Congress Presidential Election: ರಾಹುಲ್‌, ಸೋನಿಯಾ, ಡಿಕೆಶಿ ಸೇರಿ ಹಲವು ‘ಕೈ’ ನಾಯಕರಿಂದ ಮತದಾನ

Published : Oct 17, 2022, 02:40 PM ISTUpdated : Oct 17, 2022, 02:42 PM IST

24 ವರ್ಷಗಳ ಬಳಿಕ ಕಾಂಗ್ರೆಸ್‌ನಲ್ಲಿ ಗಾಂಧಿಯೇತರ ಕುಟುಂಬದ ವ್ಯಕ್ತಿಯೊಬ್ಬರು ಕಾಂಗ್ರೆಸ್‌ ಅಧ್ಯಕ್ಷರಾಗುತ್ತಿದ್ದು, ಇದಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್‌ ಈ ಐತಿಹಾಸಿಕ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ಚುನಾವಣೆ ಘೋಷಣೆಯಾದ ಬಳಿಕ ಶಶಿ ತರೂರ್‌ ಆರಂಭದಲ್ಲೇ ಕಾಂಗ್ರೆಸ್‌ ಅಧ್ಯಕ್ಷರಾಗುವ ಒಲವು ತೋರಿದ್ದರು. ಆದರೆ, ಇನ್ನೊಂದೆಡೆ, ರಾಹುಲ್ ಗಾಂಧಿಯನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಮಾಡುತ್ತೇವೆ, ಅವರೇ ಅಧ್ಯಕ್ಷರಾಗಲು ಒತ್ತಾಯಿಸುತ್ತೇವೆ ಎನ್ನುತ್ತಲೇ ಇದ್ದ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಕಡೆ ಗಳಿಗೆಯಲ್ಲಿ ಗಾಂಧಿ ಕುಟುಂಬದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾರೆ. 

PREV
18
Congress Presidential Election: ರಾಹುಲ್‌, ಸೋನಿಯಾ, ಡಿಕೆಶಿ ಸೇರಿ ಹಲವು ‘ಕೈ’ ನಾಯಕರಿಂದ ಮತದಾನ

ಇಂದು ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಪಾದಯಾತ್ರೆಗೆ ಬ್ರೇಕ್‌ ಕೊಟ್ಟು ಕರ್ನಾಟಕದ ಬಳ್ಳಾರಿಯಲ್ಲಿ ಮತದಾನ ಮಾಡಿದ್ದಾರೆ.

28

ಬಳ್ಳಾರಿಯ ಭಾರತ್ ಜೋಡೋ ಯಾತ್ರಾ ಕ್ಯಾಂಪ್‌ಸೈಟ್‌ನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಫೋಟೋದಲ್ಲಿ ಡಿ.ಕೆ. ಸುರೇಶ್‌ ಅವರನ್ನು ಸಹ ಕಾಣಬಹುದು.  

38

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್‌ ಸಹ ರಾಹುಲ್ ಗಾಂಧಿಯವರೊಂದಿಗೆ ಸರತಿಯಲ್ಲಿ ಕಾಣಿಸಿಕೊಂಡಿದ್ದು, ಅವರೂ ಸಹ ಮತ ಹಾಕಿದ್ದಾರೆ.

48

ಇನ್ನೊಂದೆಡೆ, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಅಧ್ಯಕ್ಷೀಯ ಚುನಾವಣೆಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತದಾನ ಮಾಡಿದ್ದಾರೆ. ಇದಕ್ಕಾಗಿ ನಾನು ತುಂಬಾ ಸಮಯದಿಂದ ಕಾಯುತ್ತಿದ್ದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. 

58

ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ತಮ್ಮ ಹಕ್ಕನ್ನು ಚಲಾಯಿಸಿದರು.  
 

68

ಇನ್ನು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ದೆಹಲಿಯಲ್ಲಿ ಮತದಾನ ಮಾಡಿದ್ದಾರೆ. ಹಾಗೂ, ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಮತದಾನ ಮಾಡಿದ್ದಾರೆ. 

78

ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಯ ದಿನವಾದ ಇಂದು ಮತ ಚಲಾಯಿಸಿದ್ದಾರೆ. ಈ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆಶಿ, 490 ಜನರು ಇಲ್ಲಿ ಮತ ಹಾಕುತ್ತಿದ್ದಾರೆ. ಮತದಾನ ಪಾರದರ್ಶಕವಾಗಿ ನಡೆಯುತ್ತಿದೆ, ದೇಶಕ್ಕೆ ಇದರಿಂದ ಲಾಭವಾಗಲಿದೆ ಎಂದೂ ಹೇಳಿದರು. 

88

ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆಗೆ ಗಾಂದಿ ಕುಟುಂಬದ ಅಭ್ಯರ್ಥಿಯಾಗಿ ಕೊನೆ ಕ್ಷಣದಲ್ಲಿ ಬದಲಾದ ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಸಹ ಮತದಾನ ಮಾಡಿದ್ದಾರೆ. ತಮ್ಮ ಹಕ್ಕು ಚಲಾಯಿಸಲು ಹಲವು ನಾಯಕರೊಂದಿಗೆ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು.  

Read more Photos on
click me!

Recommended Stories