ಉತ್ತರಪ್ರದೇಶದ ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸದರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಮೋದಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಮಂಗಳಮುಖಿಯೊಬ್ಬರು ಕಣಕ್ಕಿಳಿದಿದ್ದಾರೆ. ಮಹಮಂಡಲೇಶ್ವರ ಹೇಮಾಂಗಿ ಸಖಿ ಹೆಸರಿನ ಈ ಕಿನ್ನರಿ ಯಾರು ಈ ಬಗ್ಗೆ ಇಲ್ಲಿದೆ ಸ್ಟೋರಿ.
ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸದರನ್ನಾಗಿ ಆಯ್ಕೆ ಮಾಡಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಮೋದಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಮಂಗಳಮುಖಿಯೊಬ್ಬರು ಕಣಕ್ಕಿಳಿದಿದ್ದಾರೆ. ಮಹಮಂಡಲೇಶ್ವರ ಹೇಮಾಂಗಿ ಸಖಿ ಹೆಸರಿನ ಈ ಕಿನ್ನರಿ ಯಾರು
28
ಮೂಲತಃ ಗುಜರಾತ್‌ನವರಾದ ಮಹಮಂಡಲೇಶ್ವರ ಹೇಮಾಂಗಿ ಜೀವನ ನಡೆಸಿದ್ದು ಮುಂಬೈನಲ್ಲಿ, ಕೆಲವು ಸಿನಿಮಾ ಹಾಗೂ ಪ್ರಸಿದ್ಧ ಟಿವಿ ಶೋಗಳಲ್ಲಿಯೂ ಇವರು ನಟಿಸಿದ್ದಾರೆ.
38
ತನ್ನನ್ನು ತಾನು ಟ್ರಾನ್ಸ್‌ಫಾರ್ಮೇಶನಲ್ ಸ್ಪೀಕರ್ ಎಂದು ಕರೆದುಕೊಳ್ಳುವ ಇವರು ಭಗವದ್ಗೀತೆಯ ಪ್ರವಚನವನ್ನು ಮಾಡುತ್ತಾರೆ. 2019ರಲ್ಲಿ ಇವರಿಗೆ ಆಚಾರ್ಯ ಮಹಾಮಂಡಲೇಶ್ವರ ಎಂಬ ಬಿರುದು ಲಭಿಸಿತ್ತು.
48
ಮಂಗಳಮುಖಿಯರ ಹಕ್ಕುಗಳ ಬಗ್ಗೆ ರಾಜಕೀಯ ಪಕ್ಷಗಳು ಹಾಗೂ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ತಾನು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
58
ಗುಜರಾತ್‌ನ ಬರೋಡಾದಲ್ಲಿ ಜನಿಸಿ ಮುಂಬೈಗೆ ಸ್ಥಳಾಂತರಗೊಂಡ ಹೇಮಾಂಗಿ ಭಗವಾನ್ ಶ್ರೀಕೃಷ್ಣನ ಭಕ್ತೆಯಾಗಿದ್ದು, ಬೃಂದಾವನದ ಸಂಪರ್ಕಕ್ಕೆ ಬಂದರು.
68
ಮೊದಲ ಮಂಗಳಮುಖಿ ಕಥಾವಾಚಕಿ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ. 2019ರ ಕುಂಭ ಮೇಳದ ಸಮಯದಲ್ಲಿ ಹೇಮಾಂಗಿ ಸಖಿ ಅವರಿಗೆ ಅಚಾರ್ಯ ಮಹಾಮಂಡಲೇಶ್ವರ್ ಎಂದು ಪಟ್ಟಾಭಿಷೇಕ ಮಾಡಲಾಯ್ತು.
78
ಇದರ ಜೊತೆಗೆ 2019ರಲ್ಲಿಯೇ ಅಖಿಲ ಭಾರತೀಯ ಸಾಧು ಸಮಾಜದಿಂದ ಭಗವದ್ಭೂಷಣ ಮಹಾಮಂಡಲೇಶ್ವರ ಎಂದು ಬಿರುದು ನೀಡಿ ಗೌರವಿಸಲಾಗಿದೆ. 2022ರಲ್ಲಿ ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಬಳಿ ಇರುವ ಶೃಂಗಾರ ಗೌರಿ ಜ್ಞಾನವ್ಯಾಪಿ ಮಸೀದಿಯಲ್ಲಿ ಜಲಾಭಿಷೇಕ ಮಾಡುವಂತೆ ಕರೆ ನೀಡುವ ಮೂಲಕ ಅವರು ಮುನ್ನೆಲೆಗೆ ಬಂದರು.
ನಾನು ಪ್ರಧಾನಿಯವರನ್ನು ಗೌರವಿಸುತ್ತೇನೆ ಅವರ ಕೆಲಸವನ್ನು ಇಷ್ಟಪಡುತ್ತೇನೆ. ಆದರೆ ಮಂಗಳಮುಖಿಯರ ಬಗ್ಗೆ ಸರ್ಕಾರದ ಗಮನ ಸೆಳೆಯುವುದಕ್ಕಾಗಿ ಅವರ ವಿರುದ್ಧ ಕಣಕ್ಕಿಳಿದಿದ್ದೇನೆ ಎಂದು ಅವರು ಹೇಳಿದ್ದಾರೆ. ಪ್ರಧಾನಿಯವರ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ಕೊನೆಯ ಹಂತದಲ್ಲಿ ಜೂನ್ 1 ರಂದು ಚುನಾವಣೆ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.