನಾಳೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ 10 ಕಿಲೋಮೀಟರ್ ರೋಡ್ ಶೋ ನಡೆಸಲಿದ್ದು, ಬೆಂಗಳೂರಿಗರು ಕಾತುರದಿಂದ ಕಾಯುತ್ತಿದ್ದಾರೆ.

ಸೋಮೇಶ್ವರ ಸಭಾ ಭನವದ ಮೂಲಕ ಪ್ರಧಾನಿ ಮೋದಿ ರೋಡ್ ಶೋ ಆರಂಭಗೊಂಡು, ಮಲ್ಲೇಶ್ವರಂ 18ನೇ ರಸ್ತೆ ಜಂಕ್ಷನ್ ಬಳಿ ಅಂತ್ಯಗೊಂಡಿತು. 

ಸತತ ಪ್ರಯಾಣ, ಪ್ರಚಾರ ಸಭೆ,ರೋಡ್ ಶೋ ಮೂಲಕ ಮೋದಿ ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ನೋಡಲು ಲಕ್ಷಾಂತರ ಜನ ಸೇರುತ್ತಿದ್ದಾರೆ. 

ಇಂದು ರೋಡ್‌ ಶೋ ನಲ್ಲಿ ಕಲಾ ತಂಡಗಳು, ಭಜರಂಗಿ ವೇಷಧಾರಿಗಳು, ಮುಖವಾಡ ಧರಿಸಿದ ಅಭಿಮಾನಿಗಳು ಮೋದಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ. 

ಇಂದು ರೋಡ್‌ ಶೋ ನಲ್ಲಿ ಕಲಾ ತಂಡಗಳು, ಭಜರಂಗಿ ವೇಷಧಾರಿಗಳು, ಮುಖವಾಡ ಧರಿಸಿದ ಅಭಿಮಾನಿಗಳು ಮೋದಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ. 

ಪುಟ್ಟ ಕಂದಮ್ಮಗಳನ್ನು ಹಿಡಿದು ಪ್ರಧಾನಿ ಮೋದಿ ಅವರನ್ನು ನೋಡಲು ಹಲವು ತಾಯಂದಿರು ರೋಡ್‌ ಶೋಗೆ ಆಗಮಿಸಿದ್ದು ಬಹಳ ವಿಶೇ‍ಷವಾಗಿತ್ತು. 

ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದವರೆಗೆ 8 ಕಿ.ಮೀ ರೋಡ್‌ ಶೋ ನಡೆಯಲಿದೆ.

ಗಾರ್ಡರ್ ಸಿಟಿ ಬೆಂಗಳೂರು ಇಂದು ಮೋದಿ ಅವರ  ರೋಡ್‌ ಶೋದಿಂದ ಫ್ಲವರ್ ಸಿಟಿಯಾಗಿ ಬದಲಾಗಿತ್ತು. ಅಷ್ಟೊಂದು ಪ್ರಮಾಣದಲ್ಲಿ ಹೂವಿನ ಮಳೆಗೆರೆಯಲಾಗಿತ್ತು.

Latest Videos

click me!