ಟ್ರಾಕ್ಟರ್ ಚಾಲನೆ ಮಾಡಿ ಗಮನಸೆಳೆದ ಕುಮಾರಸ್ವಾಮಿ, ಆದ್ರೆ ಒಂದು ಮರೆತ್ರು..!

First Published | Jun 2, 2020, 5:55 PM IST

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಟ್ರಾಕ್ಟರ್‌ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಉದ್ಘಾಟನೆ ಮಾಡಿದ ಕುಮಾರಸ್ವಾಮಿ ಈ ವೇಳೆ ಅಲ್ಲಿದ್ದ ಟ್ರಾಕ್ಟರನ್ನು ಏರಿದರು. ಈ ವೇಳೆ ಒಂದು ಮರೆತರು.

ಮಾಜಿ ಸಿಎಂಎಚ್‌ಡಿ ಕುಮಾರಸ್ವಾಮಿಟ್ರಾಕ್ಟರ್‌ ಚಾಲನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ರಾಮನಗರಜಿಲ್ಲೆಯ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಉದ್ಘಾಟನೆ ಮಾಡಿದ ಕುಮಾರಸ್ವಾಮಿ ಈ ವೇಳೆ ಅಲ್ಲಿದ್ದ ಟ್ರಾಕ್ಟರನ್ನು ಏರಿದರು.
Tap to resize

ಇನ್ನು ಪುತ್ರ ನಿಖಿಲ್ ಕುಮಾರಸ್ವಾಮಿ ಸಹ ಟ್ರ್ಯಾಕ್ಟರ್ ಚಾಲನೆ ಮಾಡಿದರು.
ನಾನು ರೈತ ಬ್ರದರ್ ಈ ಹಿಂದೆ ಹೊಲ ಉಳುಮೆ ಮಾಡುತ್ತಿದೆ. ಇತ್ತೀಚೆಗೆ ಮರೆತಿದ್ದೇನೆ ಅಷ್ಟೆ ಎನ್ನುತ್ತಾ ಟ್ರಾಕ್ಟರ್ ಚಾಲನೆ ಮಾಡಿದರು..
ಟ್ರಾಕ್ಟರ್ ಸ್ಟೇರಿಂಗ್ ಹಿಡಿದು ಚಾಲನೆ ಮಾಡುವ ಮೂಲಕ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಆದ್ರೆ, ಈ ವೇಳೆ ಸಾಮಾಜಿಕ ಅಂತರ ಕಾಪಾಡುವುದನ್ನು ಮರೆತರು
ಅಪ್ಪನ ನಂತರ ಟ್ರ್ಯಾಕ್ಟರ್ ಚಾಲನೆ ಮಾಡಿದ ಬಳಿಕನಿಖಿಲ್ ಕುಮಾರಸ್ವಾಮಿ ಮಕ್ಕಳೊಂದಿಗೆ ಫೋಟೋಗೆ ಪೋಸ್ ನೀಡಿದರು.
ಕುಮಾರಸ್ವಾಮಿ ಅವರು ಇಂತಹ ಕಾರ್ಯಕ್ರಮಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಜನರು ಪರಿಚಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಮನಗರ ಅಖಾಡಕ್ಕಿಳಿಸುವ ಪ್ಲಾನ್ ಮಾಡಿದ್ದಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
ಅದರಂತೆ ನಿಖಿಲ್ ಕುಮಾರಸ್ವಾಮಿ ಹ ರಾಮನಗರ ಜಿಲ್ಲಾ ರಾಜಕೀಯದಲ್ಲಿ ಫುಲ್ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

Latest Videos

click me!