ವಿರೋಧ ಪಕ್ಷ 'ಕೈ'ಗೆ ತಾನಾಗಿಯೇ ಪ್ರಬಲ ಅಸ್ತ್ರವನ್ನು ನೀಡಿದ ಸರ್ಕಾರ

First Published | May 3, 2020, 3:45 PM IST

ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಕೆಎಸ್‌ಆರ್‌ಟಿಸಿ ಸಂಸ್ಥೆ ವಿಫಲವಾಗಿದೆ. ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಡವಟ್ಟು ಮಾಡಿಕೊಂಡು ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ಉಡುಗೊರೆ ಕೊಟ್ಟಿದೆ. ಇದನ್ನ ಬಳಿಸಿಕೊಂಡ ಕಾಂಗ್ರೆಸ್‌ನ ಘಟಾನುಘಟಿ ನಾಯರು ಖುದ್ದು ಅಖಾಡಕ್ಕಿಳಿದು ಕಾರ್ಮಿಕರ ನೆರವಿಗೆ ನಿಂತಿದ್ದಾರೆ.
 

ರಾಜಧಾನಿಯಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಸರಿಯಾಗಿ ನಿಭಾಯಿಸದೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ಉಡುಗೊರೆ ನೀಡಿದೆ.
ಮೊದಲ ಕಾರ್ಮಿಕರಿಗೆ ಯಾವುದೇ ರೀತಿಯಾಗಿ ಸ್ಪಂದಿಸದ ಕಾರಣ ಖುದ್ದು ರಾಜ್ಯ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಭೇಟಿ ಕೊಟ್ಟು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ಸಮಸ್ಯೆಗಳನ್ನು ಖುದ್ದು ಆಲಿಸಿದರು.
Tap to resize

ಡಿಕೆಶಿ ಮತ್ತು ಸಿದ್ದರಾಮಯ್ಯ ಬಸ್ಸಿನೊಳಗೆ ಹೋಗಿ ಪ್ರಯಾಣಿಕರನ್ನು ಮಾತನಾಡಿಸಿದರು.
ಶನಿವಾರವೇ ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸರಕಾರಕ್ಕೆ, ದುಡ್ಡು ಬೇಕಿದ್ದರೆ ಕೇಳಿ, ಭಿಕ್ಷೆ ಎತ್ತಿಯಾದರೂ ಕೊಡುತ್ತೇನೆ ಎಂದಿದ್ದರು. ಅದರಂತೇ, ಹಿರಿಯ ಮುಖಂಡರ ಜೊತೆ ಆಗಮಿಸಿದ ಡಿಕೆಶಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಒಂದು ಕೋಟಿಯ ಚೆಕ್ ಅನ್ನು ನೀಡಿದರು
ಊಟ ತಿಂಡಿ, ನೀರಿನ ವ್ಯವಸ್ಥೆಯಿಲ್ಲದೇ ಕಾರ್ಮಿಕರು ಹೈರಾಣವಾಗಿ ಹೋಗಿದ್ದರು. ಆ ವೇಳೆ, ಕಾಂಗ್ರೆಸ್ ಮುಖಂಡರ ರಂಗ ಪ್ರವೇಶವಾಯಿತು.
ಮೊದಲು, ದುಪ್ಪಟ್ಟು ಬಸ್ ದರ ನಿಗದಿ ಪಡಿಸಿ, ಆಮೇಲೆ ಪ್ರತಿಭಟನೆ ವ್ಯಕ್ತವಾದ ನಂತರ, ಅದನ್ನು ಇಳಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಮೆಜಿಸ್ಟಿಕ್ ಕಡೆ ಬಂದಿದ್ದರಿಂದ, ವಲಸೆ ಕಾರ್ಮಿಕರ ಪಾಡು ಹೇಳತೀರದಾಗಿತ್ತು.
ಡಿಕೆಶಿ, ಸಿದ್ದರಾಮಯ್ಯ, ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಲೀಂ ಅಹಮದ್ ಆದಿಯಾಗಿ, ಪ್ರಮುಖ ಮುಖಂಡರು, ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಕಾರ್ಮಿಕರಿಗೆ ಆಹಾರ, ನೀರು ವಿತರಿಸಿ ಅವರಿಗೆ ಧೈರ್ಯ ತುಂಬಿ ಆರಾಮಾಗಿ ಹೋಗಿ ಎಂದು ಬೀಳ್ಕೊಟ್ಟರು.

Latest Videos

click me!