ಗುಜರಾತ್ ನೂತನ ಸಿಎಂಗೆ ಶುಭಕೋರಿ ಶಾ, ಸಂತೋಷ್‌ ಜತೆ ಬೊಮ್ಮಾಯಿ ಮಹತ್ವದ ಚರ್ಚೆ

First Published | Sep 13, 2021, 5:30 PM IST

 ಗುಜರಾತ್‌ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕರಿಸಿದರು.  ಇಂದು (ಸೆ.13) ಗಾಂಧಿನಗರ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 17ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಇದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಹಾಗೂ ಸಚಿವರುಗಳು ಸಾಕ್ಷಿಯಾದರು. ಇದೇ ಸಿಕ್ಕ ಅವಕಾಶದಲ್ಲಿ ಬೊಮ್ಮಾಯಿ ಅವರು ಅಮಿತ್ ಶಾ ಹಾಗೂ ಬಿ.ಎಲ್‌ ಸಂತೋಷ್ ಜತೆ ಮಹತ್ವದ ಚರ್ಚೆ ಮಾಡಿರುವುದು ಕುತೂಹಲ ಮೂಡಿಸಿದೆ.

ಗುಜರಾತ್​ನ 17ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಭೂಪೇಂದ್ರ ಪಟೇಲ್ (59) ಇಂದು (ಸೆ.13) ಪ್ರಮಾಣ ವಚನ ಸ್ವೀಕರಿಸಿದರು.ರಾಜ್ಯಪಾಲ ಆಚಾರ್ಯ ದೇವವೃತ ಪ್ರತಿಜ್ಞಾ ವಿಧಿ ಬೋಧಿಸಿದರು.

karnataka CM Bommai and Ministers wishes to new Gujarat CM Bhupendra Patel rbj

ಗುಜರಾತ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭೂಪೇಂದ್ರ ಪಟೇಲ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಸವರಾಜ ಬೊಮ್ಮಾಯಿ ಭೇಟಿ ಮಾಡಿ ಶುಭ ಕೋರಿದರು. 

Tap to resize

karnataka CM Bommai and Ministers wishes to new Gujarat CM Bhupendra Patel rbj

ಬಸವರಾಜ ಬೊಮ್ಮಾಯಿ ಅವರು ತಮ್ಮ ಮೊದಲ ಅಧಿವೇಶನವನ್ನು ಬಿಟ್ಟು ಗುಜರಾತ್‌ಗೆ ತೆರಳಿ ಭೂಪೇಂದ್ರ ಪಟೇಲ್ ಅವರನ್ನು ಭೇಟಿ ಮಾಡಿದ ಶುಭ ಕೋರಿರುವುದು ವಿಶೇಷ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.

karnataka CM Bommai and Ministers wishes to new Gujarat CM Bhupendra Patel rbj

ರಾಜ್ಯದಿಂದ ಸಿಎಂ ಜತೆ ಗಾಂಧಿನಗರಕ್ಕೆ ತೆರಳಿರುವ ಸಚಿವರಾದ ಆರ್.ಅಶೋಕ್, ಮುರುಗೇಶ್ ನಿರಾಣಿ, ಡಾ. ಕೆ ಸುಧಾಕರ್ ಅವರೂ ನೂತನ ಸಿಎಂ ಭೂಪೇಂದ್ರ ಪಟೇಲ್ ಅವರಿಗೆ ಶುಭ ಕೋರಿದರು.

karnataka CM Bommai and Ministers wishes to new Gujarat CM Bhupendra Patel rbj

ಬಳಿಕ ಬಸವರಾಜ ಬೊಮ್ಮಾಯಿ ಅವರು  ಕೇಂದ್ರ ಗೃಹ ಅಚಿವ ಅಮಿತ್ ಷಾ, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ ಜತೆ ಮಹತ್ವದ ಚರ್ಚೆ ನಡೆಸಿದರು. 

Latest Videos

click me!