ಮದ್ವೆ ಮಾತುಕತೆ ಮುಗಿಸಿದ ಡಿಕೆಶಿ-ಕೃಷ್ಣ ಕುಟುಂಬ: ಹಾರ ಬದಲಾಯಿಸಿಕೊಂಡ ಅಮರ್ಥ್ಯ-ಐಶ್ವರ್ಯ

First Published | Jun 15, 2020, 5:09 PM IST

ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು. ವಿವಾಹ ಸಂಪ್ರದಾಯದ ಮುಂದುವರೆದ ಭಾಗವಾಗಿ ಇಂದು (ಸೋಮವಾರ) ಸದಾಶಿವನರದಲ್ಲಿರುವ ಡಿಕೆಶಿ ನಿವಾಸಕ್ಕೆ ದಿವಂಗತ ಸಿದ್ಧರ್ಥ್ ಪತ್ನಿ, ಕೃಷ್ಣ ಪುತ್ರಿ ಮಾಳವಿಕಾ ಸೇರಿದಂತೆ ಎಸ್‌ಎಂಕೆ ಕುಟುಂಬ ತೆರಳಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ್ದಾರೆ. ಈ ವೇಳೆ ಐಶ್ವರ್ಯ ಮತ್ತು ಅಮರ್ಥ್ಯ ಒಬ್ಬರಿಗೊಬ್ಬರು ಹಾರ ಬದಲಿಸಿಕೊಂಡರು.

ಭಾನುವಾರ ಅಷ್ಟೇ ಡಿಕೆ ಶಿವಕುಮಾರ್ ಫ್ಯಾಮಿಲಿ ಎಸ್‌ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿ ವರ ನೋಡುವ ಶಾಸ್ತ್ರ ಮುಗಿಸಿತ್ತು. ಇದೀಗ ಎಸ್‌ಎಂ ಕೃಷ್ಣ ಕುಟುಂಬ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದರು..
ಅಮರ್ಥ್ಯ ಹಾಗು ಐಶ್ವರ್ಯ ಮದುವೆ ಮಾತುಕತೆ ನಿಶ್ಚಯ ಮಾಡಿಕೊಂಡ ಎರಡು ಕುಟುಂಬ ವರ್ಗದವರು
Tap to resize

ಹಾರ ಬದಲಾಯಿಸಿಕೊಂಡ ನವ ಜೋಡಿ ಅಮರ್ಥ್ಯ ಹಾಗು ಐಶ್ವರ್ಯ
ವರ ಮತ್ತು ಹುಡುಗಿ ನೋಡುವ ಶಾಸ್ತ್ರಗಳು ಮುಗಿದಿದ್ದು, ಮುಂದಿನ ಕಾರ್ಯಕ್ರಮ ನಿಶ್ಚಿತಾರ್ಥ
ಆಷಾಢ ಮುಗಿದ ಬಳಿಕ ಅಗಸ್ಟ್ ಮೊದಲ ವಾರದಲ್ಲಿ ನಿಶ್ಚಿತಾರ್ಥ ನಡೆಯುವ ಸಾಧ್ಯತೆಗಳಿವೆ.
ಕೊಪ್ಪ ತಾಲೂಕಿನ ಗೌರಿಗದ್ದೆಯ ವಿನಯ್ ಅವಧೂತರ ಅಣತಿ ಮೇರೆಗೆ ಈ ವಿವಾಹ ನೆರವೇರಲಿದೆ.
ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ವೈವಾಹಿಕ ಸಂಬಂಧ ಬೆಳೆಸಿವೆ.

Latest Videos

click me!