ಬೆಂಗ್ಳೂರಲ್ಲಿ ಬಳ್ಳಾರಿ ಯುವಕ ಸಾವು: ಮೃತದೇಹ ಕೊಂಡೊಯ್ಯಲು ಪರದಾಡುತ್ತಿದ್ದವರ ಪಾಲಿಗೆ ಬಂದ ಧರ್ಮರಾಯ

First Published | Feb 21, 2020, 7:39 PM IST

ಬೆಂಗಳೂರು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ದಾನ ಮಾಡುವುದರಲ್ಲಿ ಒಂದು ಕೈಮುಂದು. ಯಾವ ಜಾತಿ, ಯಾವ ಧರ್ಮ ನೋಡದ ಧರ್ಮರಾಯ ಕಷ್ಟ ಅಂತ ಬಂದವರಿಗೆ ಬರಿಗೈಯಿಂದ ಕಳುಹಿಸುವುದಿಲ್ಲ ಎನ್ನುವುದು ಗೊತ್ತಿರವ ವಿಚಾರವೇ. ಇದೀಗ ಯುವಕನೊಬ್ಬ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆತನ ಮೃತ ದೇಹವನ್ನು ಬಳ್ಳಾರಿಗೆ ತೆಗೆದುಕೊಂಡು ಹೋಗಲು ದುಡ್ಡಿಲ್ಲದೇ ಪರದಾಡುತ್ತಿದ್ದವರ ಪಾಲಿಗೆ ಜಮೀರ್ ದೇವರಂತೆ ನೆರವಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಮೂಲದ ಯುವಕನೊಬ್ಬ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ವೇಳೆ ಕಟ್ಟಡ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.
ಬೆಂಗಳೂರಿನ ಶೇಖರ್ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಬಿಲ್ ಕಟ್ಟಲು ದುಡ್ಡಿಲ್ಲದೇ ಪರದಾಡುತ್ತಿದ್ದವರಿಗೆ ಜಮೀರ್ ಸಹಾಯ ಮಾಡಿದ್ದಾರೆ.
Tap to resize

ಆಸ್ಪತ್ರೆಯ ಬಿಲ್ ಕಟ್ಟಿ ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದರು
ಮೃತ ದೇಹವನ್ನ ಬಳ್ಳಾರಿಗೆ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಜತೆಗೆ ತಾವೇ 1 ಲಕ್ಷ ರೂ. ಆಸ್ಪತ್ರೆಯ ಬಿಲ್ ಕಟ್ಟಿದ್ದಾರೆ.
ಮತ್ತೊಂದೆಡೆ ಹಾಸ್ಮಾಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫೈಸಲ ಪಾಷ ಎನ್ನುವರ ಆರೋಗ್ಯ ವಿಚಾರಿಸಿದರು.
ಜಮೀರ್ ಅಹಮ್ಮದ್ ಖಾನ್ ಹಣ ಸಹಾಯ ಮಾಡುವುದಲ್ಲಿ ಒಂದು ಕೈ ಮುಂದು ಅಂತಾನೆ ಹೇಳಬಹುದು.
ಬೇರೆ-ಬೇರೆ ಜಿಲ್ಲಾ ಪ್ರವಾಸ ವೇಳೆ ಕಷ್ಟ ಅಂತ ಬಂದು ಹೇಳಿಕೊಂಡಾಗ ಧನ ಸಹಾಯ ಮಾಡಿಯೇ ಕಳುಹಿಸುತ್ತಾರೆ.
ಅಷ್ಟೇ ಅಲ್ಲದೇ ಮಾನವೀಯತೆ ಜತೆಗೆ ಸಭೆ ಸಮಾರಂಭಗಳಲ್ಲಿ ಓಡಾಡುತ್ತಾ ಜಮೀರ್ ಅಹ್ಮದ್ ಖಾನ್ ಸರಳ ರಾಜಕಾರಣಿ ಎನಿಸಿಕೊಂಡಿದ್ದಾರೆ.
ಸಹಾಯ, ಮಾನವೀಯತೆ ಇರುವ ಜಮೀರ್ ಅಹ್ಮದ್ ಖಾನ್ ಅವರನ್ನ ಧರ್ಮರಾಯ ಅಂತ ಹೇಳಿದ್ರೂ ತಪ್ಪಲ್ಲಾ.

Latest Videos

click me!