Himachal Pradesh Assembly Election: ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ, ಹೋದಲೆಲ್ಲಾ ಜನಸಾಗರ!

Published : Nov 05, 2022, 06:04 PM IST

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶ ವಿಧಾನಸಬೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದಾರೆ. ಶನಿವಾರ ಸೋಲನ್‌ನಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ ಎಂದರೆ, ಭ್ರಷ್ಟಾಚಾರ ಗ್ಯಾರಂಟಿ ಎನ್ನುವ ಅರ್ಥ ಎಂದು ಪ್ರಧಾನಿ ಹೇಳಿದ್ದಾರೆ.

PREV
114
Himachal Pradesh Assembly Election: ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಪ್ರಚಾರ, ಹೋದಲೆಲ್ಲಾ ಜನಸಾಗರ!

ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ನಡೆದ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ಥಳೀಯ ಜನ ಭರ್ಜರಿ ಸ್ವಾಗತ ನೀಡಿದರು. ಕಾರ್ಯಕ್ರಮದಲ್ಲಿ ರೋಡ್‌ ಶೋ ನಿಗದಿಯಾಗಿರಲಿಲ್ಲ. ಅದರೆ, ಮೋದಿ ಬರುವ ದಾರಿಯುದ್ಧಕ್ಕೂ ರೋಡ್‌ ಶೋಗೆ ಸೇರುವಷ್ಟೇ ಜನ ಸೇರಿದ್ದರು.
 

214

ಮೋದಿ ಕಾರು ಬರುವ ದಾರಿಯುದ್ಧಕ್ಕೂ ಗುಲಾಬಿ ಹೂವುಗಳನ್ನು ಹಾಕುವ ಮೂಲಕ ಸೋಲನ್‌ನಲ್ಲಿ ಜನರು ಮೋದಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ. ಸಮಾವೇಶದಲ್ಲೂ ಮೋದಿ ಭರ್ಜರಿಯಾಗಿ ಮಾತನಾಡಿದ್ದಾರೆ.

314

ನರೇಂದ್ರ ಮೋದಿ ಅವರ ಸಮಾವೇಶ ನಡೆಯುವ ಮೈದಾನದ ಅಕ್ಕಪಕ್ಕದ ಕಟ್ಟಡಗಳು ಏರಿ ಜನರು ಭಾಷಣವನ್ನು ಕೇಳಿದ್ದಾರೆ. ಜನರ ಅಭಿಮಾನಕ್ಕೆ ಸ್ವತಃ ಮೋದಿ ಕೂಡ ಮೂಕವಿಸ್ಮಿತರಾಗಿದ್ದರು.

414

ನರೇಂದ್ರ ಮೋದಿ ಅವರು ಸಮಾವೇಶ ನಡೆಯುವ ಮೈದಾನದಲ್ಲಿ ಎಲ್ಲೆಲ್ಲೂ ಬಿಜೆಪಿಯ ಬಾವುಟಗಳೇ ರಾರಾಜಿಸಿದವು. ನರೇಂದ್ರ ಮೋದಿಯವರ ಫೋಟೋ ಹಿಡಿದು ಜನ ಅಭಿಮಾನ ಪ್ರದರ್ಶನ ಮಾಡಿದರು.
 

514

ಕಪ್ಪು ಬಣ್ಣದ ಕಾರಿನಲ್ಲಿ ಅಪಾರ ಭದ್ರತೆ ನಡುವೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ, ವಿಮಾನ ನಿಲ್ದಾಣದಿಂದ ಸಮಾವೇಶ ನಡೆಯುವ ಸ್ಥಳದವರೆಗೂ ಭವ್ಯವಾದ ಸ್ವಾಗತವನ್ನು ಜನ  ನೀಡಿದರು.

614

ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯ ವೇಳೆ ಬಿಜೆಪಿಯ ಅಭ್ಯರ್ಥಿ ಯಾರು ಅನ್ನೋದನ್ನ ನೆನಪಿಟ್ಟುಕೊಳ್ಳಬೇಕಾದ ಅಗತ್ಯವಿಲ್ಲ. ಮತ ಹಾಕುವ ವೇಲೆ ಬಿಜೆಪಿಯ ಕಲದ ಚಿಹ್ನೆ ಮಾತ್ರ ನಿಮ್ಮ ನೆನಪಿನಲ್ಲಿರಲಿ  ಎಂದು ಹೇಳಿದ್ದಾರೆ.

714

ನಾನು ಕಮಲದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ, ಎಲ್ಲಿ ನೀವು ಕಮಲದ ಚಿಹ್ನೆಯನ್ನು ನೋಡುತ್ತೀರಿ ಎಂದರೆ ಅದು ಬಿಜೆಪಿ ಮತ್ತು ಮೋದಿಜಿ ನಿಮ್ಮ ಬಳಿಗೆ ಬಂದಿದ್ದಾರೆ ಎಂದರ್ಥ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

814

ಕಾಂಗ್ರೆಸ್‌ ಪಕ್ಷದ ಅಧಿಕಾರದ ಸಮಯದಲ್ಲಿ ಸರ್ಕಾರವನ್ನು ಅಸ್ಥಿರ ಮಾಡುವ ಸಾಕಷ್ಟು ಗುಂಪುಗಳು ತಮ್ಮದೇ ಹಿತಾಸಕ್ತಿಯಲ್ಲಿ ಕೆಲಸ ಮಾಡುತ್ತಿದ್ದವು. ಇದನ್ನು ನಿಯಂತ್ರಿಸಲು ಕುಡ ಕಾಂಗ್ರೆಸ್‌ಗೆ ಸಾಧ್ಯವಾಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.
 

914

ಸಣ್ಣ ಸಣ್ಣ ರಾಜ್ಯಗಳು ಇಂತಹ ಸ್ವಕೇಂದ್ರಿತ ಗುಂಪುಗಳ ಗುರಿಯಾಗಿದ್ದವು. ಈ ಗುಂಪುಗಳು ತಮ್ಮ ಹಿತಾಸಕ್ತಿಗಾಗಿ ಮಾತ್ರ ಕೆಲಸ ಮಾಡುತ್ತಿವೆ ಎಂದು ಹಿಮಾಚಲ ಪ್ರದೇಶದಲ್ಲಿ ನರೇಂದ್ರ ಮೋದಿ ಹೇಳಿದ್ದಾರೆ.

1014

ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಲನ್ ಜನ ಪ್ರೀತಿ ನೀಡಿದ್ದಾರೆ ಎಂದರೆ ಹಿಮಾಚಲ ಪ್ರದೇಶ ಮತ್ತೊಮ್ಮೆ 'ಡಬಲ್ ಇಂಜಿನ್' ಸರ್ಕಾರವನ್ನು ಹೊಂದಲಿದೆ ಎಂಬ ಸಂದೇಶ ತಲುಪಿದೆ ಎಂದರ್ಥ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

1114

ಸೋಲನ್‌ ಸಮಾವೇಶ ಮುಗಿಸಿ ತೆರಳುವ ಹೊತ್ತಿನಲ್ಲೂ ಕೂಡ ಅಪಾರ ಸಂಖ್ಯೆಯ ಜನರು ಮೋದಿ ಅವರನ್ನು ಕಣ್ತುಂಬಿಕೊಳ್ಳಲು ರಸ್ತೆಯ ಅಕ್ಕಪಕ್ಕದಲ್ಲಿ ನಿಂತಿದ್ದರು.
 

1214

ರಸ್ತೆಯ ಅಕ್ಕ ಪಕ್ಕ ನಿಂತ ದಿವ್ಯಾಂಗರನ್ನು ಗಮನಿಸಿದ ನರೇಂದ್ರ ಮೋದಿ, ತಮ್ಮ ಕಾರನ್ನು ನಿಲ್ಲಿಸಿ ಅವರ ಬಳಿ ಹೋಗಿ ಮಾತನಾಡಿಸಿದರು. ಈ ವೇಳೆ ಅವರು, ಮೋದಿಗೆ ಸ್ವಾಗತ ಕೋರುವ ಪ್ಲಕಾರ್ಡ್‌ಗಳನ್ನು ನೀಡಿದರು.
 

1314

ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ 12 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್‌ 8ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವಿದೆ. ಜೈರಾಮ್‌ ರಾಕೂರ್‌ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಹಾಲಿ ವಿಧಾನಸಭೆಯಲ್ಲಿ ಬಿಜೆಪಿ 43 ಕ್ಷೇತ್ರಗಳನ್ನು ಹೊಂದಿದೆ.
 

1414

ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಕ್ಷೇತ್ರಗಳಿದ್ದು, ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಬಹುಮತಕ್ಕಾಗಿ ಪಕ್ಷಗಳು 35 ಸೀಟ್‌ಗಳನ್ನು ಗೆಲ್ಲಬೇಕಿದೆ.
 

Read more Photos on
click me!

Recommended Stories