ವೃತ್ತಿಜೀವನದಲ್ಲಿ ಯಾವ ಮಟ್ಟಕ್ಕೆ ಹೋದರೂ, ಕಾಲೇಜು ದಿನಗಳನ್ನು ನೆನಯದೇ ಇರುವ ವ್ಯಕ್ತಿಗಳೇ ಇರಲಿಕ್ಕಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ತಮ್ಮ ಕಾಲೇಜು ದಿನಗಳ ಸವಿ ಸವಿ ನೆನಪನ್ನನ್ನು ಹಂಚಿಕೊಂಡಿದ್ದಾರೆ.
ರಾಜಕೀಯದ ಜಂಜಾಟದ ನಡುವೆಯೇ ಡಿಕೆ ಶಿವಕುಮಾರ್ ಕಾಲೇಜು ದಿನಗಳಲ್ಲಿ ತಾವು ಓಡಿಸ್ತಿದ್ದ ಬೈಕ್‌ನ ಪ್ರೇಮವನ್ನು ಬಿಚ್ಚಿಟ್ಟಿದ್ದಾರೆ. ಇಂದು ಐಷಾರಾಮಿ ಕಾರುಗಳಲ್ಲಿ ಅವರು ಓಡಾಡ್ತಾ ಇದ್ದರೂ, 40 ವರ್ಷಗಳ ಹಿಂದೆ ಓಡಾಡುತ್ತಿದ್ದ ಬೈಕ್‌ನ ಮೇಲಿನ ಪ್ರೇಮವನ್ನು ಅವರು ತೋರಿಸಿದ್ದಾರೆ.
40 ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಓಡಿಸ್ತಿದ್ದ ಬೈಕ್‌ನ ಬಗ್ಗೆ ಟ್ವಿಟರ್ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ, ಒಮ್ಮೆ ರಾಜಕೀಯ ಪ್ರವೇಶವಾದ ಬಳಿಕ ಈ ಬೈಕ್ ತುಕ್ಕು ಹಿಡಿದು ಮೂಲೆಗೆ ಸೇರಿತ್ತು. ಪ್ರತಿ ದಿನ ಕಣ್ಣಿಗೆ ಬೀಳುತ್ತಿದ್ದ ಈ ಬೈಕ್‌ಗೆ ಇತ್ತೀಚೆಗೆ ಹೊಸ ರೂಪ ನೀಡಲು ತೀರ್ಮಾನ ಮಾಡಿದ್ದರು.
ಕಾಲೇಜು ದಿನಗಳಲ್ಲಿ ಡಿಸಿಎಂ ಓಡಿಸುತ್ತಿದ್ದ ಬೈಕ್ ಮೇಲಿನ ಭಾವನಾತ್ಮಕ ಸಂಬಂಧ, ಪ್ರೀತಿ, ಹಳೆಯ ನೆನಪುಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.
ತುಕ್ಕು ಹಿಡಿದು ಮೂಲೆ ಸೇರಿದ್ದ ಯಜ್ಜಿ ಬೈಕ್ (Yezdi Bike) ಹೊಸ ರೂಪಕಂಡು ಡಿಸಿಎಂ ಫುಲ್ ಖುಷ್ ಆಗಿದ್ದು, ಕೀ ಪಡೆದು ಬೈಕ್‌ಅನ್ನು ಅಲ್ಲಿಯೇ ಸ್ಟಾರ್ಟ್ ಮಾಡಿದ್ದಾರೆ.
ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಯಜ್ಜಿ ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿದ್ದಾರೆ
ಸದಾಶಿವನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಯೆಜ್ಡಿ ಬೈಕ್‌ಅನ್ನು ಸರ್ಪೈಸ್ ಆಗಿ ತಂದು ನಿಲ್ಲಿಸಿದಾಗ ಅದನ್ನು ಕಂಡು ಡಿಸಿಎಂ ಫುಲ್ ಖುಷ್ ಆಗಿದ್ದಾರೆ.
ತಾವೇ ಸ್ವತಃ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಡಿಕೆಶಿ ಖುಷಿ ಪಟ್ಟಿದ್ದು, ಬೈಕ್‌ನ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
"ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ" ಎಂದು ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಬೈಕಿನ ಹೊಸ ಲುಕ್ ಫೋಟೊವನ್ನು ಎಕ್ಸ್‌ನಲ್ಲಿನ ಡಿಕೆ ಶಿವಕುಮಾರ್ ಪೋಸ್ಟ್ ಮಾಡಿದ್ದಾರೆ. ಕಪ್ಪು ಬಣ್ಣದ ಬೈಕ್ ಇದಾಗಿದೆ.
ಇದು ನನ್ನ ಮೊದಲ ಬೈಕ್, ಇದರೊಂದಿಗೆ ಸಾವಿರಾರು ನೆನಪುಗಳು ಬೆಸೆದುಕೊಂಡಿವೆ. ಆ ನೆನಪಿನ ಪುಟಗಳಿಗೆ ಹೋಗಿ ಬಂದ ಅನುಭವವಾಯಿತು" ಎಂದು ಅವರು ಬರೆದುಕೊಂಡಿದ್ದಾರೆ.