ಗಲಭೆ ನಡೆದಿದ್ದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿಯಲ್ಲಿ ಸಿದ್ದರಾಮಯ್ಯ ರೌಂಡ್ಸ್: ಬಳಿಕ ಹೇಳಿದ್ದು ಹೀಗೆ

First Published Sep 2, 2020, 5:08 PM IST

ಕೋವಿಡ್‌ನಿಂದ ಮಗುಣಮುಖರಾಗಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯ ಸಿದ್ದರಾಮಯ್ಯ ಅವರು ಗಲಭೆ ನಡೆದಿದ್ದ ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ  ಡಿಜೆ ಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದೇ ವೇಳೆ ಗಲಭೆಯಲ್ಲಿ ಆಹುತಿಯಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ನಿವಾಸವನ್ನು ವೀಕ್ಷಣೆ ಮಾಡಿದರು.

ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಿದ ಸಿದ್ದರಾಮಯ್ಯ
undefined
ಶಾಸಕ ಶ್ರೀನಿವಾಸಮೂರ್ತಿ ಅವರ ಸುಟ್ಟು ಹೋದ ಮನೆಯನ್ನು ಪರಿಶೀಲನೆ ಮಾಡಿದರು.
undefined
ಜೊತೆಗೆ ಡಿಜೆಹಳ್ಳಿ ಪೊಲೀಸ್ ಠಾಣೆಗೂ ಎಂಟ್ರಿ ಕೊಟ್ಟು ಘಟನೆಯ ಬಗ್ಗೆ ಮಾಹಿತಿಗಳನ್ನ ಪಡೆದುಕೊಂಡರು.
undefined
ಬಳಿಕ ಮಾತನಾಡಿದ ಅವರು, ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ, ನಡೆಯಲಿ, ಈಗಲೂ ನ್ಯಾಯಾಂಗ ತನಿಖೆ ಆಗಬೇಕು ಅನ್ನೋದು ನನ್ನ ಒತ್ತಾಯ. ಹಾಲಿ ಹೈಕೋರ್ಟ್ ‌ನ್ಯಾಯಾಧೀಶರಿಂದ ತನಿಖೆ ಆಗಬೇಕು. ಶಾಸಕ ಶ್ರೀನಿವಾಸ ಮೂರ್ತಿಗೆ ಸರ್ಕಾರ ಸೂಕ್ತ ಭದ್ರತೆ ಕೊಡಬೇಕು ಎಂದು ಒತ್ತಾಯಿಸಿದರು
undefined
ಪ್ರಕರಣದಲ್ಲಿ ಯಾವ ಕಾರ್ಪೋರೇಟರ್ ಹೆಸರನ್ನೂ ನಾನು ಹೇಳಲ್ಲ. ಈಗ ಪ್ರಾರಂಭಿಕ ತನಿಖೆ ನಡೆಯುತ್ತಿದೆ. ಬಿಜೆಪಿ ಅವರ ತರಹ ಸುಮ್ಮನೆ ಯಾರ ಮೇಲೂ ನಾನು ಆರೋಪ ಮಾಡುವುದಿಲ್ಲ, ತನಿಖೆ ನಡೆಯುತ್ತಿದೆ ,ಸತ್ಯ ಹೊರಬರುತ್ತದೆ ಎಂದು ಹೇಳಿದರು.
undefined
ನವೀನ್ ಎಂಬಾತ ಪ್ರವಾದಿ ಮೇಲೆ ಅಪಮಾನ ಮಾಡುವ ಪೋಸ್ಟ್ ಮಾಡಿದ್ದ. ಆರು ಗಂಟೆಗೆ ಪೋಸ್ಟ್ ಹಾಕಿದ್ದ. 7.45 ಕ್ಕೆ ಅವನ ವಿರುದ್ದ ದೂರು ಕೊಟ್ಟಿದ್ದರು. ನಂತರ ಡಿಸಿಪಿ ಠಾಣೆಗೆ ಬಂದಿದ್ದರು. ಈ ವೇಳೆ ಅಖಂಡ ಶ್ರೀನಿವಾಸಮೂರ್ತಿ ಮನೆ ಹಾಗೂ ನವೀನ್ ಮನೆಗೆ ಜನ ನುಗ್ಗಿದ್ದಾರೆ. ಅಖಂಡ ಮನೆಗೆ ಬೆಂಕಿ ಹಾಕಿದ್ದಾರೆ. ಈ ವೇಳೆಯಲ್ಲಿ ನವೀನ್ ಮನೆಯಲ್ಲಿ ಇದ್ದ ಎನ್ನುವ ಮಾಹಿತಿ ಇದೆ. ಎಫ್​ಐಆರ್​ ಆಗಬೇಕು ಅಂತ ದೂರು ಕೊಟ್ಟವರು ಒತ್ತಾಯ ಮಾಡಿದ್ದಾರೆ. ಕೂಡಲೇ ಆತನನ್ನು ಬಂಧಿಸಿದ್ದರೆ ಇಷ್ಟು ಗಲಾಟೆ ಆಗುತ್ತಿರಲಿಲ್ಲ ಅನ್ನಿಸುತ್ತೆ ಎಂದು ಸಿದ್ದರಾಮಯ್ಯ ಅಭಿಪ್ರಾಪಟ್ಟರು.
undefined
click me!