ಅಮೆರಿಕ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕಿ ಕುಸಮಾ, ಕಾಲೇಜು ಹುಡುಗಿ ಎಂದ ನೆಟ್ಟಿಗರು!

Published : Oct 12, 2024, 06:26 PM IST

ಕಾಂಗ್ರೆಸ್ ನಾಯಕಿ, ದುರಂತ ಅಂತ್ಯ ಕಂಡ ಅಧಿಕಾರಿ ಡಿಕೆ ರವಿ ಪತ್ನಿ ಕುಸುಮಾ ಇದೀಗ ಅಮೆರಿಕ ಪ್ರವಾಸದಲ್ಲಿದ್ದಾರೆ. ಆದರೆ ಕುಸುಮಾ ಫೋಟೋ ನೋಡಿದ ಅಭಿಮಾನಿಗಳು, ಕಾಲೇಜು ಗರ್ಲ್ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರವಾಸ ಯಾರ ಕೃಪೆ ಅನ್ನೋದನ್ನು ನೆಟ್ಟಿಗರು ಸೂಚ್ಯವಾಗಿ ಹೇಳಿದ್ದಾರೆ.

PREV
17
ಅಮೆರಿಕ ಪ್ರವಾಸದಲ್ಲಿ ಕಾಂಗ್ರೆಸ್ ನಾಯಕಿ ಕುಸಮಾ, ಕಾಲೇಜು ಹುಡುಗಿ ಎಂದ ನೆಟ್ಟಿಗರು!

ಕಾಂಗ್ರೆಸ್ ನಾಯಕಿಯಾಗಿ ಅದರಲ್ಲೂ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಶಾಸಕ ಮುನಿಯಪ್ಪ ವಿರುದ್ಧ ಚುನಾವಣಾ ರಣಕಹಳೆ ಊದಿದ ಕುಸಮಾ ಹನುಮಂತರಾಯಪ್ಪ ಇದೀಗ ಸೋಶಿಯಲ್ ಮೀಡಿಯಾ ಮೂಲಕ ಮತ್ತೆ ಸದ್ದು ಮಾಡಿದ್ದಾರೆ. ಸದ್ಯ ಅಮೆರಿಕ ಪ್ರವಾಸದಲ್ಲಿರುವ ಕುಸುಮಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

27

ಅಮೆರಿಕದ ಸುಂದರ ಪ್ರವಾಸಿ ತಾಣಗಳಲ್ಲಿ ತೆಗೆದ ಫೋಟೋಗಳನ್ನು ಹಂಚಿಕೊಂಡಿರುವ ಕುಸುಮಾ ದೇಶ ಸುತ್ತು ಕೋಶ ಓದು, ಜೀವನದ ಹಲವು ಅಧ್ಯಾಯಗಳಿಗೆ ಮುನ್ನುಡಿ ಬರೆದ ದೇಶ ಅಮೆರಿಕ ಎಂದು ಬರೆದುಕೊಂಡಿದ್ದಾರೆ. ಕುಸುಮಾ ಫೋಟೋ ನೋಡಿದ ಜನ, ಕಾಲೇಜು ಹುಡುಗಿಯಂತೆ ಕಾಣಿಸುತ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ.

37

ಪ್ರವಾಸದಲ್ಲಿ ನ್ಯೂಯಾರ್ಕ್‌ನ ಆರ್ಟೆಕ್ ಹೌಸ್‌ಗೆ ಭೇಟಿ ನೀಡಿದ್ದಾರೆ. ಕಲೆ, ವಿಜ್ಞಾನ, ತಂತ್ರಜ್ಞಾನಗಳ ಸೆಲೆಯಾಗಿರುವ ಅರ್ಟೆಕ್ ಹೌಸ್ ಕುಸುಮಾರನ್ನು ಹೆಚ್ಚು ಆಕರ್ಷಿಸಿದೆ. ಇದೇ ವೇಳೆ ಇದು ಬಹುಸಂವೇದನಾ ಅನುಭವಗಳನ್ನು ರಚಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಸಂವಾದಾತ್ಮಕ, ಡಿಜಿಟಲ್ ಪ್ರದರ್ಶನಗಳನ್ನು ಒಳಗೊಂಡಿದೆ ಎಂದಿದ್ದಾರೆ.  

47

ಕುಸಮಾ ವಿದೇಶ ಪ್ರವಾಸಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ವೇಳೆ ಕುಸುಮಾ ರಾಜರಾಜೇಶ್ವರಿ ನಗರದಲ್ಲಿ ಜೈಲು ಸೇರಿರುವ ಶಾಸಕ ಮುನಿರತ್ನ ವಿರುದ್ಧದ ಹೋರಾಟವನ್ನು ಶ್ಲಾಘಿಸಿದ್ದಾರೆ. ಕ್ಷೇತ್ರದ ಜನರ ಸಂಪರ್ಕ ಹಾಗೂ ಜನಪರ ಸೇವೆ ಮಾಡುತ್ತಿರುವ ಕುಸಮಾಗೆ ಹಲವು ಅಭಿಮಾನಿಗಳು ಶಹಬ್ಬಾಷ್ ಎಂದಿದ್ದಾರೆ. 

57

ಇದೇ ವೇಳೆ ಕೆಲವರು ಈ ಅಮೆರಿಕಾ ಪ್ರವಾಸ ಕಾಂಗ್ರೆಸ್ ನಾಯಕರ ಕೃಪೆ ಎಂದಿದ್ದಾರೆ. ಇದೇ ವೇಳೆ ಹಳೇ ವಿಚಾರ ಕೆದಕಿದ್ದಾರೆ. ಕಾಂಗ್ರೆಸ್ ಪಕ್ಷ ಒರ್ವ ನಿಷ್ಠಾವಂತ ಅಧಿಕಾರಿ(ಡಿಕೆ ರವಿ)ಗೆ ದುರಂತ ಅಂತ್ಯ ಕಾಣಿಸಿದೆ. ಅದೇ ಪಕ್ಷ ಸೇರಿಕೊಂಡ ಅಧಿಕಾರಿ ಪತ್ನಿಗೆ ದೇವರು ಸೋಲಿನ ಪಾಠ ನೀಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

67

2020ರಲ್ಲಿ ಕುಸುಮಾ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಕುಸುಮಾ ತಂದೆ ಹನುಮಂತರಾಯಪ್ಪ ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಡಿಕೆ ರವಿ ಸಮಾಜ ಸೇವೆಯೇ ನನಗೆ ಪ್ರೇರಣೆ. ಅವರ ಹಲವು ಸಮಾಜ ಸೇವೆಗಳಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದರು.

77

ಇದೀಗ ಅಮೆರಿಕ ಪ್ರವಾಸದಲ್ಲಿರುವ ಕುಸಮಾ ಹನುಮಂತರಾಯಪ್ಪ, ಎಷ್ಟು ದಿನ ಪ್ರವಾಸ ಕೈಗೊಂಡಿದ್ದಾರೆ ಅನ್ನೋ ಕುರಿತು ಮಾಹಿತಿ ಲಭ್ಯವಿಲ್ಲ.  ಆದರೆ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ವಿದೇಶಿ ಪ್ರವಾಸದ ಸಂಭ್ರಮ ಹಂಚಿಕೊಂಡಿದ್ದಾರೆ.

Read more Photos on
click me!

Recommended Stories