ಬಿಜೆಪಿ ಶುದ್ದೀಕರಣಕ್ಕಾಗಿ ನನ್ನದು ರಾಜಕೀಯ ಬಲಿದಾನ: ಕೆ.ಎಸ್.ಈಶ್ವರಪ್ಪ

First Published Apr 18, 2024, 7:03 AM IST

ಆಸ್ತಿ, ಕುಟುಂಬ ಎಲ್ಲವನ್ನೂ ಕಳೆದುಕೊಂಡರು. ದೇಶಕ್ಕಾಗಿ ಬಲಿದಾನ ಮಾಡಿದರು. ಹಾಗೆಯೇ ನಾನು ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗುವ ಮೂಲಕ ರಾಜಕೀಯ ಬಲಿದಾನ ಮಾಡಿಕೊಳ್ಳುತ್ತಿದ್ದೇನೆ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ (ಏ.18): ಬಿಜೆಪಿ ಶುದ್ದೀಕರಣಕ್ಕಾಗಿ ನನ್ನದು ರಾಜಕೀಯ ಬಲಿದಾನ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಲಕ್ಷಾಂತರ ಮಂದಿ ಜೀವ ಕಳೆದುಕೊಂಡರು. 

ಆಸ್ತಿ, ಕುಟುಂಬ ಎಲ್ಲವನ್ನೂ ಕಳೆದುಕೊಂಡರು. ದೇಶಕ್ಕಾಗಿ ಬಲಿದಾನ ಮಾಡಿದರು. ಹಾಗೆಯೇ ನಾನು ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗುವ ಮೂಲಕ ರಾಜಕೀಯ ಬಲಿದಾನ ಮಾಡಿಕೊಳ್ಳುತ್ತಿದ್ದೇನೆ ಎಂದರು. ಸ್ಪರ್ಧೆ ಮಾಡುವುದಾಗಿ ಘೋಷಿಸಿಕೊಂಡ ಬಳಿಕ ಅನೇಕರು ನಿಮ್ಮ ಮಗನ ಭವಿಷ್ಯ ಮತ್ತು ನಿಮ್ಮ ಭವಿಷ್ಯ ಹಾಳಾಗುವುದಿಲ್ಲವೇ ಎಂದು ಕೇಳಿದ್ದರು. 

ನನ್ನ ಮಗನ ಬಳಿ ಕೇಳಿಯೇ ಈ ನಿರ್ಧಾರ ಕೈಗೊಂಡಿದ್ದೇನೆ. ನನ್ನ ಮಗನ ರಾಜಕೀಯ ಜೀವನ ಹಾಳಾಗಬಹುದು. ನನಗೆ ನನ್ನ ಭವಿಷ್ಯದ ಬಗ್ಗೆ ಕಾಳಜಿ ಬೇಕಾಗಿಲ್ಲ. ಆದರೆ, ಬಿಜೆಪಿಯ ಶುದ್ದೀಕರಣ ನಡೆಯಬೇಕು. ಇದಕ್ಕಾಗಿ ನಾನು ನನ್ನ ರಾಜಕೀಯ ಜೀವನವನ್ನು ಬಲಿದಾನ ಮಾಡುತ್ತಿದ್ದೇನೆ ಎಂದು ಹೇಳಿದರು. 

ಲೋಕಸಭೆಯಲ್ಲಿ ನಾನು ಹಿಂದುತ್ವದ ಪ್ರತಿನಿಧಿಯಾಗಿ ಇರುವೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದ ಹಿಂದುತ್ವವಾದಿ ಕಾರ್ಯಕರ್ತರು ನನ್ನ ಚುನಾವಣಾ ಪ್ರಚಾರ ಕಾರ್ಯಕ್ಕೆ ಜೊತೆಯಾಗಿದ್ದಾರೆ. ನನ್ನ ಗೆಲುವನ್ನು ತಡೆಯಲು ಯಾವ ರಾಜಕೀಯ ಪಕ್ಷದಿಂದಲೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿಯಲ್ಲಿ ಒಂದು ಕುಟುಂಬ ಅತಿರೇಕದ ವರ್ತನೆಯಿಂದ ಅನೇಕ ನಾಯಕರ ಮನಸ್ಸಿಗೆ ನೋವಾಗಿದೆ. ಪಕ್ಷದ ಕಾರ್ಯಕರ್ತರು ನಲುಗಿ ಹೋಗಿದ್ದಾರೆ. ಹೀಗಾಗಿ ಪಕ್ಷದ ಶುದ್ಧೀಕರಣದೊಂದಿಗೆ ಪುನಶ್ಚೇತನ ಬಯಸುತ್ತಿದ್ದಾರೆ. ಇವರ ಪ್ರತಿನಿಧಿಯಾಗಿ ನಾನು ಚುನಾವಣೆಯಲ್ಲಿ ಸ್ವರ್ಧಿಸುತ್ತಿದ್ದೇನೆ ಎಂದರು.

click me!