ಬೆಂಗಳೂರು(ಜು. 14) 'ಕೈಕಟ್ಟಿ ನಿಲ್ಲುವುದು ನಮ್ಮ ಸಂಸ್ಕೃತಿ' ಹೀಗೆಂದು ಸಂಸದೆ ಸುಮಲತಾಗೆ ಜೆಡಿಎಸ್ ತಿರುಗೇಟು ನೀಡಿದೆ. ಕನ್ನಂಬಾಡಿ ಕದನಕ್ಕೆ ವಿರಾಮ ಘೋಷಣೆ ಮಾಡಿದ್ದರೂ ಅಭಿಮಾನಿಗಳೂ ಮಾತ್ರ ಸುಮ್ಮನೆ ಕುಳಿತಿಲ್ಲ. ಅಂಬರೀಶ್ ಎದುರು ಕೈಕಟ್ಟಿ ಕುಮಾರಸ್ವಾಮಿ ನಿಂತಿರುವ ಪೋಟೋ ವೈರಲ್ ಮಾಡಿದ್ದ ಸುಮಲತಾ ಅಭಿಮಾನಿಗಳಿಗೆ ಎಚ್‌ಡಿಕೆ ಅಭಿಮಾನಿಗಳು ಉತ್ತರ ನೀಡಿದ್ದಾರೆ. ಕೈಕಟ್ಟಿ ಗೌರವ ಸಲ್ಲಿಸುವುದು ನಮ್ಮ ಸಂಪ್ರದಾಯ, ನಮ್ಮ ಸಂಸ್ಕೃತಿ ಎಂದು ದೇವೇಗೌಡರ ಕುಟುಂಬವನ್ನು ಕೊಂಡಾಡಿದ್ದಾರೆ. ನೆರವು ನೀಡುವ ಸಂದರ್ಭ, ಸಾಂತ್ವನ ಹೇಳುವ ಸಂದರ್ಭ ಕುಮಾರಸ್ವಾಮಿ ಕೈಕಟ್ಟಿ ನಿಂತಿದ್ದಾರೆ ಎಂದರೆ ಅದು ಅವರ ಹಿರಿತನ ತೋರಿಸುತ್ತದೆ ಎಂದಿದ್ದಾರೆ. ಕೆಆರ್‌ಎಸ್ ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಸಂಸದೆ ಸುಮಲತಾ ನೀಡಿದ್ದ ಹೇಳಿಕೆ ನಂತರ ವಿವಾದ ಹೊತ್ತಿಕೊಂಡಿತ್ತು. ಪ್ರತಿಕ್ರಿಯೆ ನೀಡುವ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದ ಮಾತು ವಾತಾವರಣವನ್ನು ಬಿಸಿ ಮಾಡಿತ್ತು. ಅಕ್ರಮ ಗಣಿಗಾರಿಕೆ ವಿರುದ್ಧ ನಮ್ಮ ಸಮರ ನಿರಂತರ ಎಂದು ಸುಮಲತಾ ಘೋಷಣೆ ಮಾಡಿದ್ದರು. Mandya illigal mining issue HDK Fans Slams Sumalatha by Sharing photos of HD Devegowda and HD Kumaraswamy ಕೈಕಟ್ಟಿ ನಿಲ್ಲುವುದು ನಮ್ಮ ಸಂಸ್ಕೃತಿ; ಸುಮಲತಾಗೆ ಜೆಡಿಎಸ್ ತಿರುಗೇಟು