ರಾಜ್ಯದ ನಾಲ್ವರು ನೂತನ ಕೇಂದ್ರ ಸಚಿವರಿಂದ ಅಧಿಕಾರ ಸ್ವೀಕಾರ

First Published Jul 8, 2021, 5:55 PM IST

 ಕೇಂದ್ರ ಸರ್ಕಾರ ಒಟ್ಟು 43 ನೂತನ ಸಚಿವರನ್ನ ಕ್ಯಾಬಿನೆಟ್​​ಗೆ ಸೇರಿಸಿಕೊಂಡಿದ್ದು ಖಾತೆ ಹಂಚಿಕೆ ಮಾಡಿದೆ. ಈ ಪೈಕಿ ರಾಜ್ಯದ ನಾಲ್ವರು ನೂತನ ಸಚಿವರಿಗೂ ಖಾತೆ ಹಂಚಿಕೆ ಮಾಡಲಾಗಿದ್ದು, ಇಂದು (ಗುರುವಾರ) ಅವರು ತಮ್ಮ ಇಲಾಖೆಯ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕಾರ ಮಾಡಿದರು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನಿನ್ನೆ (ಜುಲೈ.07)ರಂದು ಮೋದಿ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು (ಗುರುವಾರ) ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದರು.
undefined
ನವೀಕೃತ ಇಂಧನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವ ಬೀದರ್ ಸಂಸದ ಭಗವಂತ್ ಖೂಬಾ ಅವರೂ ಸಹ ಅಧಿಕಾರ ಸ್ವೀಕರಿಸಿದರು.
undefined
ಸಾಮಾಜಿಕ ನ್ಯಾಯ ಮತ್ತು ಸಬಲೀಕರ ರಾಜ್ಯ ಖಾತೆ ಸಚಿವರಾಗಿ ಚಿತ್ರದುರ್ಗ ಸಂಸದ ಎ. ನಾರಾಯಣಸ್ವಾಮಿ ಅಧಿಕಾರ ಸ್ವೀಕಾರ ಮಾಡಿದರು
undefined
ಕೌಶಲ್ಯಾಭಿವೃದ್ಧಿ , ಉದ್ಯಮ ಮತ್ತು ಎಲೆಕ್ಟ್ರಾನಿಕ್ಸ್, ಮಾಹಿತಿ ರಾಜ್ಯ ಖಾತೆ ಸಚಿವರಾಗಿ ಕರ್ನಾಟಕ ರಾಜ್ಯಸಭಾ ಸದಸ್ಯೆ ರಾಜೀವ್ ಚಂದ್ರಶೇಖರ್ ಸಹ ಇಂದು (ಗುರುವಾರ) ಅಧಿಕಾರ ಸ್ವೀಕಾರ ಮಾಡಿದರು.
undefined
ಅಧಿಕಾರ ಸ್ವೀಕರಿಸಿದ ಬಳಿಕ ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಗೆ ಶುಭಕೋರಿದ ಧರ್ಮೇಂದ್ರ ಪ್ರಧಾನ್ ಶುಭಕೋರಿದರು
undefined
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರೂ ಸಹ ನೂತನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಶುಭಕೋರಿದರು.
undefined
. ಅನುಭವಿ ರಾಜಕಾರಣಿ ಆಗಿರುವ ರಾಜೀವ್ ಚಂದ್ರಶೇಖರ್ ಪುದುಚೇರಿಯ ಬಿಜೆಪಿ ಸಹ-ಉಸ್ತುವಾರಿ ಆಗಿದ್ದರು. ರಾಜೀವ್ ಚಂದ್ರಶೇಖರ್ ಅವರು ತಂತ್ರಜ್ಞಾನ ಉದ್ಯಮಿ ಮತ್ತು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರಾಗಿದ್ದಾರೆ,
undefined
ಉದ್ಯಮಿ, ಮತ್ತು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ (ರಾಜ್ಯಸಭೆ) ಸಂಸತ್ ಸದಸ್ಯ. 2006- ಕರ್ನಾಟಕದ ನಗರ ಬೆಂಗಳೂರು ಪ್ರತಿನಿಧಿಸಿ ರಾಜ್ಯಸಭೆಗೆ ಚುನಾಯಿತರಾದರು. ರಾಜ್ಯಸಭೆಯಲ್ಲಿ ತಮ್ಮ ಮೊದಲ ಅವಧಿಯಲ್ಲಿ, ರಾಜೀವ್ ಅವರು ಆಡಳಿತ ಸುಧಾರಣೆಗಳು, ಸಂಸ್ಥೆಗಳ ಕಟ್ಟಡ, ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗಳ ಕಲ್ಯಾಣಕ್ಕಾಗಿ ವಿಶೇಷವಾಗಿ ಅನುಭವಿಗಳು ಮತ್ತು ಅವರ ಕುಟುಂಬಗಳನ್ನು ಬಲವಾಗಿ ಪ್ರತಿಪಾದಿಸಿದರು.
undefined
click me!