40 ವರ್ಷಗಳ ನಂತರ ಅದೇ ಸ್ಥಳಕ್ಕೆ ಹೋಗಿ ಬಾಲ್ಯದ ದಿನಗಳನ್ನು ನೆನೆದ ಡಿಕೆ ಶಿವಕುಮಾರ್

First Published | Jun 22, 2020, 5:16 PM IST

ಸವಿ ಸವಿ ನೆನಪು ಸಾವಿರ ನೆನಪು. ಸಾವಿರ ಕಾಲಕು ಸವೆಯದ ನೆನಪು ಎನ್ನುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು 40 ವರ್ಷಗಳ ನಂತರ ಅದೇ ಸ್ಥಳಕ್ಕೆ ಹೋಗಿ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.  ಸದಾ ರಾಜಕೀಯ ಜಂಜಾಟದಲ್ಲೇ ಮುಳುಗಿ, ಬ್ಯುಸಿ ಜೀವನದಲ್ಲೇ ಮುಳುಗಿಹೋಗಿರೋ ಡಿಕೆಶಿಗೆ, ಅವರ ಜೀವನದಲ್ಲಿ ಮತ್ತೆ ಬಾಲ್ಯದ ಕ್ಷಣಗಳನ್ನ ಮರುಕಳಿಸುವಂತೆ ಮಾಡಿದೆ ಈ ಒಂದು ಸ್ಥಳ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ತಮ್ಮ ಸ್ವಕ್ಷೇತ್ರ ಕನಕಪುರದ ದೊಡ್ಡಹಾಲಹಳ್ಳಿ ಬಳಿ ಇರುವ ಕಾವೇರಿ ನದಿಯಲ್ಲಿ ಈಜಾಡಿ 40 ವರ್ಷಗಳ ಹಳೆಯ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.
ಶಾಲಾ ಹಾಗೂ ಕಾಲೇಜು ದಿನಗಳಲ್ಲಿ ತಂದೆಯೊಂದಿಗೆ ಇದೇ ಸ್ಥಳದಲ್ಲಿ ಮೀನು ಹಿಡಿಯುತ್ತಿದ್ದ ಮತ್ತು ನದಿಯಲ್ಲಿ ಈಜಾಡುತ್ತಿದ್ದ ಕ್ಷಣಗಳು ಮತ್ತೊಮ್ಮೆ ನೆನಪಿಸಿಕೊಂಡರು.
Tap to resize

ಸೂರ್ಯ ಗ್ರಹಣ ಮುಗಿದ ನಂತರ, ಕುಟುಂಬದೊಂದಿಗೆ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
ರಾಜಕೀಯ ಕಿರಿಕಿರಿ, ಸಂಕಟಗಳೆಲ್ಲವನ್ನ ಬದಿಗಿಟ್ಟು ಸಿಮೆಂಟ್ ಬೆಂಚಿನ ಮೇಲೆ ಏಕಾಂಗಿಯಾಗಿ ಕುಳಿತು ಮೈಮರೆತಿದ್ದಾರೆ.
ಸದಾ ರಾಜಕೀಯ ಜಂಜಾಟದಲ್ಲೇ ಮುಳುಗಿ, ಬ್ಯುಸಿ ಜೀವನದಲ್ಲೇ ಮುಳುಗಿಹೋಗಿರೋ ಡಿಕೆಶಿ ಫ್ಯಾಮಿಲಿ ಜತೆ ಕಾಲಕಳೆದರು.
ಇದೇ ವೇಳೆಮಾಜಿ ಸಚಿವ,ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಆರ್.ಸಿ.ಬಿ ಕೊಡೆಯ ಜೊತೆ ಕಾಣಿಸಿಕೊಂಡು ಗಮನಸೆಳೆದರು.
ಬಾಲ್ಯದಲ್ಲಿ ತಂದೆಯ ಜೊತೆ ಬಂದು ನದಿಯಲ್ಲಿ ಈಜಾಡುತ್ತಿದ್ದದ್ದನ್ನ ನೆನಪಿಸಿಕೊಂಡು ಕ್ಷಣಕಾಲ ಸಂತೋಷಗೊಂಡಿದ್ದಾರೆ.
40 ನಂತರ ಕಾವೇರಿ ನದಿಯಲ್ಲಿ ಈಜಾಡಿದನ್ನ ಡಿಕೆಶಿ ಕುಟುಂಬಸ್ಥರು ನೋಡಿ ಕಣ್ತುಂಬಿಕೊಂಡಿದ್ದಾರೆ.

Latest Videos

click me!