Published : Feb 21, 2020, 04:14 PM ISTUpdated : Feb 21, 2020, 04:19 PM IST
ಇಂದು (ಶುಕ್ರವಾರ) ಮಹಾ ಶಿವರಾತ್ರಿ ಅಂಗವಾಗಿ ನೂತನ ಸಚಿವ ರಮೇಶ್ ಜಾರಕಿಹೊಳಿ ಮತ್ತು ತಂಡ ಶಿರಡಿಗೆ ಭೇಟಿ ನೀಡಿದ್ದು ಸಾಯಿಬಾಬಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಗುಂಪಿನಲ್ಲಿ ಹೊಸ ಶಾಸಕರೊಬ್ಬರು ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೇ ರಮೇಶ್ ಜಾರಕಿಹೊಳಿ ತಂಡದಲ್ಲಿ ಹೊಸ ಮುಖಗಳು ಕಾಣಿಸಿಕೊಳ್ಳುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.ಬಿಜೆಪಿಯಲ್ಲಿ ಗುಂಪುಗಾರಿಕೆ ಶುರುವಾಯ್ತಾ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ.